ಇತ್ತೀಚಿಗೆ ದಿನದಿಂದ ದಿನಕ್ಕೆ ಅತ್ಯಾಚಾರದ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ.
ಎಷ್ಟೇ ಜಾಗೃತಿ ಕಾರ್ಯಕ್ರಮಗಳನ್ನು ಸರ್ಕಾರ ಮಾಡಿದರು, ಕೂಡ ಲೈಂಗಿಕ ದೌರ್ಜನ್ಯಗಳು ಇನ್ನೂ ನಡೆಯುತ್ತಲೇ, ಇವೆ… ಈ ಹಿನ್ನೆಲೆಯಲ್ಲಿ ಕಲಬುರಗಿಯ ಬಾಲಕಿಯೊಬ್ಬಳು ಕಾಮುಕರಿಗೆ ಶಾಕ್ ಕೊಡುವ ಒಂದು ಸಾಧನವನ್ನು ಕಂಡು ಹಿಡಿದಿದ್ದಾಳೆ.
ಅದೇನು ಅಂತ ಯೋಚಿಸುತ್ತಿದ್ದೀರಾ…!?
ಕಲಬುರಗಿ ನಗರದ ಎಸ್.ಆರ್.ಎನ್ ಮೆಹತಾ ಶಾಲೆಯಲ್ಲಿ ಎಸ್ ಎಸ್ ಎಲ್ ಸಿ ತರಗತಿಯಲ್ಲಿ ಓದುತ್ತಿರುವ ವಿಜಯಲಕ್ಷ್ಮಿ ಬಿರಾದಾರ್ ಎನ್ನುವ ವಿದ್ಯಾರ್ಥಿನಿ, ಆಯಂಟಿ ರೇಪ್ ಫುಟ್‌ವೇರ್ ಸಿದ್ದಗೊಳಿಸಿದ್ದಾಳೆ.
ಪಾದರಕ್ಷೆಯ ಕೆಳಗೆ ಎಲೆಕ್ಟ್ರಾನಿಕ್ ಸಾಧನವನ್ನು ಅಳವಡಿಸಲಾಗಿದೆ.
ಯಾರಾದರೂ ಕಾಮುಕರು ಅಥವಾ ಅಪರಿಚಿತರು ಬಂದು ಮಹಿಳೆಯರನ್ನು ಮುಟ್ಟಿದರೆ ಆ ಪಾದರಕ್ಷೆಗಳಿಂದ ಎದುರಿಗಿರುವ ವ್ಯಕ್ತಿಗೆ ಕಿಕ್ ಮಾಡಿದರೆ 0.5 ರಷ್ಟು ಆಂಪಿಯರ್ ನಷ್ಟು ವಿದ್ಯುತ್ ಉತ್ಪಾದನೆಯಾಗಿ ಕಾಮುಕರಿಗೆ ಶಾಕ್ ಹೊಡೆಯುವಂತೆ ಮಾಡುತ್ತದೆ.
ಇಷ್ಟೇ ಅಲ್ಲದೆ, ಈ ಮಷಿನ್, ನಡೆಯುವಾಗಲೇ ಬ್ಯಾಟರಿ ಚಾರ್ಜ್ ಆಗುವಂತೆ ರೂಪಿಸಲಾಗಿದೆ. ಈ ಪಾದರಕ್ಷೆಯಲ್ಲಿ ಬ್ಲಿಂಕ್ ಆಪ್ ತಂತ್ರಜ್ಞಾನ ಅಳವಡಿಸಲಾಗಿದೆ. ಸಂಕಷ್ಟದಲ್ಲಿರುವ ಮಹಿಳೆ ಹೆಬ್ಬೆರೆಳು ಬಳಿ ಬಟನ್ ಒತ್ತಿದರೆ ಸಾಕು, ಪೊಲೀಸರಿಗೆ ಮತ್ತು ಕುಟುಂಬದವರಿಗೆ ಎಚ್ಚರಿಕೆಯ ಸಂದೇಶ ಹೋಗುವಂತಹ ವ್ಯವಸ್ಥೆಯನ್ನು ಕೂಡಾ ಈ ಸಾಧನದಲ್ಲಿ ರೂಪಿಸಲಾಗಿದೆ. ಅಪ್ಲಿಕೇಶನ್ನಲ್ಲಿ ಯಾರ ನಂಬರ್ನ್ನು ದಾಖಲಿಸಿರುತ್ತೇವೆಯೋ ಆ ನಂಬರ್ಗೆ ಸಹಾಯದ ಸಂದೇಶ ಹೋಗುತ್ತದೆ. ಇದರಿಂದ ಸಂಕಷ್ಟಕ್ಕೊಳಗಾದವರು ಎಲ್ಲಿ ಇದ್ದಾರೆ ಎಂಬುವುದನ್ನು ಕೂಡಾ ಟ್ರ್ಯಾಕ್ ಮಾಡಲು ಪೊಲೀಸರಿಗೆ ನೆರವಾಗುವಂತೆ ತಂತ್ರಜ್ಞಾನವನ್ನು ರೂಪಿಸಲಾಗಿದೆ.