ರೈತರಿಗೆ ಮತ್ತಷ್ಟು ಸಬಲೀಕರಣಗೊಳಿಸಲು ಕೇಂದ್ರ ಸರ್ಕಾರ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ ಈ ಹಿಂದೆಯೇ ಆರಂಭಿಸಿದೆ.
ಈ ಯೋಜನೆಯಡಿ ರೈತರಿಗೆ ಅತ್ಯಂತ ಕಡಿಮೆ ಬಡ್ಡಿಯಲ್ಲಿ 3 ರಿಂದ 4 ಲಕ್ಷ ರೂ.ವರೆಗೆ ಸಾಲವನ್ನು ಕೃಷಿಗಾಗಿ ನೀಡಲಾಗುತ್ತದೆ. ಈ ಸಾಲ ಸೌಲಭ್ಯದ ಬಗ್ಗೆ ರೈತರು ತಿಳಿದುಕೊಳ್ಳುವುದು ತುಂಬಾ ಮುಖ್ಯವಾಗಿದೆ. ರೈತರು ತಮ್ಮ ಕೃಷಿ ಭೂಮಿಯಲ್ಲಿ ಈ ಸಾಲದ ಮೊತ್ತವನ್ನು ಹೂಡಿಕೆ ಮಾಡಬಹುದು.
ರೈತರು ಬೀಜಗಳು, ಕೃಷಿಗೆ ಸಂಬಂಧಿಸಿದ ವಸ್ತುಗಳನ್ನು ಖರೀದಿಸಬಹುದು. ರೈತರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಈ ಬ್ಯಾಂಕ್ ಖಾತೆಯನ್ನು ಹೊಂದಿದ್ದರೆ ಸಾಕು ಮನೆಯಲ್ಲಿ ಕುಳಿತು ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ಸಾಲ ಪಡೆಯಬಹುದು.
ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಡಿ ರೂ. 2 ಲಕ್ಷಗಳವರೆಗಿನ ಸಾಲದ ಮೊತ್ತಕ್ಕೆ ಶೇ.2 ರಷ್ಟು ಬಡ್ಡಿ ಸಹಾಯಧನ ಲಭ್ಯವಿದೆ. ಅಲ್ಲದೆ ಸಕಾಲದಲ್ಲಿ ಈ ಸಾಲವನ್ನು ಮರುಪಾವತಿ ಮಾಡಿದಲ್ಲಿ ವಾರ್ಷಿಕ ಶೇ. 3ರಷ್ಟು ಹೆಚ್ಚುವರಿ ಬಡ್ಡಿ ಸಹಾಯಧನ ಸೌಲಭ್ಯ ಈ ಪಡೆಯಬಹುದು.
ಆಸಕ್ತ ರೈತರು ತಮ್ಮ ಅವಶ್ಯಕತೆಗನುಗುಣವಾಗಿ ಸಾಲ ಸೌಲಭ್ಯ ಪಡೆದುಕೊಳ್ಳಬಹುದು.
ಕಿಸಾನ್ ಕ್ರೆಡಿಟ್ ಕಾರ್ಡ್‌ಗಳನ್ನು ಬ್ಯಾಂಕ್‌ಗಳು ನೀಡುತ್ತವೆ. ರೈತರಿಗೆ ರಸಗೊಬ್ಬರ, ಬೀಜ, ಕೀಟನಾಶಕ ಇತ್ಯಾದಿ ಕೃಷಿ ಉತ್ಪನ್ನಗಳ ಖರೀದಿಗೆ ಸಾಲ ನೀಡುವುದು ಸರ್ಕಾರದ ಉದ್ದೇಶವಾಗಿದೆ.
ಎರಡನೆಯ ಉದ್ದೇಶವೆಂದರೆ ರೈತರು ಅತಿಯಾದ ಬಡ್ಡಿಯನ್ನು ವಿಧಿಸುವ ಉದ್ದೇಶದ ಸಾಲ ಪಡೆಯುವ ಅಗತ್ಯವಿಲ್ಲ. ಕಿಸಾನ್ ಕ್ರೆಡಿಟ್ ಕಾರ್ಡ್ ಅಡಿಯಲ್ಲಿ ತೆಗೆದುಕೊಂಡ ಸಾಲವು ಶೇ. 2-4 % ಮಾತ್ರ ರೈತರ ಅನುಕೂಲಕ್ಕಾಗಿ ಅಗ್ಗವಾಗಿದೆ.
ನೀವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾತೆಯನ್ನು ಹೊಂದಿದ್ದರೆ ನೀವು ಯೋನೋ ಅಪ್ಲಿಕೇಶನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ಇದಕ್ಕಾಗಿ ನೀವು ಯೋನೋ ಅಗ್ರಿಕಲ್ಚರ್ ಪ್ಲಾಟ್‌ಫಾರ್ಮ್‌ಗೆ ಭೇಟಿ ನೀಡುವ ಮೂಲಕ ಕಿಸಾನ್ ಕ್ರೆಡಿಟ್ ಕಾರ್ಡ್‌ಗೆ ಅರ್ಜಿ ಸಲ್ಲಿಸಬಹುದು. ರೈತರು ಮೊದಲು ಎಸ್‌ಬಿಐನ ಯೋನೋ ಆಪ್ ನಿಮ್ಮ ಫೋನ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬೇಕು.
ಇದಲ್ಲದೆ, ನೀವು ಎಸ್‌ಬಿಐನ ಯೋನೋ ಆನ್‌ಲೈನ್ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಲಾಗಿನ್ ಕೂಡ ಮಾಡಬಹುದು.