ಮಾನಸ ಟ್ರಸ್ಟ್ ನ ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಐಕ್ಯೂಎಸಿ ಸಂಯುಕ್ತಾಶ್ರಯದಲ್ಲಿ ಸಂವಿಧಾನ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು.
“ಸಂವಿಧಾನದ ಮೂಲ ಆಶಯಗಳು” ಎಂಬ ವಿಷಯದ ಕುರಿತು ಮಾತನಾಡಲು ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀಯುತ ಕೆ.ಪಿ. ಶ್ರೀಪಾಲ್, ನ್ಯಾಯವಾದಿಗಳು, ಶಿವಮೊಗ್ಗ ಇವರು ಆಗಮಿಸಿದ್ದರು.
ಶ್ರೀಯುತರು ಸಂವಿಧಾನದ ಮೂಲ ಆಶಯವು ‘ಸಮಾನತೆ’ ಎಂದು ಹೇಳುತ್ತಾ ವಿವಿಧ ಜಾತಿ ಮತ, ಸಂಸ್ಕೃತಿಯನ್ನು ಹೊಂದಿರುವ ನಮ್ಮ ದೇಶದಲ್ಲಿ ಮೂಡಿಬಂದ ಸಂವಿಧಾನವು ನಮ್ಮ ದೇಶದ ಅತ್ಯುನ್ನತ ಕಾನೂನು ಎಂದು ಹೇಳಿದರು.
ನಂತರ ವಿದ್ಯಾರ್ಥಿಗಳೊಂದಿಗೆ ಸಂವಾದದಲ್ಲಿ ದೇಶದ ಮೀಸಲಾತಿ ವ್ಯವಸ್ಥೆ, ತೃತೀಯ ಲಿಂಗಿಗಳ ಹಕ್ಕುಗಳ ಬಗೆಗೆ ಸಮಾನತೆಯ ಕುರಿತಾಗಿ ವಿದ್ಯಾರ್ಥಿಗಳ ಹಲವಾರು ಪ್ರಶ್ನೆಗಳಿಗೆ ಅವರು ಸಮಂಜಸವಾಗಿ ಉತ್ತರಿಸಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಎಂಸಿಸಿಎಸ್ ನ ನಿರ್ದೇಶಕರಾದ ಡಾ. ರಾಜೇಂದ್ರ ಚೆನ್ನಿಯವರು ಮಾತನಾಡಿ ಸಂವಿಧಾನದ ಅರಿವು ಪ್ರತಿಯೊಬ್ಬ ಪ್ರಜೆಗೂ ಮುಖ್ಯ. ಅದರಂತೆ ಸಂವಿಧಾನದ ರಕ್ಷಣೆಯ ಜವಾಬ್ದಾರಿಯೂ ಪ್ರಜೆಗಳದ್ದೇ ಎಂದರು.
ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮಾಧಿಕಾರಿಗಳಾದ ಡಾ. ಸುಕೀರ್ತಿ, ಐಕ್ಯೂಎಸಿ ಸಂಯೋಜಕರಾದ ಡಾ. ಅರ್ಚನಾ ಕೆ ಭಟ್ ಮುಂತಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಚಾರ್ಯೆ ಡಾ. ಸಂದ್ಯಾಕಾವೇರಿ ವಹಿಸಿದ್ದರು. ಕುಮಾರಿ ಮಧುಶ್ರೀ ನಿರೂಪಿಸಿ, ಡಾ. ಸುಕೀರ್ತಿ ಸ್ವಾಗತಿಸಿ, ಶ್ರೀ ರಕ್ಷಿತ್ ವಂದಿಸಿದರು.