ದಿನಾಂಕ: 19.11.2022. ರಂದು ಮನ್ವಂತರ ಮಹಿಳಾ ಮಂಡಳ ಹಾಗೂ ಕೋಟೆ ಯೋಗ ಕೇಂದ್ರದ ಮಹಿಳಾ ತಂಡದಿಂದ “ಕಾರ್ತಿಕ ಕಲರವ” ಮತ್ತು “ತುಂಗಾರತಿ” ಕಾರ್ಯಕ್ರಮ ತುಂಗಾ ನದಿ ದಡ, ಗಂಗಾಪರಮೇಶ್ವರಿ ದೇವಾಲಯದ ಆವರಣದಲ್ಲಿ ಏರ್ಪಡಿಸಲಾಗಿತ್ತು.
ವಿಶೇಷವಾದ ಪರಿಸರ ಜಾಗೃತಿ ಗೀತೆಗಳು, ನದಿ, ನಾಡು ಕುರಿತು ಪಿಕ್ ಅಂಡ್ ಸ್ವೀಚ್ ಹಾಗೂ ವಿಶೇಷ ಕನ್ನಡದ ಗೀತೆಗಳಿಗೆ ನೃತ್ಯ ಮಾಡುವ ಮೂಲಕ ಕಾರ್ಯಕ್ರಮ ಅತ್ಯಂತ ವಿಶಿಷ್ಠ ವಾಗಿ ನೆರವೇರಿತು.
ನದಿ ದಡದ ದೇವಾಲಯದ ಮುಂದೆ ದೀಪ ಪ್ರಜ್ವಲನೆ ಮಾಡಿದ ಮನ್ವಂತರದ ಅಧ್ಯಕ್ಷರಾದ ಶ್ರೀರಂಜಿನಿ ಯವರು ದೀಪ ಬೆಳಕು ನೀಡುವುದು ಮಾತ್ರವಲ್ಲ..ರಕ್ಷಣೆಯ ಭಾವವನ್ನು ಕಟ್ಟಿಕೊಡುತ್ತದೆ ಎಂದು ಮನ್ವಂತರ ಮಹಿಳಾ ಮಂಡಳಿಯ ಅಧ್ಯಕ್ಷರಾದ ಶ್ರೀ ರಂಜಿನಿ ದತ್ತಾತ್ರಿಯವರು ತಿಳಿಸಿದರು.
ಬೆಳಕಿಗೆ ಹೇಗೆ ಕತ್ತಲೆಯನ್ನು ಹೊಡೆದೋಡಿಸುವ ಶಕ್ತಿ ಇದೆಯೋ ಅಂತೆಯೇ ಮಹಿಳೆ ಕೂಡ ತನ್ನ ಅದಮ್ಯ ಕಾರ್ಯಕ್ಷಮತೆ, ದಕ್ಷತೆ, ಪ್ರಾಮಾಣಿಕತೆ ಇತ್ಯಾದಿ ಬೆಳಕಿನ ಕಿರಣದ ಮೂಲಜ ರಕ್ಷಣೆಯ ಭಾವ, ಭಕುತಿಯ ಮೂಲಕ ಕುಟುಂಬ, ಸಮಾಜವನ್ನು ಮುನ್ನಡೆಸಿದ್ದಾಳೆ ಎಂದರು.
ತನ್ನ ನಿತ್ಯ ಕಾಯಕದ ಮೂಲಕ ಹೊರಹೊಮ್ಮುವ ಬೆಳಕಿನಿಂದ ನಕಾರಾತ್ಮಕ ಭಾವ ಓಡಿಸಿ, ಸಕಾರಾತ್ಮಕ ಸ್ಥಿರತೆ ಕಾಪಿಟ್ಟಿದ್ದಾಳೆ ಎಂದು ತಿಳಿಸಿದರು.
ನೀರು – ನೀರೆಗೆ ಹತ್ತಿರದ ನಂಟು, ಪ್ರಕೃತಿ ಮತ್ತು ಮಾತೆಯರಿಗೆ ಸಂಬಂಧ ಉಂಟು. ಬನ್ನಿ ಪ್ರಕೃತಿ ಸಂರಕ್ಷಣೆ ನಮ್ಮ ಜವಾಬ್ದಾರಿ ಎಂದು ಸಾರೋಣ ಎಂದು ಶ್ರೀರಂಜಿನಿ ದತ್ತಾತ್ರಿ ನುಡಿದು ಅನೇಕ ಪರಿಸರ ಗೀತೆಗಳನ್ನು ಒಟ್ಟಾಗಿ ಹಾಡಿಸಿದರು.
ಕೋಟೆ ಯೋಗ ಕೇಂದ್ರ ಮಹಿಳಾ ತಂಡದ ಪುಷ್ಪಾರವಿಯವರು ಕಾರ್ತೀಕ ಕಲರವದ ಈ ಸದ್ದು ಸದಾ ವ್ಯಾಪಿಸಲಿ, ನಮ್ಮೊಳಗಿನ ಸ್ನೇಹ, ವಿಶ್ವಾಸ ಸದಾ ಸ್ಥಿರತೆಯಿಂದಿರಲಿ ಎಂದರು.
ಮನ್ವಂತರದ ಜಯಾಸುರೇಶ್, ಅಶ್ವಿನಿ, ಸುಲೋಚನಾ ಎಲ್ಲ ಗೆಳತಿಯರು ಭಾಗವಹಿಸಿದ್ದರು.
ಕೋಟೆ ಯೋಗಕೇಂದ್ರದ ಮಹಿಳಾ ತಂಡದವರು ಅತ್ಯಂತ ಶ್ರದ್ಧೆಯಿಂದ ತುಂಗಾರತಿ ಕಾರ್ಯಕ್ರಮ ಆಯೋಜಿಸಿದ್ದರು.