ಮುಸಲ್ಮಾನರ ‘ಮುಸ್ಲಿಂ ಪರ್ಸನಲ್ ಲಾ’ದ ಅಡಿಯಲ್ಲಿ ನಡೆದಿರುವ ವಿವಾಹ ‘ಪೋಕ್ಸೋ’ ಕಾನೂನಿನ ಪರಿಧಿಯ ಹೊರಗೆ ಇಲ್ಲ ಎಂದು ಕೇರಳ ಉಚ್ಚ ನ್ಯಾಯಾಲಯವು ಮಹತ್ವಪೂರ್ಣ ತೀರ್ಪು ನೀಡುತ್ತಾ ಖಾಲಿದೂರ ರೆಹಮಾನ್ (ವಯಸ್ಸು 31 ವರ್ಷ) ಇವನ ಜಾಮಿನಿನ ಅರ್ಜಿಯನ್ನು ತಿರಸ್ಕರಿಸಲಾಯಿತು.
‘ಮುಸ್ಲಿಂ ಪರ್ಸನಲ್ ಲಾ’ದ ಪ್ರಕಾರ ವಿವಾಹ ಸಮ್ಮತವಾಗಿದ್ದರೂ, ಒಂದು ವೇಳೆ ಅಪ್ರಾಪ್ತ ಇರುವುದರಿಂದ ಈ ಪ್ರಕರಣ ‘ಪೋಕ್ಸೋ’ ಕಾನೂನಿನ ಅಡಿಯಲ್ಲಿ ಅಪರಾಧ ಎನ್ನಲಾಗುವುದು’, ಎಂದು ನ್ಯಾಯಮೂರ್ತಿ ಬೇಚು ಕುರಿಯನ್ ಥಾಮಸ್ ಇವರು ಸ್ಪಷ್ಟಪಡಿಸಿದರು.
ಪೋಕ್ಸೋ’ ಕಾನೂನಿನ ಅಡಿಯಲ್ಲಿ ಅಪ್ರಾಪ್ತ ಹುಡುಗಿಯ ಮೇಲಿನ ಪ್ರತಿಯೊಂದು ಲೈಂಗಿಕ ದೌರ್ಜನ್ಯಕ್ಕೆ ಅಪರಾಧ ಎನ್ನಲಾಗುವುದು. ಆದ್ದರಿಂದ (ಇಂತಹ ಅಪರಾಧ ನಡೆಸಿ ‘ಮುಸ್ಲಿಂ ಪರ್ಸನಲ್ ಲಾ’ದ ಪ್ರಕಾರ ವಿವಾಹ ಮಾಡಿಕೊಂಡರು ಅದು) ಇಂತಹ ವಿವಾಹ ‘ಪೋಕ್ಸೋ’ ಕಾನೂನಿನ ಪರಿಧಿಯ ಹೊರಗೆ ಇರಲು ಸಾಧ್ಯವಿಲ್ಲ.
ರೆಹಮಾನ್ ಇವನು ಓರ್ವ 16 ವರ್ಷದ ಹುಡುಗಿಯನ್ನು ಬಂಗಾಲದಿಂದ ಅಪಹರಿಸಿ ನಂತರ ಆಕೆಯ ಮೇಲೆ ಬಲಾತ್ಕಾರ ಮಾಡಿದನು. ಅದರ ನಂತರ ತನ್ನನ್ನು ಕಾಪಾಡಿಕೊಳ್ಳಲು ಅವನು ‘ಮುಸ್ಲಿಂ ಪರ್ಸನಲ್ ಲಾ’ದ ಪ್ರಕಾರ ಆಕೆಯ ಜೊತೆ ವಿವಾಹ ಮಾಡಿಕೊಂಡನು. ‘ಮುಸ್ಲಿಂ ಪರ್ಸನಲ್ ಲಾ’ದ ಪ್ರಕಾರ ಯೌವನಕ್ಕೆ ಬಂದಿರುವ ಹುಡುಗಿಯ ಜೊತೆಗೆ ವಿವಾಹವಾಗಲು ಅನುಮತಿ ಇದೆ. ಆದ್ದರಿಂದ ಇಂತಹ ವಿವಾಹ ಮಾಡಿಕೊಂಡಿರುವ ಯಾವುದೇ ಪುರುಷನ ವಿರುದ್ಧ ‘ಪೋಕ್ಸೋ’ ಕಾನೂನಿನ ಅಡಿಯಲ್ಲಿ ಬಲಾತ್ಕಾರದ ದೂರು ದಾಖಲಿಸಲು ಸಾಧ್ಯವಿಲ್ಲ ಎಂದು ದಾವೆ ಮಾಡಲಾಗಿತ್ತು.
ಇದರ ಬಗ್ಗೆ ನ್ಯಾಯಾಲಯವು, ‘ಪೋಕ್ಸೋ’ ಕಾನೂನಿನ ಉದ್ದೇಶವೇ ವಿವಾಹದ ನೆಪದಲ್ಲಿ ಅಪ್ರಾಪ್ತರ ನಡೆಯುವ ಲೈಂಗಿಕ ದೌರ್ಜನ್ಯ ತಡೆಯುವುದಾಗಿದೆ. ಬಾಲ್ಯ ವಿವಾಹ ಮಾನವ ಹಕ್ಕುಗಳ ಉಲ್ಲಂಘನೆ ಆಗಿದ್ದು ಅದು ಸಾಮಾಜಿಕ ಅಭಿಷಾಪವಾಗಿದೆ. ಇದರಿಂದ ಮಕ್ಕಳ ವಿಕಾಸದ ಜೊತೆ ರಾಜಿ ಮಾಡಿದ ಹಾಗೆ ಆಗುತ್ತದೆ ಎಂದು ಹೇಳಿತು.
ಈ ಸಮಯದಲ್ಲಿ ನ್ಯಾಯಮೂರ್ತಿ ಥಾಮಸ್ ಇವರು, ‘ನಾವು ಪಂಜಾಬ್ ಹರಿಯಾಣ ಮತ್ತು ದೆಹಲಿ ಉಚ್ಚ ನ್ಯಾಯಾಲಯದ ದೃಷ್ಟಿಕೋನ ಒಪ್ಪುವುದಿಲ್ಲ ಎಂಬುದು ಸ್ಪಷ್ಟಪಡಿಸಿದರು.
ಅವರು, “ಈ ನ್ಯಾಯಾಲಯವು ಅದರ ಆದೇಶದಲ್ಲಿ ಓರ್ವ ೧೫ ವರ್ಷದ ಮುಸಲ್ಮಾನ್ ಹುಡುಗಿಯು ತನ್ನ ಆಯ್ಕೆಯ ಪ್ರಕಾರ ವಿವಾಹ ಮಾಡಿಕೊಳ್ಳುವ ಅಧಿಕಾರ ನೀಡಲಾಗಿದೆ. ಇದರ ಜೊತೆಗೆ ಓರ್ವ ಪತಿಯು ಅಪ್ರಾಪ್ತ ಪತ್ನಿಯ ಜೊತೆ ಶಾರೀರಿಕ ಸಂಬಂಧ ಇಟ್ಟುಕೊಂಡ ನಂತರ ಕೂಡ ಅದನ್ನು ‘ಪೋಕ್ಸೋ’ ಕಾನೂನಿನ ಅಡಿಯಲ್ಲಿ ವಿನಾಯತಿ ನೀಡಲಾಗಿತ್ತು.
ಇದರ ಜೊತೆ ಕರ್ನಾಟಕದಲ್ಲಿನ ಒಂದು ಪ್ರಕರಣದಲ್ಲಿ 17 ವರ್ಷದ ಹುಡುಗಿಯ ಜೊತೆ ವಿವಾಹ ಮಾಡಿಕೊಂಡಿರುವ ಮಹಮ್ಮದ್ ವಾಸಿಮ್ ಅಹಮದ್ ಇವನ ಮೇಲಿನ ಕಾನೂನಿನ ಮೋಕದ್ದಮೆಯನ್ನು ರದ್ದು ಪಡಿಸಿದ ಕರ್ನಾಟಕದ ಉಚ್ಚ ನ್ಯಾಯಾಲಯದ ನಿರ್ಣಯದ ಬಗ್ಗೆ ಕೂಡ ನನ್ನ ಸಹಮತಿ ಇಲ್ಲಎಂದು ಹೇಳಿತು.