Friday, December 5, 2025
Friday, December 5, 2025

ಕುಕ್ಕರ್ ಬಾಂಬ್ ಬ್ಲಾಸ್ಟ್ ಪ್ರಕರಣ ತೀರ್ಥಹಳ್ಳಿಯಲ್ಲಿ ಪೋಲಿಸ್ ದಾಳಿ

Date:

ಮಂಗಳೂರು ಆಟೋದಲ್ಲಿ ಕುಕ್ಕರ್‌ ಬಾಂಬ್‌ ಬ್ಲಾಸ್ಟ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತ ಉಗ್ರರಿಗೆ ಸಂಬಂಧಪಟ್ಟಿದೆ ಎನ್ನಲಾದ ತೀರ್ಥಹಳ್ಳಿಯ 5 ಮನೆಗಳ ಮೇಲೆ ಇಂದು ಬೆಳಗಿನ ಜಾವ ಪೊಲೀಸರಿಂದ ದಾಳಿ ನಡೆಸಿದ್ದಾರೆ.

ಮಂಗಳೂರು ಕೋರ್ಟ್‌ ನಿಂದ ಸರ್ಚ್‌ ವಾರೆಂಟ್‌ ಪಡೆದು ಈ ದಾಳಿ ನಡೆಸಲಾಗಿದೆ. ಮೋಸ್ಟ್‌ ವಾಂಟೆಡ್‌ ಮತೀನ್‌ , ಬಂಧಿತ ಮಾಜ್‌ ಗೆ ಸಂಬಂಧಿಸಿದ ಎರಡು ಮನೆಗಳು ಮೇಲೂ ಪೊಲೀಸರು ದಾಳಿ ನಡೆಸಿ ಶೋಧ ನಡೆಸಿದ್ದಾರೆ. ಸಾಜಿದ್‌ ಮತ್ತು ಶಾರೀಕ್‌ ಸಂಬಂಧಿಯೊಬ್ಬರ ಮನೆಯಲ್ಲೂ ಪರಿಶೀಲನೆ ನಡೆದಿದೆ. ತೀರ್ಥಹಳ್ಳಿ ಡಿವೈಎಸ್ಪಿ ಶಾಂತವೀರಯ್ಯ ನೇತೃತ್ವದಲ್ಲಿ ಈ ದಾಳಿ ನಡೆದಿದೆ.

ಆಗುಂಬೆ ಠಾಣಾಧಿಕಾರಿ ಶಿವಕುಮಾರ್‌, ಮಾಳೂರು ಠಾಣಾಧಿಕಾರಿ ಪ್ರವೀಣ್‌ ನೀಲಮ್ಮನವರ್‌ ಮತ್ತು ಸಿಬ್ಬಂದಿ ದಾಳಿಯಲ್ಲಿ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಆರೋಪಿಗಳು ಎಸಗಿದ ಕೃತ್ಯಗಳ ಕುರಿತು ಕೆಲವು ಸಾಕ್ಷ್ಯಾಧಾರಗಳು ಮತ್ತು ಮಹತ್ವದ ಸುಳಿವುಗಳು ಲಭ್ಯವಾಗಿವೆ ಎನ್ನಲಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...