ಉತ್ತರ ಮಧ್ಯೆ ರೈಲ್ವೆಯಲ್ಲಿ 11 ಗ್ರೂಪ್ ಸಿ, ಗ್ರೂಪ್ ಹುದ್ದೆಗಳು ಖಾಲಿ ಇದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಪಿಯುಸಿ, ಐಟಿಐ ಪಾಸಾಗಿರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಹಾಕಬಹುದು. ಅಕ್ಟೋಬರ್ 27ರಿಂದಲೇ ಅರ್ಜಿ ಸಲ್ಲಿಕೆ ಆರಂಭವಾಗಿದೆ. ನವೆಂಬರ್ 21 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ವಾಗಿದೆ. ಆಸಕ್ತರು ಈ ಕೂಡಲೇ ಆನ್ಲೈನ್ ಮೂಲಕ ಅರ್ಜಿ ಹಾಕಬಹುದು.
ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ.
ಸಂಸ್ಥೆ ಉತ್ತರ ಮಧ್ಯೆ ರೈಲ್ವೆ
ಹುದ್ದೆಯ ಹೆಸರು ಗ್ರೂಪ್ ಸಿ, ಗ್ರೂಪ್ ಡಿ
ಒಟ್ಟು ಹುದ್ದೆ 11
ವಿದ್ಯಾರ್ಹತೆ
ಪಿಯುಸಿ, ಐಟಿಐ
ವೇತನ ನಿಯಮಾನುಸಾರ
ಸ್ಥಳ
ಪ್ಯಾನ್ ಇಂಡಿಯಾ
ಅರ್ಜಿ ಸಲ್ಲಿಕೆ ವಿಧಾನ
ಆನ್ಲೈನ್
ಅರ್ಜಿ ಶುಲ್ಕ:
ಎಲ್ಲಾ ಅಭ್ಯರ್ಥಿಗಳಿಗೆ 500 ರೂ. ಅರ್ಜಿ ಶುಲ್ಕ
ಎಸ್ಸಿ/ಎಸ್ಟಿ/ ಮಾಜಿ ಸೈನಿಕ/ PWD/ ಮಹಿಳಾ/ ಅಲ್ಪಸಂಖ್ಯಾತ & EBC ಅಭ್ಯರ್ಥಿಗಳಿಗೆ 250 ರೂ. ಅರ್ಜಿ ಶುಲ್ಕ
ಹುದ್ದೆಯ ಮಾಹಿತಿ:
ಗ್ರೂಪ್ ಸಿ- 03
ಗ್ರೂಪ್ ಡಿ-08
ಒಟ್ಟು-11 ಹುದ್ದೆ
ವಿದ್ಯಾರ್ಹತೆ:
ಗ್ರೂಪ್ ಸಿ- ಟೆಕ್ನಿಷಿಯನ್ ಹುದ್ದೆಗಳಿಗೆ ಎಸ್ಎಸ್ಎಲ್ಸಿ ಹಾಗೂ ಐಟಿಐ ಪಾಸಾಗಿರಬೇಕು. ಇತರೆ ಹುದ್ದೆಗಳಿಗೆ ಶೇ.50ರಷ್ಟು ಅಂಕಗಳೊಂದಿಗೆ 12ನೇ ತರಗತಿ/ಪಿಯುಸಿ ಪಾಸಾಗಿರಬೇಕು.
ಗ್ರೂಪ್ ಡಿ- ಅಭ್ಯರ್ಥಿಗಳು ಕಡ್ಡಾಯವಾಗಿ 10ನೇ ತರಗತಿ ಪಾಸಾಗಿರಬೇಕು.
ವಯೋಮಿತಿ:
ಗ್ರೂಪ್ ಸಿ ಹುದ್ದೆಗಳಿಗೆ ಅಭ್ಯರ್ಥಿಗಳ ವಯಸ್ಸು ಜನವರಿ 1, 2023ಕ್ಕೆ 18-30 ವರ್ಷದೊಳಗಿರಬೇಕು.
ಗ್ರೂಪ್ ಡಿ ಹುದ್ದೆಗಳಿಗೆ ಅಭ್ಯರ್ಥಿಗಳ ವಯಸ್ಸು ಜನವರಿ 1, 2023ಕ್ಕೆ 18-33 ವರ್ಷದೊಳಗಿರಬೇಕು.
ಉದ್ಯೋಗದ ಸ್ಥಳ:
ಗ್ರೂಪ್ ಸಿ, ಗ್ರೂಪ್ ಡಿ ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಭಾರತದಲ್ಲಿ ಎಲ್ಲಿ ಬೇಕಾದರೂ ಉದ್ಯೋಗ ನೀಡಲಾಗುತ್ತದೆ.
ವೇತನ:
ಗ್ರೂಪ್ ಸಿ- ಲೆವೆಲ್ -2 ಗ್ರೇಡ್ ಪೇ 1900 ರೂ.
ಗ್ರೂಪ್ ಡಿ- ಲೆವೆಲ್ -1 ಗ್ರೇಡ್ ಪೇ 1800 ರೂ.
ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ದಾಖಲಾತಿ ಪರಿಶೀಲನೆ
ವೈಯಕ್ತಿಕ ಸಂದರ್ಶನ
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 27/10/2022
ಅರ್ಜಿ ಸಲ್ಲಿಸಲು ಕೊನೆ ದಿನ: 21/11/2022