Tuesday, October 1, 2024
Tuesday, October 1, 2024

ಕಿರಿಯ ವಯಸ್ಸಿನಲ್ಲೇ ಹಿರಿಯ ಸಾಧನೆಗೈದ ಡಾ.ಶ್ರೀರಾಮ್

Date:

ಮೈಸೂರಿನ ಜೆಎಸ್‌ಎಸ್ ಮೆಡಿಕಲ್ ಕಾಲೇಜಿನಲ್ಲಿ ಚಿನ್ನದ ಪದಕ ಪಡೆದಿರುವ ಡಾ,ಶ್ರೀರಾಮ್ ಬಿ.ಎಸ್ 29ನೇ ವರ್ಷದಲ್ಲಿ ವೈದಕೀಯ ಔಷಧಶಾಸ್ತ್ರದಲ್ಲಿ ಪಿಹೆಚ್‌ಡಿ ನಿಟ್ಟೆ ಯೂನಿವರ್‌ಸಿಟಿ ಮಂಗಳೂರಿನಲ್ಲಿ ಡಾ.ರಾಮಚಂದ್ರ ಅವರ ಮಾರ್ಗದರ್ಶನದಲ್ಲಿ ಪಿಹೆಚ್‌ಡಿ ಪಡೆದ ಅತಿ ಕಿರಿಯ ವಯಸ್ಸಿನ ಸಾಧಕ ಎಂಬ ದಾಖಲೆಗೆ ಅರ್ಹತೆ ಹೊಂದಿರುವುದು ಸಾಗರದ ಚಿನ್ನದ ಯುವಕನ ಸಾಧನೆಯಾಗಿದೆ.

ಸಾಗರದ ಪತ್ರಿಕಾ ಭವನದಲ್ಲಿ ಗೋಷ್ಠಿಯಲ್ಲಿ ಮಾತನಾಡಿದ ಅವರು ವೈದ್ಯಕೀಯ ಮತ್ತು ಔಷಧ ಶಾಸ್ತ್ರದಲ್ಲಿ ಪಿಹೆಚ್‌ಡಿ ಪಡೆದಿರುವ 2.5 ವರ್ಷಗಳಲ್ಲಿನ ಸಮಾಜಕ್ಕೆ ಪೂರಕವಾದ ಅಂಶಗಳ ಕುರಿತು ಡಾ,ಶ್ರೀರಾಮ್ ಬಿ.ಎಸ್ ಮಾಹಿತಿ ನೀಡಿದರು.

ಮನುಷ್ಯನ ವಯಸ್ಸನ್ನು ತಡೆ ಹಿಡಿಯುವ ಉತ್ತಮ ಅವಕಾಶವಿದೆ.ಸಾವು ಖಚಿತ,ಬದುಕಿನಲ್ಲಿ ಆರೋಗ್ಯವಂತ ವ್ಯಕ್ತಿಯಾಗಿ ಹೆಚ್ಚು ಕಾಲ ವಯಸ್ಸಾಗದಂತೆ ಸೌಂದರ್ಯಸಹಿತವಾದ ಜೀವನ ನಿರ್ವಹಣೆಯ ಕುರಿತು ಪ್ರಯೋಗಾತ್ಮಕ ಫಲಿತಾಂಶ ಪಡೆದಿರುವುದಾಗಿ ವಿವರಿಸಿದರು.

ಯುವಕ-ಯುವತಿಯರು ಮಾತ್ರವಲ್ಲ,ಸ್ತ್ರೀ ಪುರುಷರು ವಯಸ್ಸಾಗದಂತೆ ಚರ್ಮ ಸುಕ್ಕುಗಟ್ಟದಂತೆ,ಕೂದಲುಗಳು ಹಣ್ಣಾಗದಂತೆ ಆರೋಗ್ಯವಂತ ಸವಂದರ್ಯಕ್ಕಾಗಿ ಹಾತೊರೆಯುವಂತಹ ಪರ್ವಕಾಲದಲ್ಲಿ ನಮ್ಮ ಈ ವೈಜ್ಞಾನಿಕ ಸಂಶೋಧನೆಯ ಸತ್ಯಗಳನ್ನು ಸಮಾಜಕ್ಕೆ ತಿಳಿಸುವುದರಿಂದ ಕೇವಲ ಪುಸ್ತಕಕ್ಕೆ ಸೀಮಿತವಾಗದೇ ಸಮುದಾಯದ ಜನರಿಗೆ ಉಪಯೋಗವಾಗಲಿ ಎಂದು ಆಶಿಸಿದರು.

ದೇಶದಲ್ಲಿ ಕೇರಳದ ನರ್ಸಿಂಗ್ ವಿದ್ಯಾರ್ಥಿ ವಿಷ್ಟು ಎಂಬ 30 ವರ್ಷದ ಯುವಕ ನರ್ಸಿಂಗ್‌ನಲ್ಲಿ ಪಿಹೆಚ್‌ಡಿ ಮಾಡುವ ಮೂಲಕ ರೆಕಾರ್ಡ್ ಮಾಡಿದ್ದಾನೆ.ಆದರೇ ನಾನು ವೈಧ್ಯಕೀಯ ಮತ್ತು ಔಷಧ ಶಾಸ್ತದಲ್ಲಿ ಕೇವಲ 29 ನೇ ವರ್ಷದಲ್ಲಿಯೇ ಪಿಹೆಚ್‌ಡಿ ಮಾಡಿರುವುದು ರೆಕಾರ್ಡ್ ಆಗಿರುವುದನ್ನು ನನ್ನ ಸೌಭಗ್ಯ ಎಂದರು.

ಇಂತಹ ವಿಶೇಷ ಸಂಶೋಧನೆಗೆ ಇಲಿಗಳನ್ನು ಬಳಸಲಾಗಿದೆ.ಇಲಿಗಳ ಮರಿಗಳಿಗೆ ವಯಸ್ಸಾಗದಂತೆ ತಡೆಯಲು ಸಕ್ಕರೆ ಇಂಜೆಕ್ಸನ್ ಮಾಡಲಾಗಿದೆ.ಕೆಲವು ಇಲಿಗಳಿಗೆ ನಿರಂತರ ಈಜಲು ಬಿಡಲಾಗಿತ್ತು.ಮೆಡ್‌ಫಾರ್ಮಿನ್ ಔಷಧ ನೀಡುವುದು ಸೇರಿದಂತೆ ಹಲವು ಪ್ರಯೋಗಗಳಿಂದ ಇಲಿಗಳ ದೇಹದಲ್ಲಾಗುವ ಬದಲಾವಣೆಗಳನ್ನು ದಾಖಲಿಸುವ ಮೂಲಕ ಪ್ರಾಣ ಗಳ ಹಾಗೂ ಮನುಷ್ಯರ ವಯಸ್ಸನ್ನು ನಿಯಂತ್ರಿಸಲು ಸಾಧ್ಯ ಎಂಬ ಅಂಶ ಸಂಶೋಧನೆಯಿಂದ ಬಹಿರಂಗವಾಗಿದೆ ಎಂದರು.

ಮನುಷ್ಯ ವಿಪರೀತ ತಿನ್ನುವುದರಿಂದ ಅನಾರೋಗ್ಯಕ್ಕೆ ತುತ್ತಾಗುತ್ತಾನೆ.ಆಹಾರ ಸೇವನೆಯಲ್ಲಿ ಮಿತಿ ಅಳವಡಿಸಿಕೊಳ್ಳುವುದರಿಂದ ರೋಗಮುಕ್ತರಾಗಿ ಸೌಂದರ್ಯ ಮತ್ತು ಆಯಸ್ಸನ್ನು ವೃದ್ಧಿಸಿಕೊಳ್ಳಲು ಸಾಧ್ಯವಿದೆ.ಉಪವಾಸ ಉಪಾಸನೆಗಳಿಂದ ಆರೋಗ್ಯವಂತರಾಗಲು ಸಾಧ್ಯ.ಆದ್ದರಿಂದ ಏಕಾದಶಿ,ರಂಜಾನ್,ವೃತ ನಿಯಮಗಳ ಸಂಕೋಲೆಗಳಿಂದ ಆರೋಗ್ಯಕರ ಸಂಪ್ರದಾಯವನ್ನು ಅಳವಡಿಸಿರುವುದು ಎಂದು ಸಂಶೋಧನೆಯಿಂದ ತಿಳಿಯುತ್ತದೆ ಎಂದರು.

ಈರುಳ್ಳಿ ಮತ್ತು ಸೇಬು ಸೇವನೆಯಿಂದ ವಯಸ್ಸನ್ನು ತಡೆಯಬಹುದಾಗಿದೆ.ಕೆಲವರು 30-35 ನೇ ವರ್ಷದಲ್ಲಿಯೇ ವೃದ್ದರಂತೆ ಕಾಣುತ್ತಾರೆ. ಆದ್ದರಿಂದ ಪ್ರತಿನಿತ್ಯ ಒಂದು ಹೊತ್ತು ಕೇವಲ ಹಣ್ಣುಗಳನ್ನು ಮಾತ್ರ ತಿನ್ನುವ ಮೂಲಕ ಮತ್ತು ಉಳಿದ ಹೊತ್ತುಗಳಲ್ಲಿ ಮಿತವಾದ ಆಹಾರ ಸೇವನೆಯಿಂದ ಹಾಗೂ ಉಪವಾಸಗಳನ್ನು ರೂಡಿಸಿಕೊಳ್ಳುವುದರಿಂದ ಸೌಂದರ್ಯದ ಜೊತೆಗೆ ವಯಸ್ಸನ್ನು ನಿಯಂತ್ರಿಸಬಹುದು ಎಂದರು.

ಮನುಷ್ಯನ ದೇಹಕ್ಕೆ ಅಗಸೆ ಬೀಜ ಮತ್ತು ಬೆಣ್ಣೆ ಹಣ್ಣು ಅಥವಾ ಮೀನಿನ ಎಣ್ಣೆ ಸೇವನೆಯಿಂದ ಮಾನವನ ದೇಹದಲ್ಲಿ ಪುಫಾ ಹೆಚ್ಚಿಸಿಕೊಳ್ಳುವುದರಿಂದ ದೇಹದಲ್ಲಿ ಉತ್ತಮ ಬೆಳವಣ ಗೆಗಳಾಗುತ್ತವೆ.ಆರೋಗ್ಯ ನೆಮ್ಮದಿಯಿಂದ ಆಯಸ್ಸು ಹೆಚ್ಚಳದ ಜೊತೆಗೆ ವಯಸ್ಸಿನ ತಡೆಯಾಗುತ್ತದೆ ಎಂದರು.
ಸಂಶೋಧನೆಗಳಿಂದ ಹಲವು ಸತ್ಯಗಳು ಹೊರಬೀಳುತ್ತವೆ. ಸೌತ್‌ ಆಪ್ರಿಕಾದಲ್ಲಿ ರಕ್ತದ ಒತ್ತಡ ಕಾಯಿಲೇಯೇ ಇಲ್ಲ.ಕಾರಣ ಸೌತ್ ಆಫ್ರಿಕಾ ನಾಗರಿಕರು ಉಪ್ಪು ತಿನ್ನುವುದಿಲ್ಲ.ಅಡುಗೆಗೆ ಉಪ್ಪನ್ನೇ ಬಳಸದಿರುವ ಕಾರಣ ರಕ್ತದ ಒತ್ತಡಮುಕ್ತ ಜೀವನ ನಡೆಸುತ್ತಿರುವುದು ಸಂಶೋಧನೆಗಳಿಗೆ ಪುಷ್ಟಿ ನೀಡುತ್ತದೆ ಎಂದರು.

ಕೋವಿಡ್ ಬಾರದೇ ಹೋಗಿದ್ದಲ್ಲಿ ಇನ್ನೂ ಮೊದಲೇ ನನ್ನ ಪಿಹೆಚ್‌ಡಿ ದೊರೆಯುತ್ತಿತ್ತು. ಆದರೂ ತೃಪ್ತಿಯಿದೆ ನನ್ನ ಸಂಶೋಧನೆಗೆ ದೊರಕಿರುವ ಪ್ರಮಾಣಪತ್ರಕ್ಕಿಂತ ನನ್ನ ಮೇಲೂ ನನ್ನ ಸಂಶೋಧನೆಯ ಪ್ರಯೋಗದಲ್ಲಿ ಸಕಾರಾತ್ಮಕ ಫಲಿತಾಂಶ ಕಂಡುಕೊಂಡಿದ್ದೇನೆ ಎಂದರು.

ಸಾಗರ ತಾಲ್ಲೂಕಿನ ಬೇದೂರಿನ ಕೃಷಿಕ ಸುರೇಶ್ ಮತ್ತು ರಂಜನಾ ದಂಪತಿಗಳ ಪುತ್ರ ಡಾ.ಶ್ರೀರಾಮ ಬೇದೂರಿನ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು, ಪ್ರೌಢಶಾಲಾ ಶಿಕ್ಷಣವನ್ನು ಸಾಗರದ ಸೆಂಟ್‌ ಜೋಸೇಫ್ ಶಾಲೆಯಲ್ಲಿ ಪಡೆದು ಪ್ರಥಮ ಮತ್ತು ದ್ವಿತೀಯ ಪಿಯು ಶಿಕ್ಷಣವನ್ನು ಸಾಗರದ ಸರ್ಕಾರಿ ಜ್ಯೂನಿಯರ್ ಕಾಲೇಜಿನಲ್ಲಿ ಪೂರೈಸಿದ್ದಾರೆ. ನಂತರ ದಕ್ಷಿಣ ಕನ್ನಡದ ಉಜಿರೆಯಲ್ಲಿನ ಧರ್ಮಸ್ಥಳ ಕಾಲೇಜಿನಲ್ಲಿ ಮನಃಶಾಸ್ತ್ರ (ಸೈಕಾಲಜಿ) ವಿಷಯದಲ್ಲಿ ಪದವಿಧರನಾಗಿ ಮೈಸೂರಿನ ಜೆಎಸ್‌ಎಸ್ ಮೆಡಿಕಲ್ ಕಾಲೇಜಿನಲ್ಲಿ ವೈಧ್ಯಕೀಯ ಶಾಸ್ತçವನ್ನು ಅಧ್ಯಯನ ಮಾಡಿ ಚಿನ್ನದ ಪದಕ ಪಡೆದ ವಿದ್ಯಾರ್ಥಿಯಾಗಿ ಹೊರಹೊಮ್ಮುತ್ತಿದ್ದಂತೆ ಮಡಕೇರಿ ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ವೈದ್ಯಕೀಯ ಶಿಕ್ಷಣ ಭೋದಕನಾಗಿ ನೌಕರಿ ದೊರೆಯುತ್ತದೆ.

ಪಿಹೆಚ್‌ಡಿ ಮಾಡುವ ಆಶಯ ಗುರಿ ಹೊಂದಿರುವ ಶ್ರೀರಾಮ್ ವೈದ್ಯಕೀಯ ಉಪನ್ಯಾಸಕ ವೃತ್ತಿಗೆ ರಾಜೀನಾಮೆ ನೀಡಿ ಡಾ.ರಾಮಚಂದ್ರ ಅವರ ಮಾರ್ಗದರ್ಶನದಲ್ಲಿ ಪಿಹೆಚ್‌ಡಿ ಮಾಡಲು ಆರಂಭಿಸಿದಾಗ ಕೋವಿಡ್ ಹಾವಳಿ ಹೆಚ್ಚಾಯಿತು.ಈ ಪರ್ವಕಾಲದಲ್ಲಿ ಶಿವಮೊಗ್ಗದ ಮೆಡಿಕಲ್ (ಮೆಗ್ಗಾನ್)ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಪ್ರಸ್ತುತ ಬೆಂಗಳೂರಿನಲ್ಲಿ ವೈದ್ಯಕೀಯ ಶಾಸ್ತ್ರದ ಉಪನ್ಯಾಸಕರಾಗಿ ವೃತ್ತಿ ನಿರ್ವಹಿಸುತ್ತಿರುವ ಡಾ.ಶ್ರೀರಾಮ್ ಅವರು ಇಂದು ಗುರುವಾರ ಸಾಗರ ತಾಲ್ಲೂಕಿನ ಮುಂಗರವಳ್ಳಿಯ ವಧುವಿನೊಂದಿಗೆ ವಿವಾಹ ನಿಶ್ಚಯ ಕಾರ್ಯಕ್ರಮ ನೆರವೇರುತ್ತಿರುವುದು ಒಂಟಿಯಲ್ಲ. ಜಂಟಿಯಾಗುವ ವೈವಾಹಿಕ ಜೀವನದ ಪ್ರಥಮ ಹೊಸ್ತಿಲಿನಲ್ಲಿರುವ ಅವರಿಗೆ ಶುಭವಾಗಲಿ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddharamaih ಪರಿಹಾರ ರೂಪದಲ್ಲಿ ಪಡೆದಿದ್ದ ನಿವೇಶನಗಳನ್ನ ಪತ್ನಿ ಹಿಂದಿರುಗಿಸಿದ್ದಾರೆ- ಸಿದ್ಧರಾಮಯ್ಯ

CM Siddharamaih ಮೈಸೂರಿನ ಮುಡಾ ಭೂಸ್ವಾಧೀನ ನಡೆಸದೆ ವಶಕ್ಕೆ ಪಡೆದಿದ್ದ...

R. Ashok ಸಿದ್ಧರಾಮಯ್ಯನವರಿಗೆ ತಮ್ಮ ತಪ್ಪಿನ ಅರಿವಾಯಿತಲ್ಲ”-ಆರ್ .ಅಶೋಕ್ ಪ್ರತಿಕ್ರಿಯೆ

R. Ashok ಮೂಡಾ ಹಗರಣದಲ್ಲಿ ಕಾನೂನಿನ ಕುಣಿಕೆ ಬಿಗಿಯಾಗುತ್ತಿದ್ದಂತೆ ಸಿಎಂ ಸಿದ್ಧರಾಮಯ್ಯ...

Shivamogga-Bhadravathi Urban Development Authority ಊರಗಡೂರು ನಿವೇಶನ ಪಡೆಯಲು ಅರ್ಜಿ ಸಲ್ಲಿಕೆ ಅಂತಿಮ ದಿನಾಂಕ ಮುಂದೂಡಿಕೆ

Shivamogga-Bhadravathi Urban Development Authority ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರವು ಶಿವಮೊಗ್ಗ ನಗರದ...