ಈ ಬಾರಿ ಕನ್ನಡ ರಾಜ್ಯೋತ್ಸವ ಸಂಭ್ರಮವನ್ನು ಅದ್ಧೂರಿಯಿಂದ ಆಚರಣೆಗೆ ಮಾಡಲು ನಿರ್ಧಾರ ಮಾಡಲಾಗಿದೆ. ಅಕ್ಟೋಬರ್ 28 ರಂದು ನನ್ನ ನಾಡು ನನ್ನ ಹಾಡು ಶೀರ್ಷಿಕೆಯಡಿ ಐತಿಹಾಸಿಕ ಕಾರ್ಯಕ್ರಮ ನಡೆಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಯೋಜನೆ ಹಾಕಿಕೊಂಡಿದೆ. ಈ ಕುರಿತು ಸಚಿವ ಸುನೀಲ್ ಕುಮಾರ್ ಮಾಹಿತಿ ನೀಡಿದ್ದಾರೆ.
ನವೆಂಬರ್ 1ರಂದು ಎಲ್ಲ ಕಡೆ ಕನ್ನಡ ಹಬ್ಬ ಸಂಭ್ರಮಿಸಲಿದೆ. ಈ ಬಾರಿ ಕನ್ನಡ ರಾಜ್ಯೋತ್ಸವಕ್ಕೆ ಅದ್ಧೂರಿ ಕಾರ್ಯಕ್ರಮಗಳಿಗೆ ತಯಾರಿ ಮಾಡಲಾಗುತ್ತಿದೆ. ಸರ್ಕಾರ ಅನೇಕ ಯೋಜನೆಗಳನ್ನು ಹಾಕಿಕೊಂಡಿದೆ.
ರಾಜ್ಯ, ದೇಶ, ವಿದೇಶಗಳಲ್ಲಿರುವ ಕನ್ನಡಿಗರಿಂದ ಏಕಕಾಲದಲ್ಲಿ ಗಾಯನ ನಡೆಸುವ ಕಾರ್ಯಕ್ರಮವನ್ನು ಹಾಕಿಕೊಂಡಿದೆ. ಇದರ ಜೊತೆಗೆ ವಿದ್ಯಾರ್ಥಿಗಳಿಂದಲೂ ಕೋಟಿ ಕಂಠ ಗಾಯನಕ್ಕೆ ಸಹಕಾರ ಬೇಕಾಗಿದೆ ಎಂದು ಹೇಳಿದ್ದಾರೆ.
ಅಕ್ಟೋಬರ್ 28 ರಂದು ನಡೆಯಲಿರುವ ಕೋಟಿ ಕಂಠ ಗಾಯನ 1 ಕೋಟಿ ಜನ ಹಾಡು ಹಾಡಲಿದ್ದಾರೆ ಎಂದು ವಿಕಾಸಸೌಧದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನೀಲ್ ಕುಮಾರ್ ಅವರು ತಿಳಿಸಿದ್ದಾರೆ.
ಬೆಳಗ್ಗೆ 11 ಗಂಟೆಗೆ 10 ಸಾವಿರ ಕಡೆಗಳಲ್ಲಿ ಕನ್ನಡದ 6 ಹಾಡುಗಳನ್ನು ಹಾಡಬೇಕು.
ವಿಶ್ವವಿದ್ಯಾಲಯ ಪ್ರಮುಖರ ಜೊತೆ ಸಚಿವ ಡಾ. ಅಶ್ವಥ್ ನಾರಾಯಣ್ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ.
ಇದು ನಾಡಿನ ಕಾರ್ಯಕ್ರಮ ನಾಡಿಗೀತೆಯೊಂದಿಗೆ ಕಾರ್ಯಕ್ರಮ ಆರಂಭವಾಗುತ್ತದೆ. ಉದಯವಾಗಲಿ ಚೆಲುವ ಕನ್ನಡ ನಾಡು, ಹಚ್ಚೇವು ಕನ್ನಡದ ದೀಪ , ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು ಹೀಗೆ ಕನಿಷ್ಟ ಆರು ಹಾಡು ಹಾಡಬೇಕ. ಗಾಯನಕ್ಕೆ ನಾಡಿನ ಜನರ ಸಹಕಾರ ಬೇಕು ಎಂದು ಹೇಳಿದ್ದಾರೆ.