ರಾಜ್ಯದಲ್ಲಿ ರಾಹುಲ್ ಗಾಂಧಿ ನೇತೃತ್ವದಲ್ಲಿ ಭಾರತ್ ಜೋಡೋ’ ಯಾತ್ರೆ ಸಾಗು ತ್ತಿದ್ದರೆ, ಮಂಗಳವಾರದಿಂದ ಜನ ಸಂಕಲ್ಪ ಹೆಸರಲ್ಲಿ ಕೃಷ್ಣೆ- ತುಂಗೆಯರನಾಡಲ್ಲಿ ರಾಜ್ಯ ರಾಜಕಾರಣದ ರಣವೀಳ್ಯ ನೀಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.
ಯಡಿಯೂರಪ್ಪ ನೇತೃತ್ವದಲ್ಲಿ “ಜೋಡಿ ಯಾತ್ರೆ’ ಆರಂಭಗೊಳ್ಳಲಿದೆ.
ಎಸ್ಸಿ-ಎಸ್ಟಿ ಮೀಸಲಾತಿ ಪ್ರಮಾಣ ಹೆಚ್ಚಿಸಿರುವ ಹುರುಪಿನಲ್ಲಿರುವ ಬಿಜೆಪಿಗೆ ಜೋಡಿ ಯಾತ್ರೆ ಇನ್ನಷ್ಟು ಹುಮ್ಮಸ್ಸು ತುಂಬಲಿದೆ. ಮೀಸ ಲಾತಿ ಹೆಚ್ಚಿಸುವ ನಿರ್ಧಾರ ಕೈಗೊಂಡ ಬಳಿಕ ಇದು ಮೊದಲ ಕಾರ್ಯಕ್ರಮ ವಾಗಿದ್ದು, ರಾಯಚೂರು ಗ್ರಾಮಾಂ ತರ ಎಸ್ಟಿ ಮೀಸಲು ವಿಧಾನಸಭಾ ಕ್ಷೇತ್ರದಿಂದ ಜನಸಂಕಲ್ಪ ಯಾತ್ರೆ ಹೊರಡುತ್ತಿರುವುದು ವಿಶೇಷ.
50 ಸಾವಿರಕ್ಕೂ ಹೆಚ್ಚು ಜನ ಭಾಗಿಯಾಗುವ ನಿರೀಕ್ಷೆ ಇದೆ.
ರಾಯಚೂರು ಜಿಲ್ಲೆಯಲ್ಲಿ ಪರಿಶಿಷ್ಟ ಪಂಗಡ ಸಮುದಾಯದ ಪ್ರಾಬಲ್ಯ ವಿದ್ದು, ಏಳು ವಿಧಾನಸಭೆ ಕ್ಷೇತ್ರಗಳಲ್ಲಿ ನಾಲ್ಕು ಕ್ಷೇತ್ರಗಳು ಈ ಸಮುದಾಯಕ್ಕೇ ಮೀಸಲು. ಈಗ ಕಾರ್ಯಕ್ರಮ ನಡೆ ಯುತ್ತಿರುವ ರಾಯಚೂರು ಗ್ರಾಮೀಣ ಕ್ಷೇತ್ರವೂ ಮೀಸಲು ಕ್ಷೇತ್ರ. ಹಾಗಾಗಿ ಎಸ್‌ಟಿ ಮೋರ್ಚಾ ಅದ್ಧೂರಿ ಕಾರ್ಯಕ್ರಮ ಆಯೋಜಿಸಿದೆ.
ಇದೇ ವೇಳೆ ಮೀಸಲಾತಿ ಹೆಚ್ಚಳಕ್ಕೆ ಕಾರಣ ರಾದ ಸಿಎಂ ಬೊಮ್ಮಾಯಿ ಹಾಗೂ ಮಾಜಿ ಸಿಎಂ ಬಿಎಸ್‌ವೈ ಅವರನ್ನು ಅಭಿನಂದಿಸಲಾಗುತ್ತಿದೆ.
ಅ. 11ರಿಂದ ಆರಂಭವಾಗಿ ಡಿ. 25ರ ವರೆಗೆ ಒಟ್ಟು 26 ದಿನಗಳ ಕಾಲ ರಾಜ್ಯದ 52 ವಿಧಾನಸಭಾ ಕ್ಷೇತ್ರಗಳಲ್ಲಿ ಈ ಜೋಡಿ ಅಂದಾಜು 1,870 ಕಿ.ಮೀ. ಕ್ರಮಿಸಲಿದೆ.
ಸರಕಾರದ ಸಾಧನೆಗಳನ್ನು ಜನರಿಗೆ ತಲುಪಿರುವ ಬಗ್ಗೆ ಮನೆ-ಮನೆಗೆ ತೆರಳಿ ಖಾತರಿ ಪಡಿಸಿಕೊಳ್ಳುವ ಉದ್ದೇಶ ಈ ಯಾತ್ರೆ ಯದ್ದು. ಆ ಮೂಲಕ ರಾಜ್ಯದಲ್ಲಿ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ 150ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯುವ ದೃಢ ಸಂಕಲ್ಪ ಹೊಂದಲಾಗಿದೆ.
ರಾಯಚೂರು ತಾಲೂಕಿನ ಗಿಲ್ಲೆಸೂಗೂರಿಂದ ಯಾತ್ರೆಗೆ ಚಾಲನೆ ಸಿಗಲಿದ್ದು, ಸಿಎಂ ಹಾಗೂ ಮಾಜಿ ಸಿಎಂ ಅವರ ಜೋಡಿ ಯಾತ್ರೆ ಅತ್ಯಂತ ಮಹತ್ವ ಪಡೆದಿದೆ. ಈ ಜೋಡಿ 52 ವಿಧಾನಸಭಾ ಕ್ಷೇತ್ರಗಳಲ್ಲದೆ, ಅ.16ರಂದು ಮೈಸೂರಿನಲ್ಲಿ ನಡೆಯಲಿರುವ ಎಸ್ಸಿ ಮೋರ್ಚಾ, ಅ.30ರಂದು ಕಲಬುರಗಿಯಲ್ಲಿ ಒಬಿಸಿ ಮೋರ್ಚಾ, ನ.13ರಂದು ಹುಬ್ಬಳ್ಳಿಯಲ್ಲಿ ರೈತ ಮೋರ್ಚಾ, ನ.27ರಂದು ಶಿವಮೊಗ್ಗದಲ್ಲಿ ಯುವ ಮೋರ್ಚಾ, ಡಿ.11ರಂದು ಬಳ್ಳಾರಿ ಯಲ್ಲಿ ಎಸ್ಟಿ ಮೋರ್ಚಾ, ಡಿ.25ರಂದು ಬೆಂಗಳೂರಿನಲ್ಲಿ ಮಹಿಳಾ ಮೋರ್ಚಾ ಹಾಗೂ 2023ರ ಜ.8ರಂದು ವಿಜಯಪುರದಲ್ಲಿ ಅಲ್ಪಸಂಖ್ಯಾಕರ ಮೋರ್ಚಾದ ಬೃಹತ್ ಸಮಾವೇಶಗಳಲ್ಲಿ ಪಾಲ್ಗೊಳ್ಳಲಿದೆ.
ಇವರು ಸಂಚರಿಸುವ 52 ವಿಧಾನಸಭಾ ಕ್ಷೇತ್ರಗಳಲ್ಲಿ ಎಸ್ಸಿ ಮೀಸಲು 10, ಎಸ್ಟಿ ಮೀಸಲು 5, ಸಾಮಾನ್ಯ 37 ಕ್ಷೇತ್ರಗಳಿವೆ. ಇದರಲ್ಲಿ ಬಿಜೆಪಿ ಶಾಸಕರು ಇರುವ 28, ಕಾಂಗ್ರೆಸ್ ಶಾಸಕರು ಇರುವ 20 ಹಾಗೂ ಜೆಡಿಎಸ್ ಶಾಸಕರು ಇರುವ 4 ಕ್ಷೇತ್ರಗಳಿವೆ.
ಈಗಾಗಲೇ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ಹಾಗೂ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ನೇತೃತ್ವದ ತಂಡಗಳು ಯಾತ್ರೆ ಆರಂಭಿಸಿದ್ದು, 75 ವಿಧಾನಸಭಾ ಕ್ಷೇತ್ರಗಳಲ್ಲಿ ಸಂಚರಿಸಲಿವೆ.