ಕೇಂದ್ರ ಸರ್ಕಾರ ಹೆದ್ದಾರಿ ಟೋಲ್ ನೀತಿಯನ್ನು ಪರಿಷ್ಕರಿಸುತ್ತಿದೆ. ಇದರ ಪ್ರಕಾರ ವಾಹನದ ಗಾತ್ರ ಹಾಗೂ ಅದು ಸಂಚರಿಸಿರುವ ದೂರವನ್ನು ಆಧರಿಸಿ ಟೋಲ್ ದರವನ್ನು ನಿಗದಿಪಡಿಸಲಿದೆ.
ಜನರು ತಾವು ಬಳಸಿದ ವಿದ್ಯುಚ್ಛಕ್ತಿಯ ಮೊತ್ತವನ್ನು ಪಾವತಿಸುವಂತೆಯೇ ವಾಹನದ ಗಾತ್ರ ಹಾಗೂ ರಸ್ತೆ ಮೂಲಸೌಕರ್ಯಗಳ ಮೇಲಿನ ವಾಹನದ ಸಂಭಾವ್ಯ ಒತ್ತಡ ಆಧರಿಸಿ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪಾವತಿಸುವ ಟೋಲ್ ಮೊತ್ತವನ್ನು ನಿರ್ಧರಿಸಬಹುದಾಗಿದೆ.
ಟೋಲ್ ಸಂಗ್ರಹಣೆ ಪ್ರಕ್ರಿಯೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಈ ಕ್ರಮ ಕೈಗೊಳ್ಳುತ್ತಿದೆ. ವಿಭಿನ್ನ ಗಾತ್ರದ ವಾಹನಗಳು ರಸ್ತೆ ಮೂಲಸೌಕರ್ಯಗಳ ಮೇಲೆ ವಿಭಿನ್ನ ಒತ್ತಡವನ್ನು ಬೀರುತ್ತವೆ. ಇದರ ಅನುಸಾರವೇ ಜನರು ಟೋಲ್ ಪಾವತಿಸಬೇಕು ಎಂದು ಸರ್ಕಾರ ಅಭಿಪ್ರಾಯಪಟ್ಟಿದೆ.