Tuesday, March 24, 2026
Tuesday, March 24, 2026

ಅಡಕೆ ಎಲೆಚುಕ್ಕೆರೋಗ ಔಷಧ ಸಿಂಪರಣೆಗೆ ರಾಜ್ಯದ ಆರ್ಥಿಕ ನೆರವು-ಆರಗ ಜ್ಞಾನೇಂದ್ರ

Date:

ರಾಜ್ಯ ಸರ್ಕಾರವು ಅಡಿಕೆ ಬೆಳಗಾರರಿಗೆ ಸಿಹಿಸುದ್ದಿಯೊಂದನ್ನು ನೀಡಿದ್ದು, ಅಡಿಕೆಗೆ ಎಲೆಚುಕ್ಕೆ ರೋಗ ಹಿನ್ನೆಲೆಯಲ್ಲಿ ಅಡಿಕೆ ಬೆಳೆಗಾರರಿಗೆ ತಲಾ 1 ಹೆಕ್ಟೇರ್ ಗೆ ಔಷಧ ಸಿಂಪಡಣೆಗೆ ರಾಜ್ಯ ಸರ್ಕಾರ 4 ಸಾವಿರ ರೂ. ಆರ್ಥಿಕ ನೆರವು ನೀಡಲಿದೆ.

ಈ ಕುರಿತು ಮಾಹಿತಿ ನೀಡಿರುವ ಗೃಹ ಸಚಿವ ಅರಗಜ್ಞಾನೇಂದ್ರ, ರಾಜ್ಯದ ಮಲೆನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಹರಡುತ್ತಿರುವ ಅಡಿಕೆ ಎಲೆಚುಕ್ಕೆ ರೋಗ ನಿಯಂತ್ರಣಕ್ಕೆ ಸರ್ಕಾರ 8 ಕೋಟಿ ರೂ. ಅನುದಾನ ನೀಡಿದೆ. ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ, ಉತ್ತರಕನ್ನಡ,ದಕ್ಷಿಣ ಕನ್ನಡ, ಕೊಡಗು ಹಾಗೂ ಹಾಸನ ಜಿಲ್ಲೆಗಳಲ್ಲಿ ಸುಮಾರು 20 ಸಾವಿರ ಹೆಕ್ಟೇರ್ ಅಡಿಕೆ ಬೆಳೆ ಪ್ರದೇಶದಲ್ಲಿ ಎಲೆ ಚುಕ್ಕಿ ರೋಗ ಹಬ್ಬಿದ್ದು, ಸರ್ಕಾರ ನಿಯಂತ್ರಣಕ್ಕೆ ಮೊದಲ ಹಂತದಲ್ಲಿ 8 ಕೋಟಿ ರೂ. ಅನುದಾನ ನೀಡಿದೆ.

ಈ ಪೈಕಿ 4 ಕೋಟಿ ರೂ. ಬಿಡುಗಡೆ ಮಾಡಿದೆ ಎಂದು ತಿಳಿಸಿದ್ದಾರೆ.ಅಡಿಕೆಗೆ ಎಲೆಚುಕ್ಕೆ ರೋಗಕ್ಕೆ ಔಷಧಿ ಸಿಂಪಡಣೆಗೆ ಪ್ರತಿ ಹೆಕ್ಟೇರ್ ಗೆ 4 ಸಾವಿರ ರೂ. ಹಾಗೂ ಮೊದಲ ಸಿಂಪಡಣೆಗೆ 1.5 ಹೆಕ್ಟೇರ್ ಅಡಿಕೆ ತೋಟ ಹೊಂದಿರುವ ರೈತರಿಗೆ ಆರ್ಥಿಕ ನೆರವು ಸಿಗಲಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

MESCOM ಸಾಗರ : ಮೆಸ್ಕಾಂ ಜನ ಸಂಪರ್ಕ ಸಭೆ

MESCOM ಸಾಗರ ಮೆಸ್ಕಾಂ ಗ್ರಾಮೀಣ ಉಪವಿಭಾಗ ಕಛೇರಿಯಲ್ಲಿ ಮಾ 26 ರಂದು...

Manasadhara Trust ಸರ್ಕಾರಿ ಶಾಲಾ ಮಕ್ಕಳಿಗಾಗಿ ಮನಃಸ್ಫೂರ್ತಿ ಬೇಸಿಗೆ ಶಿಬಿರ

Manasadhara Trust ಮಾನಸಾಧಾರ ಟ್ರಸ್ಟ್(ರಿ), ಮನಃಸ್ಫೂರ್ತಿ ವಿಶೇಷ ಶಾಲೆ(ರಿ) ಮತ್ತು ಕಲಿಕಾ...

India Scouts and Guides ರಸ್ತೆ ಸಂಚಾರ ನಿಯಮಗಳನ್ನು ಪ್ರತಿಯೊಬ್ಬರೂ ಪಾಲಿಸಿ

India Scouts and Guides ಸಮಾಜದ ಪ್ರತಿಯೊಬ್ಬರೂ ರಸ್ತೆ ಸಂಚಾರ ನಿಯಮಗಳನ್ನು...

B.Y. Raghavendra ಯೋಜನೆಗಳು-ಬ್ಯಾಂಕಿಂಗ್ ಸೇವೆಗಳನ್ನು ಜನಸಾಮಾನ್ಯರಿಗೆ ತಲುಪಿಸಬೇಕು : ಬಿ.ವೈ.ರಾಘವೇಂದ್ರ

B.Y. Raghavendra ಪ್ರತಿಯೊಬ್ಬ ನಾಗರೀಕರಿಗೆ ಆರ್ಥಿಕ ಸಬಲೀಕರಣ ನೀಡಬೇಕೆಂಬ ಉದ್ದೇಶದಿಂದ ಅನುಷ್ಟಾನಗೊಳಿಸಲಾಗಿರುವ...