Wednesday, October 2, 2024
Wednesday, October 2, 2024

ಸ್ವಚ್ಛತೆ ಶುದ್ಧ ಕುಡಿಯುವ ನೀರು ಪೌಷ್ಠಿಕ ಆಹಾರ ಆರೋಗ್ಯ ಅರಿವು ಮುಖ್ಯ-ಡಾ.ಸೆಲ್ವಮಣಿ

Date:

ರಕ್ತಹೀನತೆಯಿಂದ ಮುಕ್ತಿ ಹೊಂದಲು ಸ್ವಚ್ಚತೆ, ಶುದ್ದ ಕುಡಿಯುವ ನೀರು, ಪೌಷ್ಟಿಕಾಂಶ ಆಹಾರ ಬಳಕೆ ಮತ್ತು ಶೌಚಾಲಯ ಬಳಕೆ ಕುರಿತು ಸತತವಾಗಿ ಅರಿವು ಮೂಡಿಸಬೇಕೆಂದು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ.ಆರ್ ತಿಳಿಸಿದರು.
ರಾಷ್ಟ್ರೀಯ ಆರೋಗ್ಯ ಅಭಿಯಾನ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಡಿಹೆಚ್‌ಓ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ‘ಅನೀಮಿಯಾ ಮುಕ್ತ ಭಾರತ’ ಜಿಲ್ಲಾ ಮಟ್ಟದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಶಿವಮೊಗ್ಗ ಜಿಲ್ಲೆಯಲ್ಲಿ ಸುಮಾರು 3500 ರಕ್ತಹೀನತೆಯಿಂದ ಬಳಲುವ ಮಕ್ಕಳಿದ್ದಾರೆ. ಹಾಗೂ ಸಾಮಾನ್ಯವಾಗಿ ಎಲ್ಲ ವಯೋಮಾನದವರು ರಕ್ತಹೀನತೆಯಿಂದ ಬಳಲುತ್ತಾರೆ. ಆದಕಾರಣ ರಕ್ತಹೀನತೆಗೆ ಮುಖ್ಯ ಕಾರಣಗಳಾದ ಜಂತು ಹುಳು ನಿವಾರಣೆ ಕ್ರಮವಾದ ಅಲ್ಬೆಂಡಜೋಲ್ ಮಾತ್ರೆಗಳನ್ನು ಎಲ್ಲ ವಯೋಮಾನದವರಿಗೆ ನೀಡಬೇಕು. ಗ್ರಾಮಗಳಲ್ಲಿ ನಿರ್ಮಿಸಿಕೊಡಲಾಗಿರುವ ಶೌಚಾಲಗಳನ್ನು ಕೆಲವೆಡೆ ಬಳಕೆ ಮಾಡುತ್ತಿಲ್ಲ. ಶೌಚಾಲಯ ಬಳಕೆ ಅಭ್ಯಾಸ ಮಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಸಹ ಅರಿವು ಮೂಡಿಸುವ ಕಾರ್ಯ ಆಗಬೇಕು. ಜೊತೆಗೆ ಎಲ್ಲರಿಗೆ ಕೈತೊಳೆಯುವ ವಿಧಾನ ಮತ್ತು ಪೌಷ್ಟಿಕಾಂಶ ಭರಿತ ಆಹಾರ ಅಭ್ಯಾಸ ಕುರಿತು ಅರಿವು ಹೆಚ್ಚಿಸಬೇಕು.

ಸ್ವಾತಂತ್ರ್ಯ ಲಭಿಸಿದ ವೇಳೆ ಹಸಿವು ನೀಗಿಸುವುದೇ ರಾಷ್ಟçಕ್ಕೆ ಸವಾಲಾಗಿತ್ತು. ಆದರೆ ಇಂದು ಎಲ್ಲರಿಗೆ ಆಹಾರ ದೊರಕುತ್ತಿದೆ. ಆದರೆ ಪೌಷ್ಟಿಕಾಂಶಭರಿತ ಆಹಾರ ಸಿಗುತ್ತಿಲ್ಲ. ಈ ನಿಟ್ಟಿನಲ್ಲಿ ಸರ್ಕಾರ ಮಹಿಳೆ, ಮಕ್ಕಳು, ದುರ್ಬಲರಿಗೆ ಪೌಷ್ಟಿಕ ಆಹಾರ ನೀಡುವ ಯೋಜನೆಗಳನ್ನು ಹಾಕಿಕೊಂಡಿದೆ. ಒಂದೇ ರೀತಿಯ ಆಹಾರ ಬಳಸದೆ, ಸಮತೋಲಿತ ಆಹಾರ ಬಳಕೆ ಅಭ್ಯಾಸ ಮಾಡುವ ಕುರಿತು ಅರಿವು ಮೂಡಿಸಬೇಕೆಂದರು.

ವಿವಿಧ ತಾಲ್ಲೂಕುಗಳ ಆರೋಗ್ಯ ಕೇಂದ್ರದವರು ಅತಿ ಉತ್ತಮವಾಗಿ ಪೌಷ್ಟಿಕಾಂಶ ಆಹಾರಗಳ ಕುರಿತು ವಸ್ತುಪ್ರದರ್ಶನ, ಪ್ರಾತ್ಯಕ್ಷಿಕೆ ಮತ್ತು ಮಾಡೆಲ್‌ಗಳನ್ನು ತಯಾರಿಸಿದ್ದೀರಿ. ದಸರಾ ಮಳಿಗೆಯಲ್ಲಿ ಸಹ ಇದನ್ನು ಪ್ರದರ್ಶಿಸಿದಲ್ಲಿ ಬಹುಜನರಿಗೆ ಇದು ತಲುಪಲಿದೆ ಎಂದರು.

ಆರ್‌ಸಿಹೆಚ್‌ಓ ಡಾ.ನಾಗರಾಜನಾಯ್ಕ್ ಮಾತನಾಡಿ, ಅನೀಮಿಯ ಎಂದರೆ ರಕ್ತಹೀನತೆ. ರಕ್ತಹೀನತೆ ಗಂಭೀರತೆಯಿಂದ ಬಳಲುತ್ತಿರುವ ದೇಶಗಳಲ್ಲಿ ಭಾರತವೂ ಒಂದು. ಗ್ರಾಮಾಂತರ ಭಾಗದಲ್ಲೇ ಅನೀಮಿಯಾ ಇದು ಹೆಚ್ಚಾಗಿದ್ದು ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಅನೀಮಿಯಾ ಮುಕ್ತ ಭಾರತ ಎಂಬ ಅಭಿಯಾನ ಹಮ್ಮಿಕೊಂಡಿದ್ದು, ಅನೀಮಿಯಾ ಮುಕ್ತ ಭಾರತ ಮಾಡುವುದು ನಮ್ಮ ಪ್ರಧಾನಿಯವರ ಕನಸಾಗಿದೆ.

ಭಾರತದಲ್ಲಿ ಜನಸಂಖ್ಯೆಯ ಶೇ.58.6 ರಷ್ಟು ಮಕ್ಕಳು, ಶೇ೨53.2 ರಷ್ಟು ಮಹಿಳೆಯರು ಮತ್ತು ಶೇ.50.4 ರಷ್ಟು ಗರ್ಭಿಣಿಯರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ರಕ್ತಹೀನತೆಗೆ ಮುಖ್ಯ ಕಾರಣ ಬಯಲು ಶೌಚಾಲಯ. ಇದರಿಂದ ಜಂತುಹುಳು ಕಾಲಿನಿಂದ ದೇಹ ಸೇರಿ ರಕ್ತ ಹೀರುತ್ತವೆ. ಆದ್ದರಿಂದ ಜಿ.ಪಂ ವತಿಯಿಂದ ಪ್ರತಿ ಗ್ರಾಮದಲ್ಲಿ ಶೌಚಾಲಯ ನಿರ್ಮಿಸಲಾಗಿದೆ. ಹಾಗೂ ಆರೋಗ್ಯ ಇಲಾಖೆಯಿಂದ ಇದರ ಬಳಕೆ ಕುರಿತು ಅರಿವು ಮೂಡಿಸಲಾಗುತ್ತಿದೆ. ಇದರೊಂದಿಗೆ ಸ್ವಚ್ಚತೆ ಕೂಡ ಅಷ್ಟೇ ಮುಖ್ಯ. ಪ್ರತಿ ಶಾಲೆ, ಅಂಗನವಾಡಿಗಳಲ್ಲಿ ಮಕ್ಕಳಿಗೆ ಕೈತೊಳೆಯುವ ವಿಧಾ ತಿಳಿಸಲಾಗುತ್ತಿದೆ. ಶುದ್ದ ಕುಡಿಯುವ ನೀರು ಬಳಕೆ ಅರಿವು, ಉತ್ತಮ ಪೌಷ್ಟಿಕಾಂಶಯುಕ್ತ ಆಹಾರ ಬಳಕೆ ಕುರಿತು ಅರಿವು ಮೂಡಿಸಲಾಗುತ್ತಿದ್ದು, ಎಲ್ಲೆಡೆ ಇದರ ಜಾಗೃತಿ ಆಗಬೇಕು. ಸರ್ಕಾರದ ವತಿಯಿಂದ ಪ್ರತಿ ವರ್ಷದಲ್ಲಿ 2ಬಾರಿ 18 ವರ್ಷದವರಿಗೆ ಉಚಿತವಾಗಿ ಜಂತುಹುಳು ನಿವಾರಣಾ ಮಾತ್ರೆಗಳು ಮತ್ತು ಗರ್ಭಿಣಿ, ಬಾಣಂತಿ ಮತ್ತು ಅಂಗನವಾಡಿ ಮಕ್ಕಳಿಗೆ ಕಬ್ಬಿಣಾಂಶ, ಫೊಲಿಕ್ ಆಸಿಡ್ ಮಾತ್ರೆಗಳು ಮತ್ತು ಇತರೆ ಪೌಷ್ಟಿಕ ಆಹಾರ ನೀಡಲಾಗುತ್ತಿದೆ. ಸರ್ಕಾರದ ಈ ಯೋಜನೆಗಳ ಸದುಪಯೋಗದೊಂದಿಗೆ ಎಲ್ಲರೂ ಈ ಬಗ್ಗೆ ಎಚ್ಚೆತ್ತುಕೊಂಡು ರಕ್ತಹೀನತೆಯಿಂದ ಮುಕ್ತಿ ಪಡೆಯಬೇಕೆಂದು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಜಿಲ್ಲೆಯ ಆರು ತಾಲ್ಲೂಕುಗಳ ಆಯ್ದ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಉಪ ಕೇಂದ್ರಗಳ ತಂಡಗಳು ಪೌಷ್ಟಿಕಾಂಶ ಕುರಿತಾದ ವಸ್ತುಪ್ರದರ್ಶನ ಮತ್ತು ಮಾಡೆಲ್‌ಗಳನ್ನು ಪ್ರದರ್ಶಿಸಿದರು. ಹಾಗೂ ಅನೀಮಿಯಾ ಕುರಿತು ವಿಡಿಯೋ ತುಣುಕನ್ನು ಪ್ರದರ್ಶಿಸಲಾಯಿತು.

ಕಾರ್ಯಕ್ರಮದಲ್ಲಿ ಡಿಟಿಸಿ ಪ್ರಾಂಶುಪಾಲರಾದ ಕಿರಣ್‌ಕುಮಾರ್, ಜಿಲ್ಲಾ ಕಾರ್ಯಕ್ರಮ ಅನುಷ್ಟಾನಾಧಿಕಾರಿಗಳಾದ ಡಾ.ಮಂಜುನಾಥ ನಾಗಲೀಕರ್, ಡಾ.ಶಮಾ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಓ.ಮಲ್ಲಪ್ಪ, ಡಬ್ಲ್ಯೂಹೆಚ್‌ಓ ಕನ್ಸಲ್ಟೆಂಟ್ ವಿಶ್ವನಾಥ್, ತಾಲ್ಲೂಕು ವೈದ್ಯಾಧಿಕಾರಿಗಳು, ಸಿಡಿಪಿಓ, ಆರೋಗ್ಯ ಇಲಾಖೆ ಅಧಿಕಾರಿ, ಸಿಬ್ಬಂದಿಗಳು ಹಾಜರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

CM Siddharamaih ಪರಿಹಾರ ರೂಪದಲ್ಲಿ ಪಡೆದಿದ್ದ ನಿವೇಶನಗಳನ್ನ ಪತ್ನಿ ಹಿಂದಿರುಗಿಸಿದ್ದಾರೆ- ಸಿದ್ಧರಾಮಯ್ಯ

CM Siddharamaih ಮೈಸೂರಿನ ಮುಡಾ ಭೂಸ್ವಾಧೀನ ನಡೆಸದೆ ವಶಕ್ಕೆ ಪಡೆದಿದ್ದ...

R. Ashok ಸಿದ್ಧರಾಮಯ್ಯನವರಿಗೆ ತಮ್ಮ ತಪ್ಪಿನ ಅರಿವಾಯಿತಲ್ಲ”-ಆರ್ .ಅಶೋಕ್ ಪ್ರತಿಕ್ರಿಯೆ

R. Ashok ಮೂಡಾ ಹಗರಣದಲ್ಲಿ ಕಾನೂನಿನ ಕುಣಿಕೆ ಬಿಗಿಯಾಗುತ್ತಿದ್ದಂತೆ ಸಿಎಂ ಸಿದ್ಧರಾಮಯ್ಯ...

Shivamogga-Bhadravathi Urban Development Authority ಊರಗಡೂರು ನಿವೇಶನ ಪಡೆಯಲು ಅರ್ಜಿ ಸಲ್ಲಿಕೆ ಅಂತಿಮ ದಿನಾಂಕ ಮುಂದೂಡಿಕೆ

Shivamogga-Bhadravathi Urban Development Authority ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರವು ಶಿವಮೊಗ್ಗ ನಗರದ...