ದೇಶದ ಎರಡನೇ ಪ್ರಧಾನಿ, ಸ್ವಾತಂತ್ರ್ಯ ಸಮರದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಹೋರಾಟ ನಡೆಸಿದ ಮತ್ತು ಬಡವರ ಏಳಿಗೆಗಾಗಿ ಸರ್ವಥಾ ಶ್ರಮಿಸಿದ, 1965ರ ಇಂಡೋ-ಪಾಕಿಸ್ಥಾನ ಯುದ್ಧದಲ್ಲಿ ಸೇನೆಯನ್ನು ಹುರಿದುಂಬಿಸಿ ಭಾರತ ಗೆಲ್ಲುವಂತೆ ಮಾಡಿದ ಮಹಾನ್ ನಾಯಕರಿವರು.
1964ರಿಂದ 1966ರ ವರೆಗೆ ಪ್ರಧಾನಿ ಹುದ್ದೆಯಲ್ಲಿದ್ದ ಇವರು, ದೇಶದ ಏಳಿಗೆಗಾಗಿ ನೀಡಿದ ಕೊಡುಗೆಗಳು ನೂರಾರು. ಇಂದು ಲಾಲ್ ಬಹದ್ದೂರ್ ಶಾಸ್ತ್ರಿಯವರ ಜನ್ಮದಿನ.
1904, ಅಕ್ಟೋಬರ್ 2
ಇದು ಲಾಲ್ ಬಹದ್ದೂರ್ ಶಾಸ್ತ್ರಿಯವರು ಜನ್ಮತಾಳಿದ ವರ್ಷ. ಉತ್ತರ ಪ್ರದೇಶದ ಮುಘಲ್‌ಸರಾಯಿಯಲ್ಲಿ ಹುಟ್ಟಿದ ಇವರು, 1920ರಲ್ಲೇ ಸ್ವಾತಂತ್ರ್ಯ ಚಳವಳಿಗೆ ಧುಮುಕಿದರು. ಆರಂಭ ದಿಂದಲೂ ಮಹಾತ್ಮಾ ಗಾಂಧೀಜಿಯವರ ಕಟ್ಟಾ ಅನುಯಾಯಿ ಯಾಗಿದ್ದವರು. 1964ರಲ್ಲಿ ನೆಹರೂ ಅವರ ಮರಣಾನಂತರ, ಪ್ರಧಾನಿ ಹುದ್ದೆಗೆ ಏರಿ, ಜೈ ಜವಾನ್ ಮತ್ತು ಜೈಕಿಸಾನ್ ಎಂಬ ಉದ್ಘೋ ಷದ ಮೂಲಕ ದೇಶಾದ್ಯಂತ ಹೊಸದೊಂದು ಆಂದೋಲನವನ್ನೇ ಸೃಷ್ಟಿಸಿದರು.