ಬೆಂಗಳೂರು ಏರೋಸ್ಪೇಸ್ ವಿಭಾಗ ಆಯೋಜಿಸಿದ್ದ ಏಕೀಕೃತ ಕ್ರಯೋಜನಿಕ್ ಇಂಜಿನ್ ಉತ್ಪಾದನಾ ಸೌಲಭ್ಯ (ಐಸಿಎಂಎಫ್) ಉದ್ಘಾಟಿಸಿ ಮಾತನಾಡಿದರು. ಮುಂದಿನ 25 ವರ್ಷಗಳಲ್ಲಿ ಭಾರತ ಅಮೃತ ಕಾಲವನ್ನು ಪ್ರವೇಶಿಸುವುದರಿಂದ ಭವಿಷ್ಯದಲ್ಲಿ ಎಚ್ಎಎಲ್ ಮತ್ತು ಇಸ್ರೋ ಸಂಸ್ಥೆಗಳು ಮಹತ್ವದ ಮತ್ತು ಸಕಾರಾತ್ಮಕ ಪಾತ್ರ ನಿರ್ವಹಿಸುತ್ತವೆ ಎಂದು ತಿಳಿಸಿದರು.
ಎಚ್ಎಎಲ್ ಮತ್ತು ಇಸ್ರೋ ಜಂಟಿಯಾಗಿ ಇಡೀ ದೇಶಕ್ಕೆ ಅತ್ಯಾಧುನಿಕ ಸೌಲಭ್ಯ ಹೊಂದಲು ಕ್ರಯೋಜೆನಿಕ್ ಮತ್ತು ಸೆಮಿ-ಕ್ರಯೋಜೆನಿಕ್ ಎಂಜಿನ್ಗಳನ್ನು ತಯಾರಿಸುತ್ತಿವೆ. ಭಾರತವು ಈ ಸಾಮರ್ಥ್ಯ ಹೊಂದಿರುವ ವಿಶ್ವದ 6ನೇ ದೇಶವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಐಸಿಎಂಎಫ್ ಉದ್ಘಾಟನೆ ಎಚ್ಎಎಲ್ ಮತ್ತು ಇಸ್ರೋಗೆ ಮಾತ್ರವಲ್ಲ ಇಡೀ ದೇಶಕ್ಕೆ ಐತಿಹಾಸಿಕ ಕ್ಷಣ. ರಕ್ಷಣಾ ಕ್ಷೇತ್ರದಲ್ಲಿ ಭಾರತ ಆರ್ತನಿರ್ಭರವಾಗಲು ಎಚ್ಎಎಲ್ ಅಪಾರ ಕೊಡುಗೆ ನೀಡಿದೆ. ಸಂಶೋಧನೆ, ಅಭಿವೃದ್ಧಿ ಮತ್ತು ವಿವಿಧ ಏರ್ಕ್ರಾಫ್ಟ್ ಪ್ಲಾಟ್ಫಾಮರ್್ಗಳ ತಯಾರಿಕೆಯಲ್ಲಿ ತನ್ನ ಸಾಮರ್ಥ್ಯವನ್ನು ಮತ್ತೆ ಮತ್ತೆ ಪ್ರದರ್ಶಿಸಿದೆ ಎಂದು ಶ್ಲಾಘಿಸಿದರು. ಕಾರ್ಯತಂತ್ರದ ರಕ್ಷಣೆ ಮತ್ತು ಅಭಿವೃದ್ಧಿಗೆ ಎಚ್ಎಎಲ್ ಮತ್ತು ಇಸ್ರೋ ಜತೆಯಾಗಿ ಕೊಡುಗೆ ನೀಡುತ್ತಿವೆ. ರಕ್ಷಣಾ ಸಂಬಂಧಿತ ಉಪಕರಣಗಳನ್ನು ತಯಾರಿಸುವ ಶ್ರೇಷ್ಠ ದರ್ಜೆಯ ಸೌಲಭ್ಯ ಹೊಂದಿರುವ ಎಚ್ಎಎಲ್ ದೇಶಕ್ಕೆ ಅಮೂಲ್ಯ ಆಸ್ತಿ ಎಂದರು. ಇದೇ ಸಂದರ್ಭದಲ್ಲಿ ರಾಷ್ಟ್ರಪತಿಗಳು ದಕ್ಷಿಣ ವಲಯ ರಾಷ್ಟ್ರೀಯ ವೈರಾಲಜಿ ಸಂಸ್ಥೆಯ ಶಂಕುಸ್ಥಾಪನೆ ನೆರವೇರಿಸಿದರು.
ರಾಜ್ಯಪಾಲ ಗೆಹಲೋತ್, ಕೇಂದ್ರ ಸಚಿವೆ ಭಾರತಿ ಪ್ರವೀಣ್ ಪವಾರ್, ಎಚ್ಎಎಲ್ ಅಧ್ಯಕ್ಷ ಸಿ.ಬಿ.ಅನಂತಕೃಷ್ಣನ್, ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್, ಸಚಿವ ಡಾ.ಕೆ.ಸುಧಾಕರ್ ಮತ್ತಿತರರು ಉಪಸ್ಥಿತರಿದ್ದರು.