Thursday, November 28, 2024
Thursday, November 28, 2024

ಪ್ರವಾಸಿಗರ ಆಕರ್ಷಣೆಯಾಗಿದ್ದ ಹುಲಿ ಹನುಮ ಇನ್ನಿಲ್ಲ

Date:

ಶಿವಮೊಗ್ಗದ ತ್ಯಾವರೆಕೊಪ್ಪ ಹುಲಿ,ಸಿಂಹಧಾಮದಲ್ಲಿ ಅತ್ಯಂತ ಹಿರಿಯ ಹುಲಿ ಎಂದು ಖ್ಯಾತಿ ಪಡೆದಿರುವ 20 ವರ್ಷದ ವಯಸ್ಸಿನ ಹುಲಿ ಹನುಮ ಬುಧವಾರ ರಾತ್ರಿ ವಯೋಸಹಜ ಅನಾರೋಗ್ಯದಿಂದ ಮೃತಪಟ್ಟಿದೆ.

ಹುಲಿ,ಸಿಂಹ ಧಾಮದಲ್ಲಿಯೇ ಇದ್ದ ಚಾಮುಂಡಿ ಮತ್ತು ಮಲೇಶಂಕರ ಹುಲಿಗಳ ಸಾಂಗತ್ಯದಿಂದಾಗಿ ರಾಮ, ವಾಲಿ ಮತ್ತು ಹನುಮ ಎಂಬ 3 ಗಂಡು ಹುಲಿಗಳು 2002ರಲ್ಲಿ ಜನಿಸಿದ್ದವು.

ಅದರಲ್ಲಿ ಹನುಮ ಅತಿ ದೀರ್ಘ ಅವಧಿಯಿಂದ ಈ ವನ್ಯಧಾಮದಲ್ಲಿ ಇರುವ ಹುಲಿ ಎಂಬ ಶ್ರೇಯಕ್ಕೆ ಪಾತ್ರವಾಗಿತ್ತು. ಜೊತೆಗೆ ಪ್ರವಾಸಿಗರ ಆಕರ್ಷಣೆಗೂ ಕಾರಣವಾಗಿತ್ತು.

ಹನುಮನ ಸಾವಿನಿಂದ ವನ್ಯಧಾಮದಲ್ಲಿ ಈಗ ಹುಲಿಗಳ ಸಂಖ್ಯೆ ನಾಲ್ಕಕ್ಕೆ ಇಳಿದಿದೆ. ಕಳೆದ ಎರಡೂವರೆ ವರ್ಷಗಳಲ್ಲಿ ಹುಲಿ, ಸಿಂಹಧಾಮದಲ್ಲಿ ವಾಲಿ, ಭರತ, ಹನುಮ ಸೇರಿ 3 ಹುಲಿಗಳು ಸಾವನ್ನಪ್ಪಿವೆ.

ಸಾವಿಗೀಡಾದ ಹುಲಿ ಹನುಮನ ಮರಣೋತ್ತರ ಪರೀಕ್ಷೆ ನಡೆಸಿ ಗುರುವಾರ ವನ್ಯಧಾಮದಲ್ಲಿಯೇ ಅಂತ್ಯಕ್ರಿಯೆ ನಡೆಸಲಾಯಿತು ಎಂದು ತ್ಯಾವರೆಕೊಪ್ಪದ ಹುಲಿ-ಸಿಂಹಧಾಮದ ಕಾರ್ಯನಿರ್ವಾಹಕ ಅಧಿಕಾರಿ ಮುಕುಂದ್‌ ಚಂದ್ರ ಅವರು ಮಾಹಿತಿ ನೀಡಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shivamogga Police ಅಪಘಾತ ನಡೆಸಿದ ವ್ಯಕ್ತಿ ಪತ್ತೆಗೆ ಮನವಿ

Shivamogga Police ಅ. 10 ರಂದು ರಾತ್ರಿ 7.20...

PM Narendra Modi ವಿಕಸಿತ ಭಾರತ್ ಯುವ ನಾಯಕರ ಸಂಭಾಷಣೆ: ರಸಪ್ರಶ್ನೆ ಮತ್ತು ಪ್ರಬಂಧ ಸ್ಪರ್ಧೆ

PM Narendra Modi ಯುವ ಜನರಿಗೆ ಸನ್ಮಾನ್ಯ ಪ್ರಧಾನಿಯವರೊಂದಿಗೆ ನೇರವಾಗಿ ಸಂವಾದ...

DR.BR. Ambedkar Residential School for Girls ವಸತಿ ಶಾಲೆಯಲ್ಲಿ ಸ್ಟಾಫ್ ನರ್ಸ್ ಹುದ್ದೆಗೆ ಅರ್ಜಿ ಆಹ್ವಾನ

DR.BR. Ambedkar Residential School for Girls ಡಾ.ಬಿ.ಆರ್ ಅಂಬೇಡ್ಕರ್ ಬಾಲಕಿಯರ...

Department of Archeology Museums and Heritage ಕಲ್ಮನೆ ಗ್ರಾಮದಲ್ಲಿ ಕಲ್ಯಾಣ ಚಾಲುಕ್ಯರ ಎರಡು ಶಾಸನ ಪತ್ತೆ

Department of Archeology Museums and Heritage ಪುರಾತತ್ವ ಸಂಗ್ರಹಾಲಯಗಳು ಮತ್ತು...