ನಿಷೇಧಿತ ಭಯೋತ್ಪಾದಕ ಸಂಘಟನೆ ಜೊತೆ ನಂಟು ಹೊಂದಿರುವ ಆರೋಪ ಹಿನ್ನೆಲೆ ಶಿವಮೊಗ್ಗ ಪೊಲೀಸರ ವಿಶೇಷ ತನಿಖಾ ತಂಡವು ಇಬ್ಬರನ್ನು ಬಂಧಿಸಿದೆ.
ಮಂಗಳೂರಿನ 22 ವರ್ಷದ ಮಾಜ್ ಮುನೀರ್ ಅಹಮ್ಮದ್ ಮತ್ತು ಸಯ್ಯದ್ ಯಾಸೀನ್ ಬಂಧಿತ ಯುವಕರು.
ಮತ್ತೋರ್ವನಿಗಾಗಿ ಪೊಲೀಸರ ಶೋಧ ನಡೆಸುತ್ತಿದ್ದಾರೆ. ನಿಷೇಧಿತ ಭಯೋತ್ಪಾದಕ ಸಂಘಟನೆಯ ನಂಟನ್ನು ಹೊಂದಿರುವ ಕಾರಣ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾನೂನುಬಾಹಿರ ಚಟುವಟಿಕೆಗಳು ಕಾಯಿದೆಯಡಿ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಮಾಜ್ ಮುನೀರ್ ಅಹಮ್ಮದ್ ಮತ್ತು ಸಯ್ಯದ್ ಯಾಸೀನ್‍ರನ್ನು ದಸ್ತಗಿರಿ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಬಂಧಿತ ಮಾಜ್ ಗೋಡೆ ಬರಹದ ಆರೋಪಿಯಾಗಿದ್ದ. ಈತ ಕಾಣೆಯಾಗಿರೋ ಬಗ್ಗೆ ಸೋಮವಾರ ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ಅವರು ಮಾಹಿತಿ ನೀಡಿದ್ದಾರೆ.
ಶಿವಮೊಗ್ಗ ಜನತೆಗೆ ಈ ರೀತಿಯ ಉಗ್ರರ ಚಟುವಟಿಕೆಗಳ ಸುದ್ದಿ
ಭಯಭೀತರನ್ನಾಗಿಸಿದೆ. ಒಂದಿಲ್ಲೊಂದು ಹಿಂಸಾಕೃತ್ಯಗಳನ್ನ ಕಂಡಿರುವ ಸಾರ್ವಜನಿಕರಲ್ಲಿ
ಮೂಡುತ್ತಿರುವ ಪ್ರಶ್ನೆ.
ಶಿವಮೊಗ್ಗ ಉಗ್ರರ ಅಡಗುದಾಣವಾಗುತ್ತಿದೆಯೆ?