ಮುಂದಿನ ವರ್ಷ ಜಾಗತಿಕ ಆರ್ಥಿಕ ಹಿಂಜರಿತ ಕಾಣಿಸಿಕೊಳ್ಳಲಿದೆ ಎಂದು ವಿಶ್ವ ಬ್ಯಾಂಕ್ ಮುಖ್ಯಸ್ಥ ಡೇವಿಡ್ ಮಾಲ್ಪಾಸ್ ಹೇಳಿದ್ದಾರೆ.
ಒಂದು ಕಡೆ ಜಗತ್ತಿನ ಎಲ್ಲ ದೇಶಗಳ ಕೇಂದ್ರ ಬ್ಯಾಂಕ್‌ಗಳು ಹಣದುಬ್ಬರ ನಿಯಂತ್ರಿಸಲು ಸಾಲದ ಮೇಲಿನ ಬಡ್ಡಿದರವನ್ನು ಹೆಚ್ಚಿಸಿವೆ.
ಇದರ ಅಡ್ಡ ಪರಿಣಾಮವೆಂಬಂತೆ ಹೂಡಿಕೆ ಮೇಲೆ ಹೊಡೆತವುಂಟಾಗಿದೆ.
ಉದ್ಯೋಗನಷ್ಟ ಸಂಭವಿಸಿದೆ, ಬೆಳವಣಿಗೆ ಕುಸಿದಿದೆ, ವ್ಯಾಪಾರ ಕಡಿಮೆಯಾಗಿದೆ ಎಂದು ವಿಶ್ವ ಬ್ಯಾಂಕ್ ಕಳವಳ ವ್ಯಕ್ತಪಡಿಸಿದೆ.
ಈಗಿನ ಲೆಕ್ಕಾಚಾರದ ಪ್ರಕಾರ 1970ರ ನಂತರ ಜಾಗತಿಕವಾಗಿ ಅತ್ಯಂತ ಕಷ್ಟಕರವಾದ ಆರ್ಥಿಕ ಹಿಂಜರಿತ ಸಂಭವಿಸುವುದು ಸ್ಪಷ್ಟ ಎನ್ನುವುದು ಡೇವಿಡ್ ಮಾಲ್ಪಾಸ್ ವಿಶ್ಲೇಷಣೆ. ಇದನ್ನು ಸರಿಪಡಿಸಲಿಕ್ಕಾಗಿ ಉತ್ಪಾದನೆ ಹೆಚ್ಚಿಸುವುದು, ಪೂರೈಕೆಗೆ ಯಾವುದೇ ಕೊರತೆಯಾಗದಂತೆ ನೋಡಿಕೊಳ್ಳುವುದು ಒಂದು ದಾರಿಯಾಗಿದೆ.