ಯುನೈಟೆಡ್ ಸ್ಟೇಟ್ಸ್ ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯಗಳಿಗೆ ವಿದ್ಯಾರ್ಥಿಗಳನ್ನು ಕಳುಹಿಸುವಲ್ಲಿ ಭಾರತವು ನಂಬರ್ ಒನ್ ದೇಶವಾಗಿದೆ ಎಂದು ನವದೆಹಲಿಯಲ್ಲಿರುವ ಕಾನ್ಸುಲರ್ ವ್ಯವಹಾರಗಳ ಯುಎಸ್ ರಾಯಭಾರ ಸಚಿವ ಡಾನ್ ಹೆಫ್ಲಿನ್ ಅವರು ತಿಳಿಸಿದ್ದಾರೆ.
ಇತ್ತೀಚೆಗೆ ಭಾರತದಲ್ಲಿನ US ರಾಜತಾಂತ್ರಿಕ ನಿಯೋಗಗಳು ಮೇ ಮತ್ತು ಜೂನ್ 2022 ರ ನಡುವೆ ದಾಖಲೆಯ 82,000 ವಿದ್ಯಾರ್ಥಿ ವೀಸಾಗಳನ್ನು ನೀಡಿವೆ – ಇದು ವಿಶ್ವದ ಎಲ್ಲಾ ದೇಶಗಳಿಗಿಂತ ಹೆಚ್ಚು ಎನ್ನುವುದು ಗಮನಾರ್ಹ.
ನಾವು ಈ ಬೇಸಿಗೆಯಲ್ಲಿ ಒಟ್ಟು 82,000 ವಿದ್ಯಾರ್ಥಿ ವೀಸಾಗಳನ್ನು ನೀಡಿದ್ದೇವೆ.ಇದು ದಾಖಲೆಯಾಗಿದೆ. ಕಳೆದ ವರ್ಷ ನಾವು 62000 ವಿದ್ಯಾರ್ಥಿ ವಿಸಾಗಳನ್ನು ನೀಡುವ ದಾಖಲೆಯನ್ನು ಮಾಡಿದ್ದೇವೆ. ಆಸಕ್ತಿದಾಯಕ ಸಂಗತಿವೆಂದರೆ ಈ ವರ್ಷ ಇತರ ದೇಶಗಳಲ್ಲಿನ ಕೋವಿಡ್ ಸಂಬಂಧಿತ ಸಮಸ್ಯೆಗಳಿದ್ದರೂ ಕೂಡ ವಿದ್ಯಾರ್ಥಿಗಳನ್ನು US ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯಗಳಿಗೆ ಕಳುಹಿಸುವಲ್ಲಿ ಭಾರತವು ನಂಬರ್ ಒನ್ ದೇಶವಾಗಿದೆ ಎಂದು ಹೆಫ್ಲಿನ್ ಅವರು ಮಾಹಿತಿ ನೀಡಿದ್ದಾರೆ.
ಈ ಬೇಸಿಗೆಯಲ್ಲಿ 82,000 ವಿದ್ಯಾರ್ಥಿ ವೀಸಾಗಳನ್ನು ವಿತರಿಸುವ ದೇಶದ ಇತ್ತೀಚಿನ ಸಾಧನೆಯನ್ನು ಅವರು ಶ್ಲಾಘಿಸಿದ್ದಾರೆ.