ನಮಗೆ ಕಾಶಿ ಎಂದರೆ ಅತ್ಯಂತ ಪವಿತ್ರ ತೀರ್ಥಕ್ಷೇತ್ರ. ಗಂಗೆಯಲ್ಲಿ ಮಿಂದು ವಿಶ್ವನಾಥನ ದರ್ಶನ ಮಾಡಿದರೆ ಸಾಕು ಜನ್ಮಪಾವನ.
ನಮ್ಮ ಪ್ರಧಾನ ಮಂತ್ರಿ ಮೋದಿ ಅವರು ವಾರಾಣಸಿ ಸಂಸದರೂ ಆಗಿದ್ದಾರೆ. ಮಾಧ್ಯಮಗಳಲ್ಲಿ ಕಾಶಿಯ ಕ್ಷೇತ್ರ ಅಭಿವೃದ್ಧಿ ಬಗ್ಗೆ ತಿಳಿದಿದ್ದೇವೆ.
ಮೊದಲಿಗೆ ನನಗೆ ಭೇಟಿಯಾದ ಸಾಮಾನ್ಯ ಆಟೋ ಚಾಲಕನನ್ನ ಈ ಬಗ್ಗೆ ಸುಮ್ಮನೆ ಮಾತಿಗೆಳೆದೆ.
ಮಂದಿರಗಳ ಆವರಣ ಡಬಲ್ ಮಾಡಿದ್ರು. ಕಟ್ಟಡಗಳನ್ನ ಕೆಡವಿದ್ರು. ರಸ್ತೆಗಳು ಅಗಲವಾಗಿವೆ.
ಇದಂತೂ ನಿಜ.
ಬಹುಪಾಲು ಗಂಗಾತೀರದ ಮಣ್ಣು ಮಣ್ಣುಗಟ್ಟಿದ ಪರಿಸರ ಈಗ ಕಲ್ಲಿನ ಸೋಪಾನಗಳಿಂದ ಕೂಡಿದೆ.
ನಾನು ಇಪ್ಪತ್ತು ವರ್ಷಗಳಿಗೂ ಮುಂಚೆ ಕಂಡ ಕಾಶಿಗೂ ಇಂದಿನ ಕಾಶಿಗೂ ವ್ಯತ್ಯಾಸವಿದೆ.
ಕಾಶಿಯೆಂದರೆ ಗಲ್ಲಿಗಲ್ಲಿಗಳ ಸಂಯುಕ್ತ ಪಟ್ಟಣ.
ಗಲ್ಲಿಗಳಲ್ಲಿ ಟಾರು ಬಂದಿದೆ. ಆದರೆ ಜನರು ಮಾತ್ರ ಅಲ್ಲಲ್ಲೇ ಜರ್ದಾ ಉಗುಳುವುದು ಮುಂತಾದವುಗಳಿಂದ
ಗಲ್ಲಿಗಳು ಗಲೀಜಿವೆ.
ಯಾತ್ರಿಗಳು,ಪ್ರವಾಸಿಗಳು ಎರಡು ಥರದ ಮಂದಿ ಇಲ್ಲಿಗೆ ಬರುತ್ತಾರೆ. ಯಾತ್ರಿಗಳಿಗೆ ಸ್ವಚ್ಛತೆಗಿಂತ ದೇವರ ದರ್ಶನವೇ ಪ್ರಧಾನವಾಗಿರುತ್ತದೆ.
ಭಕ್ತಿಯಲ್ಲಿ ಮಿಕ್ಕವೆಲ್ಲ ಗೌಣ. ಪ್ರವಾಸಿಗಳಿಗೆ ಊಟ ವಸತಿ ಮತ್ತು ಸ್ವಚ್ಛತೆ ಮುಖ್ಯ.
ಹಿಂದೆ ವಿಶ್ವನಾಥನ ದರ್ಶನಕ್ಕೆ ಹೋಗುವಾಗ ಕ್ಯೂ ಇರುತ್ತಿರಲಿಲ್ಲ.ಪಾಂಡಾಗಳು ಯಾತ್ರಿಕರನ್ನು ತಮ್ಮತಮ್ಮ ತಂಎಗಳನ್ನಾಗಿಸಿ ಸೀದಾ ವಿಶ್ವನಾಥನ ಪೂಜೆ,ದರ್ಶನ ಮಾಡಿಸುತ್ತಿದ್ದರು.ಈಗ ಆದೃಶ್ಯವಿಲ್ಲ. ಸುಗಮ ದರ್ಶನ.ಒಬ್ಬರಿಗೆ ರೂ.300 ನೀಡಿ ಕೌಂಟರಿನಲ್ಲಿ ಚೀಟಿ ಪಡೆಯಬೇಕು. ಅದರಲ್ಲಿ ಪಾಂಡಾನ ಫೀಸು, ಪ್ರಸಾದ,ದೇವರ ದರ್ಶನ ಒಳಗೊಂಡಿರುತ್ತದೆ. ಬೇರೆ ಧರ್ಮದರ್ಶನವೂ ಇದೆ.ಅದರ ಸಾಲು ಹನುಮಂತನ ಬಾಲ.
ಕಾಶಿ ವಿಶ್ವನಾಥನ ದೇಗುಲ ಹಿಂದಿನದಕ್ಕಿಂತ ಶಿಲಾಮಯ. ಸುತ್ತಲೂ ಸ್ವಚ್ಛ ಆವರಣ. ಮೈಮನ ಸಂತೋಷವಾಗುತ್ತದೆ.
ಇಂದಿನ ಕಾಶಿ ಈಗ್ಯೆ ಇಪ್ಪತೈದು ವರ್ಷಗಳಿಗಿಂತ ಭಿನ್ನ.
ಕ್ಲೀನ್ ಗಂಗಾ ಎಂಬ ರಾಜೀವ್ ಗಾಂಧಿಯವರ ಆಗಿನ
ಯೋಜನೆ ಅವರೊಟ್ಟಿಗೇ ಅವಸಾನವಾಗಿತ್ತು.
ಈಗ ಓರ್ವ ವ್ಯಕ್ತಿ ಇಲ್ಲಿಯ ಸಂಸದನೇ ಆಗಿ ಆರಿಸಿ ಬಂದಿದ್ದಾರೆ. ಪ್ರಧಾನಿಯಾಗಿರುವಾಗ ಮತ್ತೇನು ಬೇಕು?