ಆತ್ಮಹತ್ಯೆಯ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದನ್ನು ನಾವು ಮಾಧ್ಯಮಗಳಲ್ಲಿ ಕೇಳಿರುತ್ತೇವೆ, ನೋಡಿರುತ್ತೇವೆ. ಆತ್ಮಹತ್ಯೆಗೆ ಹೆಚ್ಚಾಗಿ ಯುವಕರೇ ಬಲಿಯಾಗುತ್ತಿರುವುದು ವಿಷಾದ ಸಂಗತಿ.
ಸಂಸಾರದ ತಾಪತ್ರಯ, ಪ್ರೀತಿ ವೈಫಲ್ಯ, ಸಾಲಭಾದೆ ಹೀಗೆ ನಾನ ಕಾರಣಗಳಿಂದ ಜನರು ಆತ್ಮಹತ್ಯೆಗೆ ಶರಣಾಗುತ್ತಾರೆ. ಇತ್ತೀಚಿನ ದಿನಗಳಲ್ಲಿ ಕ್ಷುಲ್ಲಕ ಕಾರಣಗಳಿಂದಲೂ ಕೂಡ ತಮ್ಮ ಅಮೂಲ್ಯ ಜೀವವನ್ನ ಕಳೆದುಕೊಂಡಿರುವ ಘಟನೆಗಳೇ ಹೆಚ್ಚು.
ವಿಶ್ವದಲ್ಲಿ ಪ್ರತಿವರ್ಷ ಎಂಟರಿಂದ ಒಂಬತ್ತು ಲಕ್ಷ ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಅನೇಕ ಅಧ್ಯಯನಗಳಿಂದ ತಿಳಿದು ಬಂದಿದೆ. ಭಾರತದಲ್ಲಿ ಪ್ರತಿ ವರ್ಷ ಒಂದು ಲಕ್ಷಕ್ಕಿಂತ ಹೆಚ್ಚು ಜನರು ಆತ್ಮಹತ್ಯೆಯ ಮೊರೆ ಹೋಗುತ್ತಿದ್ದಾರೆ ಎಂಬುದು ಅಧ್ಯಯನದಿಂದ ತಿಳಿದುಬಂದಿದೆ.
ಆತ್ಮಹತ್ಯೆಯನ್ನು ತಡೆಯಲು ಮತ್ತು ಜನರಲ್ಲಿ ಬದುಕುವ ಭರವಸೆಯನ್ನ ತುಂಬುವ ಉದ್ದೇಶದಿಂದ 2003ರ ಸೆಪ್ಟೆಂಬರ್ 10ರಂದು ಆತ್ಮಹತ್ಯೆ ತಡೆ ದಿನವನ್ನಾಗಿ ಆಚರಿಸಲಾಯಿತು. ಪ್ರತಿ ವರ್ಷ ಸೆಪ್ಟೆಂಬರ್ 10ರಂದು ಆತ್ಮಹತ್ಯೆ ತಡೆ ದಿನ ಎಂದು ಆಚರಿಸಲಾಗುತ್ತಿದೆ.
ಮನುಷ್ಯ ಎಂದ ಮೇಲೆ ಸಮಸ್ಯೆಗಳು ಬರುವುದು ಸಹಜ… ಸಮಸ್ಯೆಗಳು ಬಂತೆಂದು, ಆತ್ಮಹತ್ಯೆ ಒಂದೇ ಪರಿಹಾರವಲ್ಲ. ಸಮಸ್ಯೆಗಳು ಇದ್ದ ಮೇಲೆ ಪರಿಹಾರವೂ ಕೂಡ ಇದ್ದೇ ಇರುತ್ತದೆ. ಅದನ್ನು ಅರಿತು ಪರಿಹಾರವನ್ನು ಕಂಡುಕೊಳ್ಳುವುದು ಒಳಿತು…
– ರಚನಾ.ಕೆ.ಆರ್