Thursday, March 19, 2026
Thursday, March 19, 2026

ಭಾರತ ಮತ್ತು ಚೀನಾ ಭಿನ್ನಾಭಿಪ್ರಾಯದ ದುರ್ಬಳಕೆ-ಡೆನಿಸ್ ಅಲಿಪೋವ್

Date:

ಕೆಲವು ಶಕ್ತಿಗಳು ಭಾರತ ಮತ್ತು ಚೀನಾದ ನಡುವಿನ ಭಿನ್ನಾಭಿಪ್ರಾಯವನ್ನು ಉದ್ದೇಶಪೂರ್ವಕವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದು ಈ ಬಗ್ಗೆ ಎಚ್ಚರಿಕೆ ವಹಿಸುವ ಅಗತ್ಯವಿದೆ ಎಂದು ಭಾರತಕ್ಕೆ ರಶ್ಯದ ರಾಯಭಾರಿ ಡೆನಿಸ್ ಅಲಿಪೋವ್ ಹೇಳಿದ್ದಾರೆ.

ಅಮೆರಿಕ ನೇತೃತ್ವದ ಭಾರತ- ಪೆಸಿಫಿಕ್ ಉಪಕ್ರಮವನ್ನು ಟೀಕಿಸಿದ ಅವರು, ಇದು ನಿಯಂತ್ರಕ ನೀತಿಯ ಭಾಗವಾಗಿದೆ . ಆದರೆ ಕ್ವಾಡ್‌ನ ‘ವಿಭಜಕ ಹೇಳಿಕೆ’ಯನ್ನು ಅನುಮೋದಿಸಲು ನಿರಾಕರಿಸಿದ ಭಾರತದ ನಿಲುವು ಶ್ಲಾಘನೀಯ ಎಂದರು.

ಆರ್‌ಐಸಿ ಈ ಪ್ರದೇಶದಲ್ಲಿ ಪರಸ್ಪರ ತಿಳುವಳಿಕೆ, ನಂಬಿಕೆ ಮತ್ತು ಸ್ಥಿರತೆಯನ್ನು ವೃದ್ಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಮತ್ತು ಇದು ಸದಸ್ಯ ದೇಶಗಳ ನಡುವೆ ಸಹಕಾರ ಮತ್ತು ಸಮನ್ವಯವನ್ನು ಹೆಚ್ಚಿಸಲು ಮತ್ತಷ್ಟು ಕೊಡುಗೆಯನ್ನು ನೀಡುತ್ತದೆ. ಇದು ಭಾರತ- ಚೀನಾ ನಡುವಿನ ರಚನಾತ್ಮಕ ಮಾತುಕತೆಗೆ ಉತ್ತೇಜನ ನೀಡುತ್ತದೆ ಎಂಬ ವಿಶ್ವಾಸ ಇರುವುದರಿಂದ ನಿಸ್ಸಂಶಯವಾಗಿ ರಶ್ಯಾಕ್ಕೆ ಇದು ಆದ್ಯತೆಯ ವಿಷಯವಾಗಿದೆ.

ಈ ವಲಯದಲ್ಲಿ ಪರಸ್ಪರ ತಿಳುವಳಿಕೆ, ವಿಶ್ವಾಸ ಮತ್ತು ಸ್ಥಿರತೆಯನ್ನು ವೃದ್ಧಿಸುವಲ್ಲಿ ಹಾಗೂ ಮೂವರೂ ಭಾಗವಾಗಿರುವ ಬ್ರಿಕ್ಸ್, ಶಾಂಘೈ ಸಹಕಾರ ಸಂಘಟನೆಯಂತಹ ಬಹುಪಕ್ಷೀಯ ಸಂಸ್ಥೆಗಳ ಕಾರ್ಯಸೂಚಿಯನ್ನು ಬೆಂಬಲಿಸುವಲ್ಲಿ ಆರ್‌ಸಿಐ ನಿರ್ಣಾಯಕವಾಗಿದೆ ಎಂದವರು ಹೇಳಿದ್ದಾರೆ.

ರಷ್ಯಾ-ಭಾರತ-ಚೀನಾ (ಆರ್‌ಐಸಿ) ತ್ರಿಪಕ್ಷೀಯ ಬಾಂಧವ್ಯವು ಮೂರೂ ದೇಶಗಳಲ್ಲಿ ಅಸಾಧಾರಣ ಸಹಕಾರ ಸಂಬಂಧದ ಸಾಮರ್ಥ್ಯವನ್ನು ಹೊಂದಿದೆ ಮತ್ತು ಇದು ಭಾರತ-ಚೀನಾ ನಡುವೆ ರಚನಾತ್ಮಕ ಸಂವಾದವನ್ನು ಉತ್ತೇಜಿಸಲು ಒತ್ತಾಸೆ ನೀಡುವ ಚೌಕಟ್ಟು ಆಗಬಹುದು. ಈ ತ್ರಿಪಕ್ಷಿಯ ಬಾಂಧವ್ಯದ ಅನುಸಂಧಾನವು ಇತರ ಕೆಲವು ಶಕ್ತಿಗಳ ಧೋರಣೆಗಿಂತ ವಿಭಿನ್ನವಾಗಿರಲಿದೆ ಎಂದು ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಅಲಿಪೋವ್ ಅಭಿಪ್ರಾಯಪಟ್ಟಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shimoga News ಗೋಪಾಲ ಗೌಡರು ಶಿವಮೊಗ್ಗ ಜಿಲ್ಲೆಯನ್ನ ಸಮಾಜವಾದದ ತೊಟ್ಟಿಲನ್ನಾಗಿ ರೂಪಿಸಿದವರು- ವೈ.ಎಸ್.ವಿ.ದತ್ತ.

Shimoga News ನಗರದ ಮಥುರಾ ಪ್ಯಾರಡೈಸ್ ಸಭಾಂಗಣದಲ್ಲಿ ಮಾಜಿ ಶಾಸಕ ಹಾಗೂ...

Klive Special Article ಕೆ ಲೈವ್ ವಿಶೇಷ.” ವಿಕ್ರಮ ಮತ್ತು ಶಾಲಿವಾಹನ ಶಕಪುರುಷರು” ಒಂದು ಚಿಂತನೆ.ಲೇ: ದಿಲೀಪ್ ನಾಡಿಗ್,ಶಿವಮೊಗ್ಗ.

ಎನ್.ಜಯಭೀಮ ಜೊಯ್ಸ್. ಶಿವಮೊಗ್ಗ. Klive Special Article ತೈತ್ತಿರೀಯ ಅರಣ್ಯಕದಲ್ಲಿರುವ ಶ್ಲೋಕದಂತೆ "ಕ್ವೇದಮಭ್ರಂ ನಿವಿಶತೇ...

Kote SeethaRamanjaneya Temple ಇಂದಿನಿಂದ ಕೋಟೆ ಶ್ರೀಸೀತಾರಾಮಾಂಜನೇಯ ಸ್ವಾಮಿ ದೇಗುಲದಲ್ಲಿ ಶ್ರೀರಾಮ ನವಮಿ ಉತ್ಸವಕ್ಕೆ ಚಾಲನೆ

Kote SeethaRamanjaneya Temple ಕೋಟೇ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಾಲಯದಲ್ಲಿ ಶ್ರೀ...

Women’s Day ವೃದ್ಧಾಪ್ಯದ ಆರೋಗ್ಯ ಸಮಸ್ಯೆಗಳ ಬಗ್ಗೆ ಅರಿವಿರಲಿ- ಡಾ.ಪ್ರಿಯಾಂಕ ಚೌಹಾಣ್.

Women's Day ಜೆಸಿ ಶಿವಮೊಗ್ಗ ಚಿರಂತನದ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು...