ಸರ್ಕಾರ ರಾಜ್ಯದಲ್ಲಿ ಹೊಸ 8,100 ಶಾಲಾ ಕೊಠಡಿ ನಿರ್ಮಾಣ ಮಾಡಲು ಐತಿಹಾಸಿಕ ನಿರ್ಣಯ ತೆಗೆದುಕೊಂಡಿದೆ.
15 ದಿನಗಳ ಒಳಗಾಗಿ ಟೆಂಡರ್ ಪ್ರಕ್ರಿಯೆ ಅಂತಿಮಗೊಳ್ಳಲಿದೆ.
ಕೋವಿಡ್ ಮತ್ತಿತರ ಕಾರಣಗಳಿಂದ 4-5 ವರ್ಷಗಳಿಂದ ಹೊಸ ಕೊಠಡಿ ನಿರ್ಮಾಣವಾಗಿರಲಿಲ್ಲ.
ಈ ನಿಟ್ಟಿನಲ್ಲಿ ಸರ್ಕಾರ ದಿಟ್ಟ ಹೆಜ್ಜೆ ಇಟ್ಟಿದ್ದು , 1,200 ಕೋಟಿ ರೂ. ವೆಚ್ಚದಲ್ಲಿ ಕೊಠಡಿಗಳ ನಿರ್ಮಾಣಕ್ಕೆ ಸಜ್ಜಾಗಿದೆ.
ಆಯಾ ಜಿಲ್ಲೆಯ ಜಿಲ್ಲಾ ಪಂಚಾಯಿತಿ ಸಿಇಒಗಳಿಗೆ ಶಾಲಾ ಕೊಠಡಿ ನಿರ್ವಣದ ಜವಾಬ್ದಾರಿ ನೀಡಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ತಿಳಿಸಿದರು.
ಅತಿವೃಷ್ಟಿ ಕೂಡ ಶಾಲಾ ಕೊಠಡಿ ಹಾನಿಗೆ ಕಾರಣವಾಗಿದೆ. ಕಳೆದ ವರ್ಷ 48 ಸಾವಿರ ಶಾಲೆಯನ್ನು ಎ-ಬಿ-ಸಿ ಎಂದು ವರ್ಗೀಕರಣ ಮಾಡಿದ್ದೇವೆ. ಎ ವರ್ಗದಲ್ಲಿ 28 ಸಾವಿರ ಶಾಲೆಗಳಿವೆ. ಬಿ ವರ್ಗದಲ್ಲಿ 12-13 ಸಾವಿರ, ಸಿ ವರ್ಗದಲ್ಲಿ 7-8 ಸಾವಿರ ಶಾಲೆಗಳಿವೆ. ಮಲೆನಾಡು ಮತ್ತಿತರ ಕಡೆ ಮಳೆಯಿಂದ ಶಾಲೆಗಳು ಹಾನಿಗೀಡಾಗಿವೆ. ಅನೇಕ ಶಾಲೆಗಳು 10ಕ್ಕಿಂತ ಕಡಿಮೆ ಮಕ್ಕಳು ಇರುವಂತಹವುಗಳಾಗಿವೆ ಎಂದರು.