ತಾಜಾ ತೆಂಗಿನಕಾಯಿಯಿಂದ ತಯಾರಿಸಿದ ತೆಂಗಿನ ಎಣ್ಣೆ,ತೆಂಗಿನಕಾಯಿ ಗಂಜಿ, ತೆಂಗಿನ ಹಾಲು ಮತ್ತು ಕೊಬ್ಬರಿಯನ್ನು ಭಾರತೀಯ ಅಡುಗೆ ಮತ್ತು ಆಹಾರ ಪದ್ಧತಿಯಲ್ಲಿ ವ್ಯಾಪಕವಾಗಿ ಬಳಕೆ ಮಾಡಲಾಗುತ್ತದೆ. ತೆಂಗಿನಕಾಯಿಯಲ್ಲಿರುವ ಪೌಷ್ಟಿಕಾಂಶದ ಕೊಬ್ಬು ನಮ್ಮ ದೇಹಕ್ಕೆ ಸಂಪೂರ್ಣ ಪೋಷಣೆ ನೀಡುತ್ತದೆ ಎಂದು ಸಂಶೋಧನೆ ಹೇಳುತ್ತದೆ.
ಹಾಗಾಗಿ ತೆಂಗಿನಕಾಯಿಯನ್ನು ಪೂಜೆ, ಅಡುಗೆ, ಆರೋಗ್ಯ ದಿನಚರಿಯಲ್ಲಿ ಬಳಕೆ ಮಾಡಲಾಗುತ್ತದೆ. ಸಾಕಷ್ಟು ಪೋಷಕಾಂಶಗಳಿಂದ ಸಮೃದ್ಧವಾಗಿರುವ ತೆಂಗಿನಕಾಯಿ ಸೂಪರ್‌ಫುಡ್ ಆಗಿದೆ. ಹಣ್ಣಿನ ರೂಪದಲ್ಲಿ ಹಸಿ ತೆಂಗಿನಕಾಯಿಯನ್ನು ಅನೇಕ ಭಕ್ಷ್ಯಗಳಲ್ಲಿ ಬಳಸುತ್ತಾರೆ. ಜೊತೆಗೆ ಒಣ ತೆಂಗಿನಕಾಯಿ ಕೊಬ್ಬರಿಯನ್ನು ಸಿಹಿತಿಂಡಿಗಳಲ್ಲಿ ಬಳಸಲಾಗುತ್ತದೆ.
ಸಸ್ಯಾಹಾರಿಗಳಿಗೆ ತೆಂಗಿನ ಹಾಲು ಅತ್ಯುತ್ತಮ ಪರ್ಯಾಯ ಪದಾರ್ಥವಾಗಿದೆ. ತೆಂಗಿನಕಾಯಿಯನ್ನು ಸಿಹಿ ತಿಂಡಿ, ಸಾಂಬಾರು, ಪಲ್ಯ, ಪೂಜಾ ವಿಧಿ ವಿಧಾನ ಸೇರಿದಂತೆ ಹಲವು ರೂಪಗಳಲ್ಲಿ ಬಳಸುತ್ತಾರೆ. ಒಣ ಕೊಬ್ಬರಿ, ಎಳನೀರು, ತಾಜಾ ಕೊಬ್ಬರಿ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನ ನೀಡುತ್ತದೆ. ತೆಂಗಿನಕಾಯಿ ನಮ್ಮ ಹೃದಯವನ್ನು ಸಹ ಆರೋಗ್ಯವಾಗಿರಿಸುತ್ತದೆ ಎಂದು ತಜ್ಞರು ತಿಳಿಸುತ್ತಾರೆ.
ತೆಂಗಿನಕಾಯಿಯನ್ನು ಸಾಮಾನ್ಯವಾಗಿ ಉತ್ತಮ ಕೊಬ್ಬಿನ ಮೂಲವೆಂದು ಹೇಳುತ್ತಾರೆ. ಪ್ರೋಟೀನ್ ಹಾಗೂ ಫೈಬರ್ ಜೊತೆಗೆ ಕಬ್ಬಿಣ, ಮ್ಯಾಂಗನೀಸ್, ತಾಮ್ರ, ಸೆಲೆನಿಯಮ್, ಪೊಟ್ಯಾಸಿಯಮ್, ಸತು, ರಂಜಕ, ಮೆಗ್ನೀಸಿಯಮ್ ಕೂಡ ಇದರಲ್ಲಿ ಸಾಕಷ್ಟು ಕಂಡು ಬರುತ್ತದೆ.