ದೇಶದಾದ್ಯಂತ ಸಂಭ್ರಮ,ಸಡಗರದಿಂದ ಗಣೇಶೋತ್ಸವವನ್ನು ಆಚರಿಸಲಾಗಿದೆ.
2 ವರ್ಷಗಳ ಹಿಂದೆ ಕೊರೋ ನಾ ಕಾಣಿಸಿಕೊಂಡ ನಂತರ ಸಾರ್ವಜನಿಕ ಗಣೇಶೋತ್ಸವಕ್ಕೆ ಕಡಿವಾಣ ಹಾಕಿದ್ದ ಸರ್ಕಾರ ಈ ವರ್ಷ ಎಲ್ಲೆಡೆ ಗಣೇಶ ಹಬ್ಬವನ್ನು ಆಚರಿಸಲು ಅನುಮತಿ ನೀಡಿದೆ.
ಆದ್ದರಿಂದ, ಪ್ರತಿಯೊಂದು ಊರಿನಲ್ಲೂ ಸಾರ್ವಜನಿಕ ಗಣೇಶೋತ್ಸವ ಆಚರಿಸಲಾಗುತ್ತಿದೆ. ಅನೇಕ ಕಡೆ ಈಗಾಗಲೇ ಗಣಪತಿ ವಿಸರ್ಜನೆ ಮಾಡಲಾಗಿದೆ.
ಈ ಸಂದರ್ಭದಲ್ಲಿ ಅದ್ದೂರಿ ಮೆರವಣಿಗೆ, ಡಾನ್ಸ್ ಸೇರಿದಂತೆ ಕಲಾತಂಡಗಳು ವಿಸರ್ಜನಾ ಮೆರವಣಿಗೆಗೆ ಕಳೆ ನೀಡುತ್ತವೆ.ಅದೇ ರೀತಿ ಇಲ್ಲೊಂದು ವಿಡಿಯೋ ಸಾಮಾಜಿಕ ತಾಣಗಳಲ್ಲಿ
ಹೆಚ್ಚು ವೈರಲ್ ಆಗಿದೆ. ಆ ವಿಡಿಯೋ ಯಾವುದು ಅಂತ ಯೋಚಿಸುತ್ತಿದ್ದೀರಾ…!
ಈ ವಿಡಿಯೋ ಶ್ರೀಮಂತ ಮನಸ್ಸಿನವರ ಅದ್ದೂರಿ ಗಣಪತಿ ವಿಸರ್ಜನಾ ಮೆರವಣಿಗೆ ಎಂದು ಬಣ್ಣಿಸಬಹುದು.
ಮನಸ್ಸಿಗೆ ಖುಷಿ ನೀಡುವ ಈ ಸುಂದರ ವಿಡಿಯೋದಲ್ಲಿ ಪುಟ್ಟ ಮಕ್ಕಳು ಗಾಡಿಯೊಂದರಲ್ಲಿ ಗಣಪತಿ ಮೂರ್ತಿಯನ್ನು ತೆಗೆದುಕೊಂಡು ಹೋಗುತ್ತಿದ್ದರೆ ಮತ್ತಿಬ್ಬರು ಕೋಲಿನಿಂದ ಡಬ್ಬ ಬಡಿಯುತ್ತಾ ಮೆರವಣಿಗೆ ಹಿಂಬಾಲಿಸಿದ್ದಾರೆ. ಜೊತೆಗೆ ಮೂರ್ನಾಲ್ಕು ಪುಟ್ಟ ಹುಡುಗ – ಹುಡುಗಿಯರು ಮೆರವಣಿಗೆ ಜೊತೆ ಹೆಜ್ಜೆ ಹಾಕಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದೆ.