ಕರ್ನಾಟಕ ಸೇರಿ ದೇಶದ ಎಲ್ಲಾ ರಾಜ್ಯಗಳಿಗೂ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಕರ್ನಾಟಕ ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ 1,046.78 ಕೋಟಿ ಹಣ ಬಿಡುಗಡೆ ಮಾಡಿದೆ.
ಪ್ರಸಕ್ತ ಹಣಕಾಸು ವರ್ಷದ 2022-23ರ 15ನೇ ಹಣಕಾಸು ಆಯೋಗದ ಶಿಫಾರಸುಗಳ ಪ್ರಕಾರ, ಕೇಂದ್ರ ಸರ್ಕಾರವು ಎಲ್ಲಾ ರಾಜ್ಯಗಳಿಗೆ ಹಳ್ಳಿಗಳಲ್ಲಿ ಕುಡಿಯುವ ನೀರು ಸರಬರಾಜು, ನೈರ್ಮಲ್ಯ ಹಾಗೂ ನೈರ್ಮಲ್ಯದ ಸುಧಾರಣೆಗೆ ಹಣವನ್ನು ಬಿಡುಗಡೆ ಮಾಡಿದೆ.
ಅದರಂತೆ, ಕೇಂದ್ರ ಹಣಕಾಸು ಸಚಿವಾಲಯವು ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ ಅನುದಾನದ ಅಡಿಯಲ್ಲಿ ಹಣವನ್ನು ಬಿಡುಗಡೆ ಮಾಡುವ ಆದೇಶವನ್ನ ಹೊರಡಿಸಿದೆ. ಎಲ್ಲಾ ರಾಜ್ಯಗಳಿಗೆ ಒಟ್ಟು 15,705.65 ಕೋಟಿ ಬಿಡುಗಡೆಯಾಗಿದೆ. ಇದರಲ್ಲಿ ಬಿಹಾರಕ್ಕೆ 1,921 ಕೋಟಿ, ಛತ್ತೀಸ್‌ಗಢಕ್ಕೆ 557 ಕೋಟಿ, ಗುಜರಾತ್‌ಗೆ 1,181 ಕೋಟಿ ಮತ್ತು ಹಿಮಾಚಲ ಪ್ರದೇಶಕ್ಕೆ 1,181 ಕೋಟಿಗಳನ್ನ ಬಿಡುಗಡೆ ಮಾಡಲಾಗಿದೆ. 224.30 ಕೋಟಿ, ಜಾರ್ಖಂಡ್ 249.80 ಕೋಟಿ, ಕರ್ನಾಟಕ 1,046.78 ಕೋಟಿ, ಕೇರಳ 623 ಕೋಟಿ, ಮಧ್ಯಪ್ರದೇಶ 1,472 ಕೋಟಿ, ಮಹಾರಾಷ್ಟ್ರ 1,092.92 ಕೋಟಿ, ಮೇಘಾಲಯ 40.50 ಕೋಟಿ, ನಾಗಾಲಾಡ್ 18.40 ಕೋಟಿ, ಒಡಿಶಾ 864 ಕೋಟಿ, ತಮಿಳುನಾಡು 1,380.50 ಕೋಟಿ, ತೆಲಂಗಾಣಕ್ಕೆ 273 ಕೋಟಿ, ತ್ರಿಪುರಾಕ್ಕೆ 73.50 ಕೋಟಿ ಮತ್ತು ಉತ್ತರ ಪ್ರದೇಶಕ್ಕೆ 3,733 ಕೋಟಿಗಳನ್ನ ನರೇಂದ್ರ ಮೋದಿ ಸರ್ಕಾರ ಬಿಡುಗಡೆ ಮಾಡಿದೆ.