ಕಳೆದೆರಡು ವರ್ಷಗಳಿಂದ ಕೊರೋನಾ ಕಾರಣಗಳಿಂದ ಗಣೇಶ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲು ಸಾಧ್ಯವಾಗಿರಲಿಲ್ಲ. ಆದರೆ ಈ ವರ್ಷ ಎಲ್ಲೆಡೆ ಗಣೇಶ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಭಕ್ತರು ನಾನಾ ರೀತಿಯಲ್ಲಿ ಗಣೇಶನನ್ನು ರೂಪಿಸಲು ಯೋಜನೆ ಮಾಡಿದ್ದಾರೆ. ಜೆಮ್ಶೆಡ್ ಪುರದಲ್ಲಿ ಗಣೇಶನನ್ನು ಆಧಾರ್ ಕಾರ್ಡ್ ರೂಪವನ್ನು ನಿರ್ಮಿಸಲಾಗಿದೆ.
ಈ ಬಾರಿ ಗಣೇಶನನ್ನು ಜನರಲ್ಲಿ ಸಾಕಷ್ಟು ಕುತೂಹಲ ಮೂಡಿಸಿದ್ದಾನೆ. ಅದೇನು ಎಂದರೆ, ಆಧಾರ ಕಾರ್ಡ್ ಮಾದರಿಯಲ್ಲಿ ಗಣಪನ ಮಂಟಪದ ವಿನ್ಯಾಸವನ್ನು ಮಾಡಿ ಗಣೇಶನನ್ನು ಕೂರಿಸಿದ್ದಾರೆ.
6ನೇ ಶತಮಾನದಲ್ಲಿ ಕೈಲಾಸದಲ್ಲಿರುವ ಗಣೇಶನ ವಿಳಾಸ ಹಾಗೂ ಗಣಪನ ಜನ್ಮದಿನಾಂಕವನ್ನು ಆಧಾರ್ ಕಾರ್ಡಿನ ಮಾದರಿಯಲ್ಲಿ ನಮೂದಿಸಿದ್ದಾರೆ. ಜೊತೆಗೆ, ಫೋಟೋ ಸ್ಥಳದಲ್ಲಿ ಗಣೇಶನ ವಿಗ್ರಹ ಇರಿಸಿದ್ದಾರೆ. ಪಕ್ಕದಲ್ಲಿರುವ ಬಾರ್ ಕೋಡ್ ಸ್ಕ್ಯಾನ್ ಮಾಡಿದಾಗ ಗಣೇಶನ ಚಿತ್ರಗಳಿರುವ ಗೂಗಲ್ ಲಿಂಕ್ ಪರದೆ ತೆರೆದುಕೊಳ್ಳುತ್ತದೆ.
ಅದರ ಮೇಲೆ ನಮೂದಿಸಲಾದ ವಿಳಾಸ ಹೀಗಿದೆ…
ಶ್ರೀ ಗಣೇಶ, S/o ಮಹದೇವ, ಕೈಲಾಸ ಪರ್ವತ, ಮೇಲ್ಮಹಡಿ ಹತ್ತಿರ, ಮಾನಸ ಸರೋವರ, ಕೈಲಾಸ ಪಿನ್‌ಕೋಡ್- 000001. ಮತ್ತು ಹುಟ್ಟಿದ ವರ್ಷ 01/01/600CE. ಹೀಗೆ ಗಣೇಶನನ್ನು ಆಧಾರ್ ಕಾರ್ಡ್ ನಲ್ಲಿ ಬಿಂಬಿಸಲಾಗಿದೆ.