ರಿಲಯನ್ಸ್ ಇಂಡಸ್ಟ್ರೀಸ್ ಸೋಮವಾರ ತನ್ನ ವಾರ್ಷಿಕ ಸಾಮಾನ್ಯ ಸಭೆ ನಡೆಸುತ್ತಿದ್ದು ಇದರಲ್ಲಿ ಮುಖೇಶ್ ಅಂಬಾನಿ ಮಹತ್ವದ ಘೋಷಣೆ ಮಾಡಿದ್ದಾರೆ.
ರಿಲಯನ್ಸ್ ಏಕೀಕೃತ ಆದಾಯವು ಶೇಕಡಾ 47 ರಷ್ಟು ಏರಿಕೆಯಾಗಿ 7.93 ಲಕ್ಷ ಕೋಟಿ ರೂ.ಗೆ ಅಥವಾ 104.6 ಬಿಲಿಯನ್ ಡಾಲರ್ಗೆ ತಲುಪಿದೆ ಎಂದು ಹೇಳಿದ್ದಾರೆ.
ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ನ 45ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮುಖ್ಯಸ್ಥ ಮುಖೇಶ್ ಅಂಬಾನಿ ಮಹತ್ವದ ಘೋಷಣೆ ಮಾಡಿದ್ದಾರೆ.
ಭಾರತದ ಆಯ್ದ ಕೆಲ ಪ್ರದೇಶಗಳಲ್ಲಿ ದೀಪಾವಳಿ ವೇಳೆಗೆ ಜಿಯೋ 5G ಸೇವೆ ಆರಂಭವಾಗಲಿದೆ ಎಂದು ಹೇಳಿದ್ದಾರೆ. ”ದೀಪಾವಳಿ 2022 ರ ಹೊತ್ತಿಗೆ ದೆಹಲಿ, ಮುಂಬೈ, ಚೆನ್ನೈ ಮತ್ತು ಕೋಲ್ಕತ್ತಾದ ಮೆಟ್ರೋ ನಗರಗಳನ್ನು ಒಳಗೊಂಡಂತೆ ಬಹು ಪ್ರಮುಖ ನಗರಗಳಲ್ಲಿ ಜಿಯೋ 5G ಅನ್ನು ಪ್ರಾರಂಭಿಸುತ್ತೇವೆ. 5ಜಿಯನ್ನು ಬಳಸಿಕೊಂಡು, ನಾವು ಉನ್ನತ ಗುಣಮಟ್ಟದ, ಹೆಚ್ಚು ಕೈಗೆಟುಕುವ ಸ್ಥಿರ ಬ್ರಾಡ್ಬ್ಯಾಂಡ್ ಸೇವೆಗಳ ರೋಲ್-ಔಟ್ ಅನ್ನು ತ್ವರಿತಗೊಳಿಸಬಹುದು,” ಎಂದು ಮುಖೇಶ್ ಅಂಬಾನಿ ತಿಳಿಸಿದ್ದಾರೆ.
ಜಿಯೋ 5 ಜಿ ವಿಶ್ವದ ಅತ್ಯಂತ ಸುಧಾರಿತ 5 ಜಿ ಆಗಿದೆ. ಜಿಯೋ 5G ವಿಶ್ವದ ಅತಿದೊಡ್ಡ ಮತ್ತು ಅತ್ಯಾಧುನಿಕ 5G ನೆಟ್‌ವರ್ಕ್ ಆಗಲಿದೆ. ಇದು Jio 4G ನೆಟ್‌ವರ್ಕ್‌ಗೆ ಅವಲಂಬನೆಯಾಗಿಲ್ಲ ಎಂಬುದನ್ನು ಕೂಡ ಸ್ಪಷ್ಟ ಪಡಿಸಿದ್ದಾರೆ. ನಮ್ಮ ಕಂಪನಿಯು ವಾರ್ಷಿಕ ಆದಾಯದಲ್ಲಿ 100 ಬಿಲಿಯನ್ ಡಾಲರ್ ದಾಟಿದ ಭಾರತದ ಮೊದಲ ಕಾರ್ಪೊರೇಟ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.