ಬೆಂಗಳೂರಿನಲ್ಲಿ ಭಾರೀ ಮಳೆಯಿಂದಾಗಿ ಮನೆಗಳಿಗೆ ಹಾನಿಯಾದ ಹಿನ್ನೆಲೆಯಲ್ಲಿ ಬಿಬಿಎಂಪಿಯಿಂದ 10 ಸಾವಿರ ರೂ. ಪರಿಹಾರ ಘೋಷಣೆ ಮಾಡಲಾಗಿದೆ.
ಬೆಂಗಳೂರಿನ ಹಲವೆಡೆ ಭಾರೀ ಮಳೆಯಾಗುತ್ತಿದ್ದು, ಮಾರತ್‌ಹಳ್ಳಿಯಲ್ಲಿ ರಾಜಕಾಲುವೆ ಮುಚ್ಚಿದ್ದಕ್ಕೆ ನಡುರಸ್ತೆಗೆ ಮಳೆ ನೀರು ನುಗ್ಗಿದೆ. ಮಾರತ್‌ಹಳ್ಳಿಯ ಇಕೋ ಸ್ಪೇಸ್ ಬಳಿಯ ಮುಖ್ಯರಸ್ತೆ ಜಲಾವೃತಗೊಂಡಿದೆ.
ಕೈಗೊಂಡನಹಳ್ಳಿ, ಸರ್ಜಾಪುರ ಕೆರೆಗಳ ನೀರು ರಸ್ತೆಗೆ ರಭಸವಾಗಿ ಹರಿದು ಬರುತ್ತಿದೆ. ಮಾರತ್‌ಹಳ್ಳಿ-ಸರ್ಜಾಪುರ ಔಟರ್ ರಿಂಗ್‌ರೋಡ್ ಜಲಾವೃತವಾಗಿದೆ.
ಮಳೆಯಿಂದಾಗಿ ಹಾನಿಯಾದ ಮನೆಗಳಿಗೆ ಬಿಬಿಎಂಪಿ 10 ಸಾವಿರ ರೂ. ಪರಿಹಾರ ಘೋಷಿಸಲಾಗಿದ್ದು, ಸರ್ವೆ ಕಾರ್ಯ ನಡೆಯುತ್ತಿದೆ. ಕಾನೂನು ಪ್ರಕಾರ ಪರಿಹಾರ ನೀಡಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತರು ತಿಳಿಸಿದ್ದಾರೆ.