Sunday, November 24, 2024
Sunday, November 24, 2024

ಹಬ್ಬಗಳಲ್ಲಿ ಖಾದಿ ಗ್ರಾಮೋತ್ಪನ್ನಗಳನ್ನ ಉಡುಗೊರೆ ನೀಡಿ-ಮೋದಿ

Date:

ದೇಶವಾಸಿಗಳ ಬಳಿ ಪ್ರಧಾನಿ ನರೇಂದ್ರ ಮೋದಿ ಶನಿವಾರ ವಿಶೇಷ ಮನವಿ ಮಾಡಿದ್ದು, ‘ಮುಂಬರುವ ಹಬ್ಬಗಳಲ್ಲಿ ಖಾದಿ ಗ್ರಾಮೀಣ ಕೈಗಾರಿಕೆಗಳಲ್ಲಿ ತಯಾರಿಸಿದ ಉತ್ಪನ್ನಗಳನ್ನ ಮಾತ್ರ ನಿಮ್ಮ ಪ್ರೀತಿ ಪಾತ್ರರಿಗೆ ಉಡುಗೊರೆಯಾಗಿ ನೀಡಿ ಎಂದಿದ್ದಾರೆ.

ಅಹ್ಮದಾಬಾದ್ʼನಲ್ಲಿ ನಡೆದ ‘ಖಾದಿ ಉತ್ಸವ’ ಕಾರ್ಯಕ್ರಮದಲ್ಲಿ ಭಾಗವಹಿಸಿದ ವೇಳೆ ಪ್ರಧಾನಿ ಮೋದಿ ಈ ವಿಶೇಷ ಮನವಿ ಮಾಡಿದ್ದಾರೆ. ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಖಾದಿ ಮತ್ತು ಅದರ ಪ್ರಾಮುಖ್ಯತೆಗೆ ಗೌರವ ಸಲ್ಲಿಸಲು ಖಾದಿ ಉತ್ಸವವನ್ನ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿಯವರು ಚರಕವನ್ನ ಸಹ ನೇಯ್ಯಿದರು. ಇನ್ನು ಈ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ‘ಖಾದಿ ಸ್ವಾತಂತ್ರ್ಯ ಚಳವಳಿಯ ಶಕ್ತಿಯಾಗಿ ಮಾರ್ಪಟ್ಟಿತು ಮತ್ತು ಗುಲಾಮಗಿರಿಯ ಸರಪಳಿಯನ್ನ ಮುರಿದಿರುವುದನ್ನ ನಾವು ನೋಡಿದ್ದೇವೆ. ಅದೇ ಖಾದಿ ಭಾರತವನ್ನ ಅಭಿವೃದ್ಧಿ ಮತ್ತು ಸ್ವಾವಲಂಬಿಯನ್ನಾಗಿ ಮಾಡಲು ಸ್ಫೂರ್ತಿಯಾಗಬಹುದು. ಸ್ವಾತಂತ್ರ್ಯದ 75ನೇ ವರ್ಷದ ಸಂದರ್ಭದಲ್ಲಿ, 7,500 ಸಹೋದರಿಯರು ಮತ್ತು ಹೆಣ್ಣುಮಕ್ಕಳು ಚರಕದ ಮೇಲೆ ನೂಲುವ ಮೂಲಕ ಇತಿಹಾಸವನ್ನ ಸೃಷ್ಟಿಸಿದರು. ನೂಲುವ ಚರಕವು ನನ್ನನ್ನು ನನ್ನ ಬಾಲ್ಯದ ದಿನಗಳಿಗೆ ಕರೆದೊಯ್ದಿತು’ ಎಂದರು.

‘ನಾನು ದೇಶದ ಜನರಿಗೆ ಮನವಿ ಮಾಡಲು ಬಯಸುತ್ತೇನೆ. ಮುಂಬರುವ ಹಬ್ಬಗಳಲ್ಲಿ, ಈ ಬಾರಿ ಖಾದಿ ಗ್ರಾಮೋದ್ಯೋಗಗಳಲ್ಲಿ ತಯಾರಿಸಿದ ಉತ್ಪನ್ನಗಳನ್ನು ಮಾತ್ರ ಉಡುಗೊರೆಯಾಗಿ ನೀಡಿ. ನೀವು ವಿವಿಧ ರೀತಿಯ ಬಟ್ಟೆಗಳಿಂದ ಮಾಡಿದ ಬಟ್ಟೆಗಳನ್ನ ಹೊಂದಿರಬಹುದು. ಆದ್ರೆ, ಅದರಲ್ಲಿ ನೀವು ಖಾದಿಗೆ ಸ್ಥಾನ ನೀಡಿದ್ರೆ, ‘ವೋಕಲ್ ಫಾರ್ ಲೋಕಲ್’ ಅಭಿಯಾನವು ವೇಗವನ್ನ ಪಡೆಯುತ್ತದೆ’ ಎಂದು ಅವರು ಮನವಿ ಮಾಡಿದರು.

ಈ ವೇಳೆ ಭಾರತದ ಸ್ವಾತಂತ್ರ್ಯ ಹೋರಾಟವನ್ನು ಉಲ್ಲೇಖಿಸಿದ ಅವರು, ಖಾದಿ ದೇಶದ ಹೆಮ್ಮೆಯಾಗಿದ್ದು, ಸ್ವಾತಂತ್ರ್ಯಾನಂತರ ಖಾದಿಯ ಬಗ್ಗೆ ಕೀಳರಿಮೆ ಉಂಟಾಗಿದೆ ಎಂದರು. ‘ಈ ಕಾರಣದಿಂದಾಗಿ, ಖಾದಿ ಮತ್ತು ಖಾದಿಗೆ ಸಂಬಂಧಿಸಿದ ಗ್ರಾಮೋದ್ಯೋಗವು ಸಂಪೂರ್ಣವಾಗಿ ನಾಶವಾಯಿತು. ಖಾದಿಯ ಈ ಸ್ಥಿತಿ ವಿಶೇಷವಾಗಿ ಗುಜರಾತ್ʼಗೆ ತುಂಬಾ ನೋವಿನಿಂದ ಕೂಡಿದೆ’ ಎಂದು ಪ್ರಧಾನಿ ಹೇಳಿದರು.

ಖಾದಿಯ ಮೇಲಿನ ಅಭಿಮಾನವನ್ನ ಮರುಸ್ಥಾಪಿಸಲು ತಮ್ಮ ಸರ್ಕಾರ ಶ್ರಮಿಸಿದೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು. ‘ನಾವು ‘ಪರಿವರ್ತನೆಗಾಗಿ ಖಾದಿ’ ಎಂಬ ಪ್ರತಿಜ್ಞೆಯನ್ನ ‘ಖಾದಿ ಫಾರ್ ನೇಷನ್’ ಮತ್ತು ‘ಖಾದಿ ಫಾರ್ ಫ್ಯಾಷನ್’ಗೆ ಸೇರಿಸಿದ್ದೇವೆ. ನಾವು ಗುಜರಾತ್ʼನ ಯಶಸ್ಸಿನ ಅನುಭವಗಳನ್ನು ದೇಶಾದ್ಯಂತ ಹರಡಲು ಪ್ರಾರಂಭಿಸಿದ್ದೇವೆ. ದೇಶಾದ್ಯಂತ ಖಾದಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲಾಯಿತು. ಖಾದಿ ಉತ್ಪನ್ನಗಳನ್ನು ಖರೀದಿಸಲು ನಾವು ದೇಶವಾಸಿಗಳನ್ನು ಪ್ರೋತ್ಸಾಹಿಸಿದ್ದೇವೆ’ ಎಂದರು.

ಖಾದಿಯನ್ನು ದೇಶದ ಹೆಮ್ಮೆ ಎಂದು ಎತ್ತಿ ತೋರಿಸಿದ ಪ್ರಧಾನಿ ಮೋದಿ, ಖಾದಿ ಪರಿಸರ ಸ್ನೇಹಿ ಮತ್ತು ಸುಸ್ಥಿರ ಉಡುಪುಗಳಿಗೆ ಒಂದು ಉದಾಹರಣೆಯಾಗಿದೆ. ಇದು ಕನಿಷ್ಠ ಇಂಗಾಲದ ಹೆಜ್ಜೆಗುರುತುಗಳನ್ನ ಬಿಡುತ್ತದೆ ಎಂದು ಹೇಳಿದರು. ಖಾದಿ ಸುಸ್ಥಿರ ಉಡುಗೆಗೆ ಒಂದು ಉದಾಹರಣೆಯಾಗಿದೆ. ಖಾದಿ ಪರಿಸರ ಸ್ನೇಹಿ ಉಡುಗೆಗೆ ಒಂದು ಉದಾಹರಣೆಯಾಗಿದೆ. ಖಾದಿಯು ಅತ್ಯಂತ ಕಡಿಮೆ ಇಂಗಾಲದ ಹೆಜ್ಜೆಗುರುತನ್ನ ಹೊಂದಿದೆ. ತಾಪಮಾನವು ಹೆಚ್ಚಿರುವ ಅನೇಕ ದೇಶಗಳಿವೆ, ಆರೋಗ್ಯದ ದೃಷ್ಟಿಯಿಂದ ಖಾದಿ ಕೂಡ ಬಹಳ ಮುಖ್ಯವಾಗಿದೆ. ಆದ್ದರಿಂದ ಖಾದಿ ಜಾಗತಿಕ ಮಟ್ಟದಲ್ಲಿ ದೊಡ್ಡ ಪಾತ್ರವನ್ನ ವಹಿಸಬಹುದು’ ಎಂದು ಹೇಳಿದರು.

ಆಗಸ್ಟ್ 15 ರಂದು ಕೆಂಪು ಕೋಟೆಯಲ್ಲಿ ಅವರು ಐದು ಸಂಕಲ್ಪಗಳ ಬಗ್ಗೆ ಮಾತನಾಡಿದ್ದರು

ಮಹಿಳೆಯರ ಕೊಡುಗೆಯನ್ನ ಗುರುತಿಸಿದ ಪ್ರಧಾನಿ ಮೋದಿ, ಭಾರತದ ಖಾದಿ ಉದ್ಯಮದ ಬೆಳೆಯುತ್ತಿರುವ ಶಕ್ತಿಗೆ ಮಹಿಳಾ ಶಕ್ತಿ ಪ್ರೇರಕ ಅಂಶವಾಗಿದೆ ಎಂದು ಹೇಳಿದರು.

ಉದ್ಯಮಶೀಲತೆಯ ಮನೋಭಾವವು ನಮ್ಮ ಸಹೋದರಿಯರು ಮತ್ತು ಹೆಣ್ಣುಮಕ್ಕಳಲ್ಲಿ ಬೇರೂರಿದೆ. ಗುಜರಾತ್‌ನಲ್ಲಿ ಸಖಿ ಮಂಡಲಗಳ ವಿಸ್ತರಣೆಯೂ ಇದಕ್ಕೆ ಸಾಕ್ಷಿಯಾಗಿದೆ ಎಂದು ಅವರು ಹೇಳಿದರು.

ಕಳೆದ ದಶಕಗಳಲ್ಲಿ, ವಿದೇಶಿ ಆಟಿಕೆ ಉದ್ಯಮದ ಸ್ಪರ್ಧೆಯಿಂದಾಗಿ ಭಾರತದ ಆಟಿಕೆ ಉದ್ಯಮವು ನಾಶವಾಗುತ್ತಿದೆ. ಸರ್ಕಾರದ ಪ್ರಯತ್ನದಿಂದ ಪರಿಸ್ಥಿತಿ ಈಗ ಬದಲಾಗುತ್ತಿದೆ. ಈಗ ವಿದೇಶದಿಂದ ಆಮದು ಮಾಡಿಕೊಳ್ಳುವ ಆಟಿಕೆಗಳಲ್ಲಿ ಇಳಿಕೆಯಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ಈ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ಅಹ್ಮದಾಬಾದ್ ನಲ್ಲಿ ಅಟಲ್ ಸೇತುವೆಯನ್ನು ಉದ್ಘಾಟಿಸಿದರು. ಅಟಲ್ ಸೇತುವೆಯು ಸಬರಮತಿ ನದಿಯ 2 ದಡಗಳನ್ನ ಸಂಪರ್ಕಿಸುವುದಲ್ಲದೆ.ವಿನ್ಯಾಸ ಮತ್ತು ಆವಿಷ್ಕಾರಗಳಲ್ಲಿ ಅಭೂತಪೂರ್ವವಾಗಿದೆ ಎಂದು ಅವರು ಹೇಳಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Maharashtra Election ‘ಮಹಾ’ ಚುನಾವಣೆ.ಮತ್ತೆ ತಲೆಯೆತ್ತಿದ ” ಮಹಾಯುತಿ” ಮಕಾಡೆ ಬಿದ್ದಅಘಾಡಿ

Maharashtra Election ದೇಶದ ಗಮನ ಸೆಳೆದ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ...

Police Department ರಾಜ್ಯದ ಜೈಲುಗಳ ವಾರ್ಡನ್ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ನೇಮಕವಾಗಲು ಆಸಕ್ತ ಮಾಜಿ ಸೈನಿಕರು ಅರ್ಜಿ ಸಲ್ಲಿಸಲು ಅವಕಾಶ

Police Department ಕರ್ನಾಟಕ ರಾಜ್ಯಾದ್ಯಾಂತ ಇರುವ ಜೈಲುಗಳಲ್ಲಿ ವಾರ್ಡನ್‌ ಹುದ್ದೆಗೆ ಗುತ್ತಿಗೆ...

DC Shivamogga ಶಿವಮೊಗ್ಗ ಜಿಲ್ಲೆಯಲ್ಲಿ ಚುನಾವಣಾ ಜನಸಂಖ್ಯೆ ಅನುಪಾತದ ಬಗ್ಗೆ ಡಾ.ತ್ರಿಲೋಕ ಚಂದ್ರ ಅವರಿಂದ ಪರಿಶೀಲನೆ

DC Shivamogga ಶಿವಮೊಗ್ಗ ಜಿಲ್ಲೆಯಲ್ಲಿ ಚುನಾವಣಾ ಜನಸಂಖ್ಯೆ ಅನುಪಾತ (ಇಪಿ ರೇಷಿಯೋ)...