ಭರಮ ಸಾಗರದ ಶ್ರೀಮತಿ ಬಿ. ಸುಜಾತಾ ಸುರೇಶ್ ಮುಖ್ಯ ಶಿಕ್ಷಕರರ ನೇತೃತ್ವದ ಪ್ರೌಡಶಾಲೆಗೆ ತಾಲ್ಲೂಕು ಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ- ಜಿಲ್ಲಾಮಟ್ಟದ ಪಂದ್ಯಾವಳಿಗೆ ಆಯ್ಕೆ.
ಅನುಪಮ ಸೇವಾ ರತ್ನ ಪ್ರಶಸ್ತಿ ಪುರಸ್ಕಾರ ಪಡೆದ ಮುಖ್ಯ ಶಿಕ್ಷಕಿಯಾದ ಶ್ರೀಮತಿ ಸುಜಾತಾರವರು ಕಾಯಕಯೋಗಿಗಳಾಗಿ ಚೈತನ್ಯ ಚಿಲುಮೆಯಾಗಿ ಸದಾ ಕ್ರಿಯಾಶೀಲತೆಯಿಂದ ಆದರ್ಶ ಸಮಾಜಕ್ಕೆ ಉತ್ತಮ ನಾಗರಿಕರಿಗೆ ಕೊಡುಗೆಯಾಗಿ ನೀಡುವ ಕೆಲಸದಲ್ಲಿ ತೊಡಗಿರುವ ಶಿಕ್ಷಕಿಯಾಗಿ ಮಕ್ಕಳ ಅಭಿವೃದ್ಧಿ ಗಾಗಿ ಶ್ರಮಿಸುತ್ತಿದ್ದಾರೆ.
ಶ್ರೀಮತಿ ಬಿ.ಸುಜಾತ ಇವರು ಶಾಲಾ ಅಭಿವೃದ್ಧಿ , ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆ ಜೊತೆ ಅವರನ್ನು ಕ್ರೀಡಾ ಕ್ಷೇತ್ರ ಮಕ್ಕಳನ್ನು ಮೇಲೆ ತರುವಂತಹ ಕೆಲಸವನ್ನು ಮಾಡಿರುತ್ತಾರೆ. ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಯ ಅನೇಕ ಸಂಘ ಸಂಸ್ಥೆಗಳು ಇವರ ಅಮೂಲ್ಯ ಸೇವೆಯನ್ನು ಗುರುತಿಸಿ ಇವರನ್ನು ಸನ್ಮಾನಿಸಿದೆ. ಇವರು ಉತ್ತಮ ಗಾಯಕಿಯಾಗಿ ಮಕ್ಕಳಿಗೆ ಸಂಗೀತ,ಸಾಹಿತ್ಯ, ಸಾಮಾಜಿಕ ಕ್ಷೇತ್ರದಲ್ಲಿ ಬೆಳೆಯುವುದನ್ನು ತಮ್ಮ ಶಿಕ್ಷಣದ ಉಪನ್ಯಾಸದ ಜೊತೆಗೆ ತಿಳಿಸಿಕೊಡುವ ಪ್ರಯತ್ನ ಮಾಡಿರುತ್ತಾರೆ, ಇವರ ಕೈಯಲ್ಲಿ ಶಿಕ್ಷಣ ಪಡೆದ ಅನೇಕ ವಿದ್ಯಾರ್ಥಿಗಳು ಉತ್ತಮ ಜೀವನವನ್ನು ನಡೆಸುತ್ತಿರುವುದನ್ನು ಈ ಸಂಧರ್ಭದಲ್ಲಿ ಸ್ಮರಿಸಬಹುದಾಗಿದೆ.
ಪ್ರತಿ ವರುಷ ನೆಡೆಯುವ ಸಾರ್ವಜನಿಕ ಶಿಕ್ಷಣ ಇಲಾಖೆ ಆಯೋಜಿಸುವ ಪಂದ್ಯಾವಳಿಯಲ್ಲಿ ಮಕ್ಕಳನ್ನು ಪ್ರೋತ್ಸಾಹಿಸಿ ಪುಟ್ಟ ಗ್ರಾಮವಾದ ದಾವಣಗೆರೆ ಜಿಲ್ಲೆಯ ಹೂನ್ನೂರಿನ ಸಾರ್ವಜನಿಕರು ಮತ್ತು ಶಿಕ್ಷಕರು ಮಕ್ಕಳನ್ನು ಪ್ರೋತ್ಸಾಹ ನೀಡಿ ಪಂದ್ಯದಲ್ಲಿ ಸ್ಪರ್ಧಾತ್ಮಕವಾಗಿ ಆಟವನ್ನು ಆಡಿ ಗೆಲುವನ್ನು ಸಾಧಿಸಿಸಲು ಬೇಕಾದ ತಯಾರಿ ಮಾಡಿರುತ್ತಾರೆ.ಅದರಂತೆ ದಿನಾಂಕ 26-8-2022 ರಂದು ನೆಡೆದ ಬಾಲಕಿಯರ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿ ಯಲ್ಲಿ ಸ್ಪರ್ಧಾತ್ಮಕ ಆಟವಾಡಿ ಗೆಲುವನ್ನು ತಂದು ಪ್ರತಿವರ್ಷದಂತೆ ಗ್ರಾಮಾಂತರ ಶಾಲೆಗೆ ಮತ್ತು ಗ್ರಾಮಕ್ಕೆ ಹೆಸರನ್ನು ತರುವಲ್ಲಿ ಯಶಸ್ವಿಯಾದರು.
ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ನಮ್ಮ ಮಕ್ಕಳು ಗೆಲುವನ್ನು ಸಾಧಿಸಿ ತೋರಿಸುವರು ಎಂದು ಮುಖ್ಯ ಶಿಕ್ಷಕಿಯಾಗಿ ಸುಜಾತರವರು ಮಕ್ಕಳ ಗೆಲುವಿನ ಸಂತಸದ ಸಂದರ್ಭದಲ್ಲಿ ಈ ಸಂದರ್ಭದಲ್ಲಿ ತಿಳಿಸಿದರು.
ಶಾಲೆ ಮತ್ತು ಮಕ್ಕಳಿಗೆ ಅಭಿನಂದನೆಗಳು.
ವರದಿ
ಮುರುಳೀಧರ್ ನಾಡಿಗೇರ್
ಹೊಸಪೇಟೆ- ವಿಜಯನಗರ