Friday, November 22, 2024
Friday, November 22, 2024

ಇ-ಪಾಸ್ ಪೋರ್ಟ್ತರುವ ಬಗ್ಗೆ ಕೇಂದ್ರದ ಚಿಂತನೆ

Date:

ದೇಶದಲ್ಲಿ ಈ ವರ್ಷದ ಅಂತ್ಯದ ವೇಳೆಗೆ ಅಥವಾ ಮುಂದಿನ ವರ್ಷದ ಆರಂಭದಲ್ಲಿ ಹೈಟೆಕ್ ಪಾಸ್ ಪೋರ್ಟನ್ನು ಕೇಂದ್ರ ಸರ್ಕಾರ ಹೊರಗೆ ತರುವ ಸಾಧ್ಯತೆಯಿದೆ.

ಇತ್ತೀಚೆಗಷ್ಟೆ ಈ ಬಗ್ಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ಔಸಫ್ ಸಯೀದ್ ಹೇಳಿಕೆ ನೀಡಿದ್ದಾರೆ.

ಈಗಿರುವ ಪಾಸ್ ಪೋರ್ಟ್ ನಲ್ಲಿ ನಕಲಿ ಹಾವಳಿ ಹೆಚ್ಚಾಗಿದ್ದು, ಇದನ್ನು ಕೊನೆಗೊಳಿಸಲು ಇ-ಚಿಪ್ (E-Chip) ಎಂಬೆಡ್ ಮಾಡಲಾದ ಎಲೆಕ್ಟ್ರಾನಿಕ್ ಪಾಸ್ ಪೋರ್ಟ್ ವಿತರಿಸಲು ತೆರೆಮರೆಯಲ್ಲಿ ಕೇಂದ್ರ ವಿದೇಶಾಂಗ ಇಲಾಖೆ ಸಿದ್ಧತೆ ನಡೆಸುತ್ತಿದೆ.

ಅಂತರಾಷ್ಟ್ರೀಯ ನಾಗರೀಕ ವಿಮಾನಯಾನ ಮಾನದಂಡಗಳಿಗೆ ಅನುಸಾರವಾಗಿ ಪಾಸ್ ಪಾರ್ಟ್ ನಲ್ಲಿ ವ್ಯಕ್ತಿಯ ವೈಯುಕ್ತಿಕ ಮಾಹಿತಿಯನ್ನು ನಕಲು ಮಾಡಲಾಗದ ರೀತಿಯಲ್ಲಿ ಎಂಬೆಡ್ ಮಾಡಲಾದ ಚಿಪ್ ನೊಂದಿಗೆ ಇ-ಪಾಸ್ ಪೋರ್ಟ್ ಇರಲಿದೆ. ಹಳೆಯ ಪಾಸ್ ಪೋರ್ಟ್ ಗಳನ್ನು ಹೊಸ ಇ-ಚಿಪ್ ಪಾಸ್ ಪೋರ್ಟ್ ಗಳೊಂದಿಗೆ ಬದಲಿಸುವ ಪ್ರಕ್ರಿಯೆ ಸ್ವಯಂಪ್ರೇರಿತವಾಗಿರುತ್ತದೆ. ಆದರೆ ಇದನ್ನು ಖಡ್ಡಾಯ ಮಾಡುತ್ತಿಲ್ಲ ಎಂದು ಔಸಫ್ ಸಯೀದ್ ಹೇಳಿದ್ದಾರೆ.

ಅಂತರರಾಷ್ಟ್ರೀಯ ಪ್ರಯಾಣವನ್ನು ಸುಲಭಗೊಳಿಸಲು ಮತ್ತು ಪಾಸ್‌ಪೋರ್ಟ್ ಹೊಂದಿರುವವರ ಡೇಟಾವನ್ನು ಸುರಕ್ಷಿತವಾಗಿಸಲು, ಭಾರತ ಸರ್ಕಾರವು ಇಪಾಸ್‌ಪೋರ್ಟ್‌ಗಳು ಅನುಕೂಲಕಾರಿಯಾಗಿದೆ.

ಇ-ಪಾಸ್‌ಪೋರ್ಟ್‌ಗಳು ಸಾಂಪ್ರದಾಯಿಕ ಪಾಸ್‌ಪೋರ್ಟ್‌ಗಳಂತೆಯೇ ಅದೇ ಉದ್ದೇಶವನ್ನು ಪೂರೈಸುತ್ತವೆ. ಆದರೆ ಎಂಬೆಡೆಡ್ ಚಿಪ್‌ಗಳು (Embeded Chip) ಮತ್ತು ಪ್ಯೂಚರಿಸ್ಟಿಕ್ ತಂತ್ರಜ್ಞಾನದೊಂದಿಗೆ ಬರುತ್ತವೆ ಎಂದು ಸೀತಾರಾಮನ್ ತಮ್ಮ ಬಜೆಟ್ ಭಾಷಣದಲ್ಲಿ ಹೇಳಿದ್ದರು.

ಇ-ಪಾಸ್‌ಪೋರ್ಟ್‌ಗಳು ಮೈಕ್ರೋಚಿಪ್‌ಗಳನ್ನು ಒಳಗೊಂಡಿರುತ್ತವೆ ಮತ್ತು ಅವುಗಳಲ್ಲಿ ಪ್ರಮುಖವಾದ ಭದ್ರತಾ ಡೇಟಾವನ್ನು ಸಂಗ್ರಹಿಸಲಾಗುತ್ತದೆ. ಭಾರತವು ಪ್ರಸ್ತುತ ಬಳಕೆದಾರರಿಗೆ ಮುದ್ರಿತ ಪಾಸ್‌ಪೋರ್ಟ್‌ಗಳನ್ನು ಮಾತ್ರ ನೀಡುತ್ತದೆ. ಆದರೆ ಇ-ಪಾಸ್‌ಪೋರ್ಟ್‌ಗಳು ಯುಎಸ್, ಯುಕೆ ಮತ್ತು ಜರ್ಮನಿ ಸೇರಿದಂತೆ ಉಳಿದ ದೇಶಗಳಲ್ಲಿ ಲಭ್ಯವಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Department of Cooperation ಹಿರಿಯ ಸಹಕಾರಿ ಧುರೀಣ ಕೊಪ್ಪದ ಎಸ್.ಎನ್.ವಿಶ್ವನಾಥ್ ಗೆ ‘ ಸಹಕಾರಿ ರತ್ನ’ ಪ್ರಶಸ್ತಿ.

Department of Cooperation ಕರ್ನಾಟಕ ಸರ್ಕಾರದ ಕರ್ನಾಟಕ ಸಹಕಾರ ಮಹಾಮಂಡಲ ದ...

Kasturba Girls Junior College ಮಕ್ಕಳ ಪ್ರತಿಭೆ ಅನಾವರಣಗೊಳಿಸುವ ಪ್ರತಿಭಾ ಕಾರಂಜಿಗೆ ಇನ್ನಷ್ಟು ಶಕ್ತಿ ತುಂಬೋಣ- ಶಾಸಕ ಚನ್ನಬಸಪ್ಪ

Kasturba Girls Junior College ವೈವಿಧ್ಯತೆಯನ್ನು ಹೊಂದಿರುವ ನಮ್ಮ ರಾಷ್ಟ್ರದ ಸಂಸ್ಕೃತಿಯನ್ನು...