ಎಲ್ಲೆಲ್ಲೂ ‘ವಿಕ್ರಾಂತ್ ರೋಣ ಸಿನಿಮಾಕ್ಕೆ ಸುದ್ದಿ. ವಿಕ್ರಾಂತ್ ರೋಣ ಸಿನಿಮಾದಿಂದ ‘ ₹200 ಕೋಟಿ ಕ್ಲಬ್ ಸೇರಿದೆ. ಈ ಮೂಲಕ ₹200 ಕೋಟಿ ಕ್ಲಬ್ ಸೇರಿದ ಕನ್ನಡ ಸಿನಿಮಾ ಇಂಡಸ್ಟ್ರಿಯ 2ನೇ ಸಿನಿಮಾ ಎಂಬ ಹೆಗ್ಗಳಿಕೆಗೂ ‘ವಿಕ್ರಾಂತ್ ರೋಣ’ ಪಾತ್ರವಾಗಿದೆ.
ಕನ್ನಡ ಸಿನಿಮಾಗಳ ತಾಕತ್ತು ಇಡೀ ಜಗತ್ತಿಗೇ ಗೊತ್ತಾಗಿದೆ. ಹೀಗಾಗಿ ಕನ್ನಡದ ಸಿನಿಮಾಗಳು ಸಪ್ತಸಾಗರ ದಾಟಿವೆ. ಎಲ್ಲೆಲ್ಲೂ ಕನ್ನಡದ ಕಂಪು ಹರಿಸುತ್ತಿವೆ ಸ್ಯಾಂಡಲ್ವುಡ್ ಸಿನಿಮಾಗಳು. ಇದೇ ರೀತಿ ಕನ್ನಡಿಗ ಕಿಚ್ಚ ಸುದೀಪ್ ಅವರ ‘ವಿಕ್ರಾಂತ್ ರೋಣ’ ಕೂಡ ಅಬ್ಬರಿಸಿ ಬೊಬ್ಬಿರಿಯುತ್ತಿದೆ.
ಈಗಾಗಲೇ ಬಾಕ್ಸ್ ಆಫಿಸ್ನಲ್ಲಿ ₹210 ಕೋಟಿ ಕಲೆಕ್ಷನ್ ಮಾಡಿರುವ ಈ ಚಿತ್ರ ₹250 ಕೋಟಿ ಕ್ಲಬ್ ಸೇರಲು ದಾಪುಗಾಲು ಇಡುತ್ತಿದೆ.
ಈಗಾಗಲೇ ₹200 ಕೋಟಿ ಗಡಿ ದಾಟಿ ಹೊಸ ಇತಿಹಾಸ ಬರೆದಿರುವ ನಟ ಸುದೀಪ್ ಅವರ ಸಿನಿಮಾ, ಇದೀಗ ಜಗತ್ತಿನ ಮೂಲೆ ಮೂಲೆಯಲ್ಲೂ ಸದ್ದು ಮಾಡ್ತಿದೆ. ಈಗಾಗಲೇ ಹಾಲಿವುಡ್ ಅಂಗಳಕ್ಕೆ ಎಂಟ್ರಿಯಾದ ಮೊಟ್ಟ ಮೊದಲ ಕನ್ನಡ ಸಿನಿಮಾ ಎಂಬ ಹೆಗ್ಗಳಿಕೆಯನ್ನ ‘ವಿಕ್ರಾಂತ್ ರೋಣ’ ಪಡೆದಿದ್ದು, ಕೋಟಿ ಕೋಟಿ ಭಾರತೀಯರು ಹಾಗೂ ಜಗತ್ತಿನಾದ್ಯಂತ ಇರುವ ಕಿಚ್ಚ ಸುದೀಪ್ ಅವರ ಅಭಿಮಾನಿಗಳು ಸಿನಿಮಾ ಕಣ್ತುಂಬಿಕೊಂಡಿದ್ದಾರೆ.
ಇನ್ನು ಸಿನಿಮಾ ರಿಲೀಸ್ ಆಗಿ 1 ತಿಂಗಳು ಕಂಪ್ಲೀಟ್ ಆಗುತ್ತಾ ಬಂದ್ರು ‘ವಿಕ್ರಾಂತ್ ರೋಣ’ ಹವಾ ಕಡಿಮೆ ಆಗಿಲ್ಲ.