ವಿಶ್ವದ ಅತಿದೊಡ್ಡ ಮತ್ತು ಅತ್ಯಂತ ವಿಶಾಲವಾದ ಪ್ರಯಾಣಿಕ ವಿಮಾನವು ನಮ್ಮ ಬೆಂಗಳೂರಿಗೆ ಶೀಘ್ರದಲ್ಲೇ ಬರಲಿದೆ.
ಎಮಿರೇಟ್ಸ್ ಏರ್‌ಲೈನ್ಸ್ ಅಕ್ಟೋಬರ್ 30ರಿಂದ ಬೆಂಗಳೂರು- ದುಬೈ ಮಾರ್ಗದಲ್ಲಿ ಈ ಜಂಬೋ ವಿಮಾನವನ್ನು ಹಾರಾಟಕ್ಕೆ ನಿಯೋಜಿಸಲಿದೆ.
ಎ 380 ಎಂಬುದು ವಿಶ್ವದ ಉದ್ದವಾದ ಡಬಲ್ ಡೆಕ್ಕರ್ ವಿಮಾನವಾಗಿದ್ದು, 500ಕ್ಕಿಂತ ಹೆಚ್ಚು ಆಸನ ಸಾಮರ್ಥ್ಯ ಹೊಂದಿದೆ. ಬೆಂಗಳೂರು ದೆಹಲಿ ಮತ್ತು ಮುಂಬೈ ನಂತರ ಜಂಬೋ ಜೆಟ್ ಅನ್ನು ಇಳಿಸುವ ಮೂರನೇ ಭಾರತೀಯ ನಗರವಾಗಲಿದೆ. ಎಮಿರೇಟ್ಸ್ ಏರ್‌ಲೈನ್ಸ್‌ಗೆ ಬೆಂಗಳೂರು ಎ 380 ವಿಮಾನವನ್ನು ದೈನಂದಿನ ಸೇವೆಯಾಗಿ ನಿಯೋಜಿಸುವ ಎರಡನೇ ಭಾರತೀಯ ನಗರವಾಗಿದೆ.
ಇದಕ್ಕೂ ಮೊದಲು ಎಮಿರೇಟ್ಸ್ ವಿಮಾನಯಾನ ಸಂಸ್ಥೆಯು 2014 ರಿಂದ ಮುಂಬೈ- ದುಬೈ ಮಾರ್ಗದಲ್ಲಿ ಎ 380 ಅನ್ನು ಹಾರಿಸುತ್ತಿದೆ.
ಬೆಂಗಳೂರು- ದುಬೈ ಮಾರ್ಗದಲ್ಲಿ ದೈನಂದಿನವಾಗಿ ಎ 380 ವಿಮಾನಗಳು ಮೂರು ವರ್ಗದ ಮಾದರಿಯಲ್ಲಿ ಹಾರಾಟ ನಡೆಸಲಿವೆ. ಅವುಗಳೆಂದರೆ ಎಕಾನಮಿ, ಬಿಸಿನೆಸ್ ಮತ್ತು ಫಸ್ಟ್ ಕ್ಲಾಸ್ ತರಗತಿಗಳಲ್ಲಿ ಆಸನಗಳು ವಿಮಾನದಲ್ಲಿ ಇರಲಿವೆ. ಇಕೆ 568 ಅಕ್ಟೋಬರ್ 30 ರಂದು ಸ್ಥಳೀಯ ಕಾಲಮಾನ ರಾತ್ರಿ 9.25ಕ್ಕೆ ದುಬೈನಿಂದ ಟೇಕ್ ಆಫ್ ಆಗಲಿದ್ದು, ಮರುದಿನ ಮುಂಜಾನೆ 2.30ಕ್ಕೆ ಬೆಂಗಳೂರನ್ನು ತಲುಪಲಿದೆ. ರಿಟರ್ನ್ ಫ್ಲೈಟ್ ಇಕೆ 569 ಅಕ್ಟೋಬರ್ 31 ರಂದು ಬೆಳಿಗ್ಗೆ 4.30ಕ್ಕೆ ಬೆಂಗಳೂರಿನಿಂದ ಹೊರಟು ಸಂಜೆ 7.10ಕ್ಕೆ (ಸ್ಥಳೀಯ ಸಮಯ) ದುಬೈಗೆ ಇಳಿಯುತ್ತದೆ.
ಎ380 ಆಸನಗಳು ಎಕಾನಮಿ ಕ್ಲಾಸ್‌ನಲ್ಲಿ ಹೆಚ್ಚುವರಿ ಲೆಗ್‌ರೂಮ್‌ನೊಂದಿಗೆ ವಿಶಾಲವಾಗಿರುತ್ತವೆ. ಬಿಸಿನೆಸ್ ಕ್ಲಾಸ್ ಸಂಪೂರ್ಣವಾಗಿ ಫ್ಲಾಟ್ ಸೀಟ್‌ಗಳನ್ನು ಹೊಂದಿರುತ್ತದೆ. ಫಸ್ಟ್ ಕ್ಲಾಸ್ ಖಾಸಗಿ ಸೂಟ್‌ಗಳು ಮತ್ತು ಶವರ್ ಸ್ಪಾಗಳನ್ನು ಹೊಂದಿರುತ್ತದೆ ಎಂದು ಎಮಿರೇಟ್ಸ್ ಏರ್‌ಲೈನ್ಸ್ ತಿಳಿಸಿದೆ.