ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದಂತೆ ದೇಶದಾದ್ಯಂತ ಮನೆ ಮನೆ ತ್ರಿವರ್ಣ ಧ್ವಜ ಹಾರಿಸಿ, ಜನತೆ ಸಂಭ್ರಮಿಸಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ಸಂದಿದ್ದು, 76ನೇ ವರ್ಷದ ಸಂಭ್ರಮಾಚರಣೆಗೂ ಮುನ್ನ ದೇಶದ ಜನತೆಗೆ ತ್ರಿವರ್ಣ ಧ್ವಜಾರೋಹಣದ ಮಹತ್ವ ತಿಳಿಸಲು ಕೇಂದ್ರ ಸರ್ಕಾರ ಕೈಗೊಂಡ ಕ್ರಮ ಯಶಸ್ವಿಯಾಗಿದೆ.
ಹರ್ ಘರ್ ತಿರಂಗಾ ಹೆಸರಿನ ಅಭಿಯಾನವನ್ನು ಆಗಸ್ಟ್ 13 ರಿಂದ 15ರ ತನಕ ಅಜಾದಿ ಕಾ ಅಮೃತ್ ಮಹೋತ್ಸವದ ಅಂಗವಾಗಿ ಜಾರಿಗೊಳಿಸಲಾಗಿತ್ತು. ಆದರೆ, ಅನೇಕರಿಗೆ ತಮ್ಮ ಮನೆ ಮೇಲೆ ತ್ರಿವರ್ಣ ಬಾವುಟ ಹಾರಿಸಲು ಸಾಧ್ಯವಾಗದ ಕಾರಣ, ವರ್ಚ್ಯುಯಲ್ ಆಗಿ ಬಾವುಟ ಹಾರಾಟ ಮಾಡಿ ಸಂಭ್ರಮಿಸಲು ಅವಕಾಶ ಒದಗಿಸಲಾಗಿದೆ.
ಹರ್ ಘರ್ ತಿರಂಗಾ ಅಭಿಯಾನ ಯಶಸ್ಸಿಗಾಗಿ ಪ್ರತ್ಯೇಕ ವೆಬ್ ತಾಣವನ್ನು ಸರ್ಕಾರ ರೂಪಿಸಿ, ಜನತೆಗೆ ನೀಡಿದ್ದು, ಭಾರತದ ರಾಷ್ಟ್ರಧ್ವಜವನ್ನು ವರ್ಚ್ಯುಯಲ್ ಆಗಿ ಕೋಟ್ಯಂತರ ಮಾಡಿ ಹಾರಿಸಿ ಸಂಭ್ರಮಿಸಿದ್ದಾರೆ. ವಿವಿಧ ವೇದಿಕೆಗಳಲ್ಲಿ ತ್ರಿವರ್ಣ ಧ್ವಜ ರಾರಾಜಿಸುವಂತಾಗಿದೆ. ಈ ರೀತಿ ವರ್ಚ್ಯುಯಲ್ ಅಭಿಯಾನದಲ್ಲಿ ಪಾಲ್ಗೊಂಡವರು ಪ್ರಮಾಣ ಪತ್ರವನ್ನು ಪಡೆದುಕೊಳ್ಳಬಹುದು.
ಇದಕ್ಕಾಗಿ ವೆಬ್ ಸೈಟ್ ನಲ್ಲಿ ಹಾರಾಡುವ ತಿರಂಗಾದ ಜೊತೆಗೆ ಒಂದು ಸೆಲ್ಫಿ ಸಾಕು.
ಹರ್ ಘರ್ ತಿರಂಗಾ ಪ್ರಮಾಣ ಪತ್ರ ಡೌನ್ ಲೋಡ್ ಮಾಡಿಕೊಳ್ಳುವುದು ಹೇಗೆ?
ಹರ್ ಘರ್ ತಿರಂಗಾ ವೆಬ್ ತಾಣಕ್ಕೆ ಭೇಟಿ ಕೊಡಿ.
ವೆಬ್ ತಾಣದ ಮುಖಪುಟದಲ್ಲಿ ಕಾಣುವ Pin A Flag ಕ್ಲಿಕ್ ಮಾಡಿ
ಇದಕ್ಕೂ ಮುನ್ನ ನಿಮ್ಮ ಹೆಸರು ಹಾಗೂ ಮೊಬೈಲ್ ಸಂಖ್ಯೆಯನ್ನು ನಮೂದಿಸಿ.
ನಂತರ Next ಕ್ಲಿಕ್ ಮಾಡಿ
ನಿಮ್ಮ location ತಿಳಿಯಲು ಅನುಮತಿ ಕೋರಲಾಗುತ್ತದೆ. ಮ್ಯಾಪ್ ನೋಡಿ ನೀವು ನೆಲೆಸಿದ ಸ್ಥಳವನ್ನು ಸರಿಯಾಗಿ ಮಾರ್ಕ್ ಮಾಡಿ.
ಬಾವುಟವನ್ನು ಪಿನ್ ಮಾಡಿ, ಪಾಪ್ ಅಪ್ ಮೂಲಕ ಅಭಿಯಾನದಲ್ಲಿ ಪಾಲ್ಗೊಂಡಿದ್ದಕ್ಕೆ ಧನ್ಯವಾದ ಎಂಬ ಸಂದೇಶ ಬರಲಿದೆ.
ಡೌನ್ ಲೋಡ್ ಕ್ಲಿಕ್ ಮಾಡಿ ಸೇವ್ ಮಾಡಿಕೊಳ್ಳಿ. ಇದು PNG ಮಾದರಿಯಲ್ಲಿರಲಿ.
ದೇಶದ 75 ನೇ ಸ್ವಾತಂತ್ರ್ಯದ ವಾರ್ಷಿಕೋತ್ಸವವನ್ನು ಗುರುತಿಸಲು ಆಜಾದಿ ಕಾ ಅಮೃತ್ ಮಹೋತ್ಸವವನ್ನು ಕೇಂದ್ರ ಸರ್ಕಾರ ಹಮ್ಮಿಕೊಂಡಿತ್ತು. ಭಾರತೀಯ ಜನರು ರಾಷ್ಟ್ರಧ್ವಜವನ್ನು ಮನೆ ತಂದು ‘ಹರ್ ಘರ್ ತಿರಂಗ’ ಅಭಿಯಾನದ ಭಾಗವಾಗಲು ಉತ್ಸಾಹದಿಂದ ಪಾಲ್ಗೊಂಡಿದ್ದಾರೆ.
ಈ ಕಾರ್ಯಕ್ರಮವು ಎಲ್ಲೆಡೆ ಭಾರತೀಯರನ್ನು ತಮ್ಮ ಮನೆಗಳಲ್ಲಿ ರಾಷ್ಟ್ರಧ್ವಜವನ್ನು ಹಾರಿಸಲು ಪ್ರೇರೇಪಿಸುತ್ತದೆ. ಕಾರ್ಯಕ್ರಮದ ಉದ್ದೇಶವು ರಾಷ್ಟ್ರಧ್ವಜದೊಂದಿಗಿನ ಸಂಬಂಧವನ್ನು ಕೇವಲ ಔಪಚಾರಿಕ ಅಥವಾ ಸಾಂಸ್ಥಿಕವಾಗಿ ಇಟ್ಟುಕೊಳ್ಳುವುದಕ್ಕಿಂತ ಹೆಚ್ಚಾಗಿ ವೈಯಕ್ತಿಕವಾಗಿ ಸಂಭ್ರಮಿಸುವುದಾಗಿದೆ.
ಆಜಾದಿ ಕಾ ಅಮೃತ್ ಮಹೋತ್ಸವದ ಅಧಿಕೃತ ಆಚರಣೆಯು ಮಾರ್ಚ್ 12, 2021 ರಂದು ಪ್ರಾರಂಭವಾಯಿತು. ಇದು ನಮ್ಮ ಸ್ವಾತಂತ್ರ್ಯದ 75 ನೇ ವಾರ್ಷಿಕೋತ್ಸವಕ್ಕೆ 75 ವಾರಗಳ ಕೌಂಟ್‌ಡೌನ್ ಅನ್ನು ಪ್ರಾರಂಭಿಸಿತು.