Monday, December 15, 2025
Monday, December 15, 2025

ಹರ್ ಘರ್ ತಿರಂಗಾ ಅಭಿಯಾನಕ್ಕೆ ಪೂರಕ ಮಾಹಿತಿ ನಿಮಗಾಗಿ

Date:

ಭಾರತದ ಸ್ವಾತಂತ್ರ್ಯಕ್ಕೆ ಇದು ಅಮೃತಕಾಲ. 75 ವಸಂತಗಳ ಸಂಭ್ರಮದಲ್ಲಿರುವ ಭಾರತದ 20 ಕೋಟಿಗೂ ಅಧಿಕ ಮನೆ , ಕಟ್ಟಡಗಳ ಮೇಲೆ ರಾಷ್ಟ್ರಧ್ವಜವನ್ನು ಹಾರಿಸುವುದಕ್ಕೆ ಕೇಂದ್ರ “ ಹರ್ ‌ ಘರ್ ‌ ತಿರಂಗಾ ‘ ಅಭಿಯಾನ ಆರಂಭಿಸಿದೆ . 13 ರ ಬೆಳಗ್ಗೆ ನಿಮ್ಮ ಮನೆಯ ಮುಂದೆ ಹಾರಿಸಿದ ಧ್ವಜವನ್ನು 15 ರ ಸಂಜೆ ಇಳಿಸಿ . ನೀವೂ ಧ್ವಜ ಹಾರಿಸಿ ; ಹಾರಿಸುವಾಗ ಅನುಸರಿಸಬೇಕಾದ ಕೆಲವು ಅಂಶಗಳು ಹೀಗಿವೆ.

ಧ್ವಜ ಹೇಗಿರಬೇಕು?,
ತ್ರಿವರ್ಣ ಧ್ವಜವು ಆಯತಾಕಾರದಲ್ಲಿಯೇ ಇರಬೇಕು. ಅದರಲ್ಲೂ ಧ್ವಜದ ಗಾತ್ರ 3:2 (ಅಗಲ:ಉದ್ದ) ಅನುಪಾತದಲ್ಲಿಯೇ ಇರಬೇಕು. ಧ್ವಜವು ಕೈಯಲ್ಲಿ ನೇಯ್ದಿರುವ ಉಣ್ಣೆ, ಹತ್ತಿ ಅಥವಾ ರೇಷ್ಮೆ ಬಟ್ಟೆಯದ್ದೇ ಆಗಿರಬೇಕು ಎನ್ನುವ ನಿಯಮ ಈ ಹಿಂದೆ ಇತ್ತಾದರೂ ಇತ್ತೀಚೆಗೆ ಇದರಲ್ಲಿ ಬದಲಾವಣೆ ತರಲಾಗಿದೆ. ಪಾಲಿಸ್ಟರ್‌ ಧ್ವಜಕ್ಕೂ ಅನುಮತಿ ಸಿಕ್ಕಿದೆ. ಹಾಗೆಯೇ ಮಿಷನ್‌ಗಳಲ್ಲಿ ನೇಯ್ದಿರುವ ಬಟ್ಟೆಯ ಧ್ವಜಕ್ಕೂ ಅನುಮತಿ ನೀಡಲಾಗಿದೆ.

ಧ್ವಜಾರೋಹಣ ಹೇಗೆ?
ಧ್ವಜವನ್ನು ಅತ್ಯಂತ ಗೌರವಯುತವಾಗಿ ಹಾರಿಸಬೇಕು. ಧ್ವಜವನ್ನು ಸ್ತಂಭಕ್ಕೆ ಏರಿಸುವಾಗ ವೇಗವಾಗಿ ಏರಿಸಬೇಕು ಹಾಗೆಯೇ ಸ್ತಂಭದಿಂದ ಇಳಿಸುವಾಗ ನಿಧಾನವಾಗಿ ಇಳಿಸಬೇಕು.

ಧ್ವಜ ಮಡಚುವುದು ಹೇಗೆ?
ಧ್ವಜವನ್ನು ಸ್ವತ್ಛ, ಸಮತಟ್ಟಾದ ಸ್ಥಳದಲ್ಲಿ ಇಟ್ಟುಕೊಳ್ಳಿ. ಮೊದಲಿಗೆ ಕೇಸರಿ ಮತ್ತು ಹಸುರು ಬಣ್ಣದ ಬಟ್ಟೆಯನ್ನು ಬಿಳಿ ಬಣ್ಣದ ಬಟ್ಟೆಯ ಕೆಳಗೆ ಮಡಚಿ. ಆಯತಾ ಕಾರಾದಲ್ಲಿರುವ ಬಿಳಿ ಬಣ್ಣದ ಬಟ್ಟೆಯಲ್ಲಿ ಕೇವಲ ಅಶೋಕ ಚಕ್ರ ಕಾಣುವಂತೆ ಇನ್ನೆರೆಡು ತುದಿಗಳನ್ನು ಮಡಚಿ.

ಹರಿದರೆ ಏನು ಮಾಡಬೇಕು?
ಒಂದು ವೇಳೆ ಧ್ವಜವು ಹರಿದರೆ ಅಥವಾ ಬಳಸಲಾರದ ಸ್ಥಿತಿಗೆ ಬಂದರೆ, ಅದನ್ನು ಖಾಸಗಿ ಯಾಗಿ ಗೌರವಯುತವಾಗಿ ಸುಟ್ಟು ಹಾಕಬೇಕು. ಹಾಗೆಯೇ ವಿಶೇಷ ದಿನಗಳಂದು(ಸ್ವಾತಂತ್ರ್ಯ ದಿನ, ಗಣರಾಜ್ಯೋತ್ಸವ ದಿನ) ಪೇಪರ್‌ ಧ್ವಜಗಳನ್ನು ಬಳಸಬಹುದು. ಅವುಗಳನ್ನೂ ಕೂಡ ಅಷ್ಟೇ ಗೌರವಯುತವಾಗಿ ಖಾಸಗಿಯಾಗಿ ಸುಟ್ಟು ಹಾಕಬೇಕು.

ವಾಹನದ ಮೇಲೆ ಬಳಸುವುದಕ್ಕೂ ಮುನ್ನ
ತ್ರಿವರ್ಣ ಧ್ವಜವನ್ನು ವಾಹನದ ಮೇಲೆ ಬಳಸುವುದಕ್ಕೆ ಎಲ್ಲರಿಗೂ ಅನುಮತಿಯಿಲ್ಲ. ರಾಷ್ಟ್ರಪತಿ, ಉಪ ರಾಷ್ಟ್ರಪತಿ, ರಾಜ್ಯಪಾಲರುಗಳು, ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಹಾಗೂ ನ್ಯಾಯಮೂರ್ತಿಗಳು, ಹೈಕೋರ್ಟ್‌ಗಳ ಮುಖ್ಯ ನ್ಯಾಯಮೂರ್ತಿ ಹಾಗೂ ನ್ಯಾಯ ಮೂರ್ತಿಗಳು, ಕೇಂದ್ರ ಸಚಿವರು ಮತ್ತು ಸಹಾ ಯಕ ಸಚಿವರು, ಭಾರತದ ಕಾರ್ಯಾಚರಣೆಗಳ ಮುಖ್ಯಸ್ಥರು, ಕೇಂದ್ರ ಮಟ್ಟದ ಉಪ ಮಂತ್ರಿಗಳು, ಮುಖ್ಯಮಂತ್ರಿಗಳು, ಲೋಕ ಸಭೆಯ ಸ್ಪೀಕರ್‌, ರಾಜ್ಯಸಭೆಯ ಉಪಾಧ್ಯಕ್ಷರು, ಲೋಕಸಭೆಯ ಉಪ ಸಭಾಧ್ಯಕ್ಷರು, ರಾಜ್ಯ ವಿಧಾನ ಪರಿಷತ್‌ಗಳ ಅಧ್ಯಕ್ಷರು, ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ವಿಧಾನಸಭೆಯ ಅಧ್ಯಕ್ಷರು, ಉಪಾಧ್ಯಕ್ಷರಿಗೆ ಮಾತ್ರವೇ ತಮ್ಮ ಕಾರಿನ ಮುಂಭಾಗದಲ್ಲಿ ಧ್ವಜ ಇರಿಸಿಕೊಳ್ಳುವುದಕ್ಕೆ ಅವಕಾಶವಿದೆ.

ಎಲ್ಲರೂ ಧ್ವಜ ಹಾರಿಸಬಹುದು
ಹಿಂದೆ ಪ್ರಮುಖ ಹುದ್ದೆಯಲ್ಲಿದ್ದವರಿಗೆ ಮಾತ್ರ ರಾಷ್ಟ್ರೀಯ ಧ್ವಜ ಹಾರಿಸಲು ಅವಕಾಶ ಇತ್ತು. ಹರ್‌ಘರ್‌ ತಿರಂಗಾ ಅಭಿಯಾನಕ್ಕಾಗಿ ಧ್ವಜಸಂಹಿತೆಗೆ ತಿದ್ದುಪಡಿ ತರಲಾಗಿದ್ದು, ಎಲ್ಲರೂ ತಮ್ಮ ತಮ್ಮ ಮನೆಗಳಲ್ಲೂ ಹಾರಿಸಬಹುದು.

ಭಾರತದ ತ್ರಿವರ್ಣದ ಧ್ವಜಾರೋಹಣ ಮಾಡುವಾಗ ಯಾವಾಗಲೂ ಕೇಸರಿ ಬಣ್ಣ ಮೇಲೆ ಬರುವಂತೆ, ಹಸುರು ಬಣ್ಣ ಕೆಳಗೆ ಬರುವಂತೆ ನೋಡಿಕೊಳ್ಳಿ
ಯಾವುದೇ ಕಾರಣಕ್ಕೂ ಹರಿದಿರುವ ಹಾಗೂ ಅಶುಭ್ರ ಧ್ವಜ ಹಾರಿಸುವಂತಿಲ್ಲ.

ಯಾವುದೇ ಕಾರಣಕ್ಕೆ ತ್ರಿವರ್ಣ ಧ್ವಜಕ್ಕಿಂತ ಎತ್ತರದಲ್ಲಿ ಅಥವಾ ಅದಕ್ಕೆ ಸರಿ ಸಮನಾಗಿ ಬೇರೆ ಇನ್ನು ಯಾವುದೇ ಧ್ವಜವನ್ನು ಹಾರಿಸುವುದು ನಿಷಿದ್ಧ.
ಧ್ವಜವನ್ನು ಆಲಂಕಾರಿಕ ವಸ್ತುವಾಗಿ ಯಾವುದೇ ಕಾರಣಕ್ಕೆ ಬಳಸಕೂಡದು.
ತೊಡುವ ಬಟ್ಟೆಯಲ್ಲಿ ಸೊಂಟಕ್ಕಿಂತ ಕೆಳಭಾಗದಲ್ಲಿ ಧ್ವಜವಿರುವಂತಿಲ್ಲ.
ಒಂದೇ ದಾರದಲ್ಲಿ ಎರಡು ಧ್ವಜ ಹಾರಿಸುವಂತಿಲ್ಲ. ನೆಲಕ್ಕೆ ತಾಕಿಸುವಂತಿಲ್ಲ.
ಯಾವುದೇ ಕಾರಣಕ್ಕೂ ತ್ರಿವರ್ಣ ಧ್ವಜವನ್ನು ಬಂಡಲ್‌ ರೀತಿ ಬಳಸುವಂತಿಲ್ಲ.

ಶ್ವೇತ ವರ್ಣದ ಮಧ್ಯ 24 ಗೆರೆಗಳ ನೀಲಿ ಬಣ್ಣದ ಅಶೋಕ ಚಕ್ರವಿರಬೇಕು.
ಧ್ವಜದ ಮೇಲೆ ಬರಹ ಇರಬಾರದು; ಧ್ವಜವನ್ನು ಜಾಹೀರಾತಿಗೆ ಬಳಸಬೇಡಿ
ಧ್ವಜವನ್ನು ಹಾರಿಸುವ ಕಂಬ/ಸ್ತಂಭದ ಮೇಲೆ ಜಾಹೀರಾತು ಇರಬಾರದು.
ಅಸುರಕ್ಷಿತ ಅಥವಾ ಧ್ವಜಕ್ಕೆ ಹಾನಿಯುಂಟಾಗಬಹುದಾದ ಸ್ಥಳದಲ್ಲಿ ಧ್ವಜಾರೋಹಣ ಮಾಡುವಂತಿಲ್ಲ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Alvas Cultural Fest ಡಿಸೆಂಬರ್ 15. ಶಿವಮೊಗ್ಗದಲ್ಲಿ ಆಳ್ವಾಸ್ ಸಾಂಸ್ಕೃತಿಕ ವೈಭವ ಅನಾವರಣ.

Alvas Cultural Fest ಆಳ್ವಾಸ್ ನುಡಿಸಿರಿ ವಿರಾಸತ್ ಜಿಲ್ಲಾ ಘಟಕ, ಕರ್ನಾಟಕ...

Shimoga News ದೇಸಿವಸ್ತುಗಳ ಮಾರಾಟ ಮಳಿಗೆಯಲ್ಲಿ ಸೋಲಾರ್ ಬುಕ್ ಗೆ ಚಾಲನೆ.

Shimoga News ನಗರದ ಗೋಪಾಳ ರಸ್ತೆ ಆಲ್ಕೊಳ ಸಮೀಪದ ಬಂಟರ ಭವನದಲ್ಲಿ...

D S Arun ಗ್ರಾಮ ಪಂಚಾಯತ್ ನಿರ್ವಹಣೆಯಗ್ರಂಥಪಾಲಕರಿಗೆ ಕನಿಷ್ಠ ವೇತನ ಪಾವತಿಗೆಶಾಸಕ ಡಿ.ಎಸ್.ಅರುಣ್ ಒತ್ತಾಯ.

D S Arun ಗ್ರಾಮ ಪಂಚಾಯಿತಿಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಂಥಪಾಲಕರಿಗೆ ಸರ್ಕಾರ...

Shimoga News ಸೂಗೂರು ಗ್ರಾಮ ಪಂಚಾಯತಿಯ ಸಾಮಾಜಿಕ‌ನ್ಯಾಯ ಸಮಿತಿ ಅಧ್ಯಕ್ಷರಾಗಿ ವೀರೇಶ್ ಕ್ಯಾತಿನಕೊಪ್ಪಅಧಿಕಾರ ಸ್ವೀಕಾರ.

Shimoga News ಶಿವಮೊಗ್ಗ ತಾಲೂಕಿನ ಸೂಗುರು ಗ್ರಾಮ ಪಂಚಾಯತಿಯ ಸಾಮಾಜಿಕ ನ್ಯಾಯ...