ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ (ಎಂಜಿಎನ್‌ಆರ್‌ಇಜಿಎಸ್)ಗೆ ಹೆಚ್ಚುವರಿಯಾಗಿ 15 ಸಾವಿರ ಕೋಟಿ ರೂ. ನೀಡಲು ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ.
ಕೇಂದ್ರ ಗ್ರಾಮೀಣಾಭಿವೃದ್ಧಿ ಖಾತೆಯಿಂದ ಹೆಚ್ಚುವರಿಯಾಗಿ ಶೇ.20 ಮೊತ್ತ ನೀಡಬೇಕು ಎಂದು ಕೋರಿಕೆ ಸಲ್ಲಿಕೆಯಾಗಿದ್ದು, ಅದಕ್ಕೆ ಸಮ್ಮತಿ ನೀಡುವ ಸಾಧ್ಯತೆಗಳು ಅಧಿಕವಾಗಿವೆ.
ಕರ್ನಾಟಕ, ಉತ್ತರ ಪ್ರದೇಶ, ಬಿಹಾರ, ಮಧ್ಯಪ್ರದೇಶ ಸೇರಿದಂತೆ ಹಲವು ಸರ್ಕಾರಗಳಿಂದಲೂ ಕೂಡ ಹೆಚ್ಚುವರಿ ಮೊತ್ತ ನೀಡುವ ಬಗ್ಗೆ ಒತ್ತಡಗಳು ಹೆಚ್ಚುತ್ತಿವೆ.
ರಾಜ್ಯಗಳು 5,517.87 ಕೋಟಿ ರೂ. ಮೊತ್ತವನ್ನು ಪಾವತಿ ಮಾಡಲು ರಾಜ್ಯಗಳು ಬಾಕಿ ಉಳಿಸಿಕೊಂಡಿವೆ. ಕರ್ನಾಟಕ 462.78 ಕೋಟಿ ರೂ., ಪಶ್ಚಿಮ ಬಂಗಾಳ 2,636.71 ಕೋಟಿ ರೂ., ಬಿಹಾರ 1,160.77 ಕೋಟಿ ರೂ., ಉತ್ತರ ಪ್ರದೇಶ 661.42 ಕೋಟಿ ರೂ. ಪಾವತಿ ಮಾಡಲು ಇದೆ ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿವೆ.
ಪ್ರಸಕ್ತ ವರ್ಷದ ಮುಂಗಡ ಪತ್ರದಲ್ಲಿ ಎಂಜಿಎನ್‌ಆರ್‌ಇಜಿಎಸ್‌ಗೆ 73 ಸಾವಿರ ಕೋಟಿ ರೂ. ಮೀಸಲಾಗಿ ಇರಿಸಲಾಗಿತ್ತು. ನಂತರ ಈ ಮೊತ್ತವನ್ನು 98 ಸಾವಿರ ಕೋಟಿ ರೂ.ಗಳಿಗೆ ಹೆಚ್ಚಿಸಲಾಗಿತ್ತು. ಈ ಪೈಕಿ 37,500 ಕೋಟಿ ರೂ. ಮೊತ್ತವನ್ನು ರಾಜ್ಯಗಳಿಗೆ ನೀಡಲಾಗಿದೆ.
ಉದ್ಯೋಗ ಖಾತರಿ ಯೋಜನೆಗೆ ₹15000 ಹೆಚ್ಚುವರಿ ನೀಡಲು ಚಿಂತನೆ
Date:
