Saturday, December 6, 2025
Saturday, December 6, 2025

ಅನುಕಂಪಾಧಾರಿತ ಉದ್ಯೋಗ ಪಡೆಯುವುದು ಹಕ್ಕಲ್ಲ- ಸುಪ್ರೀಂಕೋರ್ಟ್

Date:

ಉದ್ಯೋಗಿ ಮರಣ ಹೊಂದಿದ ನಂತರ ಅವರ ಕುಟುಂಬದ ಓರ್ವ ಸದಸ್ಯನಿಗೆ ಅನುಕಂಪದ ಆಧಾರದಲ್ಲಿ ನೀಡುವ ಉದ್ಯೋಗ ಸ್ಥಾಪಿತವಾದ ಹಕ್ಕಲ್ಲ. ಈ ರೀತಿಯ ಉದ್ಯೋಗ ಪಡೆದವರಿಂದ ಕರ್ತವ್ಯ ಲೋಪಗಳಾದರೇ, ಅವರಿಗೆ ನೀಡಲಾದ ಹುದ್ದೆಯ ಅರ್ಹತೆಯನ್ನು ಹೊಂದುವಲ್ಲಿ ವಿಫಲವಾದರೇ, ಅಂತಹವರನ್ನು ಕೆಲಸದಿಂದ ತೆಗೆಯ ಬಹುದು ಎಂದು ಸುಪ್ರೀಂ ಕೋರ್ಟ ಅಭಿಪ್ರಾಯ ಪಟ್ಟಿದೆ.

ಈ ಸಂಬಂಧ ಪ್ರಕರಣವೊಂದರ ವಿಚಾರಣೆ ನಡೆಸಿದಂತ ನ್ಯಾಯಮೂರ್ತಿಗಳಾದ ಡಿವೈ ಚಂದ್ರಚೂಡ್ ಮತ್ತು ಎ.ಎಸ್ ಬೊಪಣ್ಣ ಅವರನ್ನು ಒಳಗೊಂಡಂತ ನ್ಯಾಯಪೀಠವು, ಅನುಕಂಪದ ಆಧಾರದ ಉದ್ಯೋಗವು ಸಾಮಾನ್ಯ ನೇಮಕಾತಿಯಲ್ಲಿ ಇರುವ ವಿನಾಯ್ತಿಯಷ್ಟೇ. ದುಡಿಯುವ ವ್ಯಕ್ತಿಯನ್ನು ಕಳೆದುಕೊಂಡ ಸಂತ್ರಸ್ತ ಕುಟುಂಬಕ್ಕೆ ಆರ್ಥಿಕ ಭದ್ರತೆ ಕಲ್ಪಿಸಲು ಇರುವ ಮಾನವೀಯ ನೆರವಾಗಿದೆ. ಈ ರೀತಿಯ ಸಹಾನುಭೂತಿಯ ಉದ್ಯೋಗ ಪಡೆದವರು, ಹುದ್ದೆ ಆಪೇಕ್ಷಿಸುವಂತಹ ಅರ್ಹತೆಗಳನ್ನು ಹೊಂದಿರಬೇಕು. ಕರ್ತವ್ಯಪರರಾಗಬೇಕು ಎಂದು ಹೇಳಿದೆ.

ಮೊಹಮ್ಮದ್ ರೆಹಮಾನ್ ಖಾನ್ ಅವರ ತಂದೆಯ ನಿಧನದ ನಂತರ, ಉತ್ತರ ಪ್ರದೇಶದ ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆಯಲ್ಲಿ ಬೆರಳಚ್ಚುಗಾರರ ಉದ್ಯೋಗವನ್ನು 2015ರಲ್ಲಿ ನೀಡಲಾಗಿತ್ತು. ಈ ಹುದ್ದೆಗೆ ಆಪೇಕ್ಷಿತವಾಗಿದ್ದ ಪ್ರತಿ ನಿಮಿಷಕ್ಕೆ 25 ಪದಗಳ ಟೈಪಿಂಗ್ ವೇಗವನ್ನು ಸಾಧಿಸುವಂತೆ ಅವರಿಗೆ ಇಲಾಖೆ ಕಾಲಾವಕಾಶ ನೀಡಿತ್ತು.

ಆದರೆ, ಮೊಹಮ್ಮದ್ ರೆಹಮಾನ್ ಖಾನ್, ನಿಗದಿತ ಸಮಯದಲ್ಲಿ ಈ ಸಾಮರ್ಥ್ಯ ಹೊಂದಲು ವಿಫಲವಾಗಿದ್ದರು. ಹೀಗಿದ್ದರೂ ಹೆಚ್ಚುವರಿ ಕಾಲಾವಕಾಶ ನೀಡಿದ್ದರೂ, ಅವರು ಕೌಶಲ್ಯ ಸಿದ್ದಿಸಲಿಲ್ಲ. ಹೀಗಾಗಿ ಪೂರ್ವ ಷರತ್ತಿನ ಅನ್ವಯದ ಕಾರಣ, ಕೆಲಸದಿಂದ ತೆಗೆದು ಹಾಕಲಾಗಿತ್ತು. ಇದನ್ನು ಪ್ರಶ್ನಿಸಿ ಅಲಹಾಬಾದ್ ಹೈಕೋರ್ಟ್ ಗೆ ಮೊರೆ ಹೋಗಿದ್ದರು.

ಅಲ್ಲಿ 4ನೇ ದರ್ಜೆಯ ಉದ್ಯೋಗ ನೀಡುವಂತೆ ಆದೇಶಿಸಲಾಗಿತ್ತು. ಇದರ ವಿರುದ್ಧ ಉತ್ತರ ಪ್ರದೇಶ ಸರ್ಕಾರ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು.
ಈ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಈ ಅಭಿಪ್ರಾಯ ವ್ಯಕ್ತ ಪಡಿಸಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Indian Medical Association 30 ವರ್ಷ ದಾಟಿದ ಮಹಿಳೆಯರು ಪ್ಯಾಪ್ಸ್ ಮಿಯರ್ ಟೆಸ್ಟ್ ಅನ್ನು 3 ವರ್ಷಕ್ಕೆ ಒಂದು ಬಾರಿ‌ ಮಾಡಿಸಬೇಕು- ಡಾ.ರಕ್ಷಾರಾವ್

Indian Medical Association ಮಹಿಳೆಯರು ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಜಾಗ್ರತೆ ವಹಿಸಬೇಕು...

MESCOM ಡಿಸೆಂಬರ್ ‌9. ಕುಂಸಿ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಜನ ಸಂಪರ್ಕ ಸಭೆ

MESCOM ಕುಂಸಿ ಮೆಸ್ಕಾಂ ಉಪವಿಭಾಗದಲ್ಲಿ ಡಿ. 09 ರಂದು ಬೆಳಗ್ಗೆ 11.00...