ಕರ್ನಾಟಕ, ಕೇರಳ, ಮಹಾರಾಷ್ಟ್ರ ಕರಾವಳಿ ಮತ್ತೆ ಅಲರ್ಟ್ ಮಾಡಲಾಗಿದ್ದು, ಮುಂದಿನ 48 ಗಂಟೆಗಳಲ್ಲಿ ಬಿರುಗಾಳಿ ಮಳೆ ಸುರಿಯೋ ಸಾಧ್ಯತೆಗಳಿವೆ. ಭಾರತೀಯ ಹವಾಮಾನ ಇಲಾಖೆ ಭಾರೀ ಮಳೆಯ ಮುನ್ಸೂಚನೆ ನೀಡಿದೆ.
ಈಗಾಗಲೇ ಮುಂಬೈ ತೀರಕ್ಕೆ ಬಿರುಗಾಳಿ ಮಳೆ ಅಪ್ಪಳಿಸುತ್ತಿದೆ. ಕಳೆದ ರಾತ್ರಿಯಿಂದೀಚೆಗೆ ಮುಂಬೈನಲ್ಲಿ 90 ಮಿಲಿ ಮೀಟರ್ ಮಳೆಯಾಗಿದೆ. ಮುಂಬೈ ತೀರಕ್ಕೆ ಭಾರೀ ಗಾತ್ರದ ಅಲೆಗಳು ಅಪ್ಪಳಿಸುತ್ತಿದೆ.
ಮುಂಬೈ, ನವ ಮುಂಬೈ, ಥಾಣೆ, ಪಲ್ಗರ್ನಲ್ಲಿ ಭಾರೀ ಮಳೆ ಸಾಧ್ಯತೆಗಳಿವೆ. ಮುಂಬೈನ ತಗ್ಗು ಪ್ರದೇಶಗಳು, ಅಂಡರ್ಪಾಸ್ಗಳೆಲ್ಲಾ ಜಲಾವೃತವಾಗಿದೆ.
ಮಂಗಳೂರು, ಕಾರವಾರ, ಉಡುಪಿಗಳಲ್ಲಿ ಅಲರ್ಟ್ ಘೋಷಣೆ ಮಾಡಲಾಗಿದೆ. ಗಂಟೆಗೆ 45-60 ಕಿಲೋ ಮೀಟರ್ ವೇಗದಲ್ಲಿ ಗಾಳಿ ಅಪ್ಪಳಿಸುವ ಮುನ್ಸೂಚನೆ ನೀಡಿದೆ. ಅಧಿಕಾರಿಗಳು ಸಮುದ್ರ ತೀರದ ನಿವಾಸಿಗಳಿಗೆ ಎಚ್ಚರಿಕೆ ನೀಡಿದ್ದಾರೆ.