ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಕಾರ್ಯಕ್ರಮಗಳ ನಿಯಮಗಳಿಗೆ ಸರ್ಕಾರ ತಿದ್ದುಪಡಿ ಮಾಡಿ ಅಧಿಸೂಚನೆ ಹೊರಡಿಸಿದೆ.
ಕಾರ್ಮಿಕರು ಕೆಲಸ ಮಾಡುವ ಸ್ಥಳದಲ್ಲಿ ಸಂಚಾರಿ ವೈದ್ಯಕೀಯ ಘಟಕ ಸ್ಥಾಪನೆ, ಅವಶ್ಯವಿರುವಾಗ ಪೌಷ್ಟಿಕ ಆಹಾರ ಕಿಟ್ ವಿತರಿಸಲಾಗುವುದು.
ಹೆರಿಗೆ ಸೌಲಭ್ಯ ಸಹಾಯಧನವನ್ನು 50,000 ರೂ.ಗೆ ಹೆಚ್ಚಳ ಮಾಡಲಾಗಿದೆ.
ಅಂತಿಮ ಸಂಸ್ಕಾರ ವೆಚ್ಚ ಸೌಲಭ್ಯ ಸಹಾಯಧನವನ್ನು 50 ಸಾವಿರ ರೂ.ನಿಂದ 71,000 ರೂ.ಗೆ ಹೆಚ್ಚಳ ಮಾಡಲಾಗಿದೆ.
ಕೋವಿಡ್ ನಿಂದ ಫಲಾನುಭವಿ ಮೃತಪಟ್ಟಲ್ಲಿ ಅವಲಂಬಿತರಿಗೆ 2 ಲಕ್ಷ ರೂ. ಸಹಾಯಧನ ನೀಡಲಾಗುವುದು.
ಸಾರಿಗೆ ಸೌಲಭ್ಯದಡಿ ಫಲಾನುಭವಿಗಳಿಗೆ ರಾಜ್ಯಾದ್ಯಂತ ಕೆಎಸ್‌ಆರ್ಟಿಸಿ ಬಸ್ ಪಾಸ್ ನೀಡಲಾಗುವುದು.
ಗೃಹಭಾಗ್ಯ ಸೌಲಭ್ಯದಡಿ 21 ರಿಂದ 50 ವರ್ಷದ ನೋಂದಾಯಿತ ಫಲಾನುಭವಿಗಳಿಗೆ ಮನೆ ನಿರ್ಮಿಸಲು 10 ಕಂತುಗಳಲ್ಲಿ ಸಾಲ ನೀಡಲು ನಿಯಮ ಸರಳಿಕರಣ ಮಾಡಲಾಗಿದೆ.
ಪಿಂಚಣಿ ಸೌಲಭ್ಯವನ್ನು 2000 ರೂ.ನಿಂದ 3000 ರೂ.ಗೆ ಏರಿಕೆ ಮಾಡಲಾಗಿದೆ.
ಫಲಾನುಭವಿಗಳ ಮಕ್ಕಳು ಸ್ಪರ್ಧಾತ್ಮಕ ಪರೀಕ್ಷೆ ಬರೆಯಲು ತರಬೇತಿ, ಕಲಿಕಾ ಕಿಟ್, ಕಂಪ್ಯೂಟರ್, ಲ್ಯಾಪ್ಟಾಪ್ ಲ್ಯಾಬ್ ವಿತರಿಸಲಾಗುವುದು.
ವೈದ್ಯಕೀಯ ಸೌಲಭ್ಯ ಯೋಜನೆಯಡಿ ಸಹಾಯಧನವನ್ನು 10 ಸಾವಿರ ರೂ.ನಿಂದ 20 ಸಾವಿರ ರೂ.ಗೆ ಹೆಚ್ಚಳ ಮಾಡಲಾಗಿದೆ.
ಫಲಾನುಭವಿಗಳು ಕೆಲಸದ ಸ್ಥಳದಲ್ಲಿ ಅಪಘಾತದಿಂದ ಮೃತಪಟ್ಟರೆ ಅವಲಂಬಿತರಿಗೆ ಪರಿಹಾರದ ಮೊತ್ತವನ್ನು 2 ಲಕ್ಷದಿಂದ 5 ಲಕ್ಷ ರೂ.ಗೆ ಏರಿಕೆ ಮಾಡಲಾಗಿದೆ.
ಮದುವೆ ಸಹಾಯಧನ ಮೊತ್ತವನ್ನು 50 ರಿಂದ 60,000 ರೂ.ಗೆ ಹೆಚ್ಚಳ ಮಾಡಲಾಗಿದೆ.