Friday, September 27, 2024
Friday, September 27, 2024

ಹಿರೋಷಿಮಾ: ಮಾನವನ ಅತೀಬುದ್ಧಿಯ ಮೂರ್ಖತನ

Date:

ಆಗಸ್ಟ್ 6ರಂದು 75 ವರ್ಷಗಳ ಹಿಂದೆ ಜಪಾನ್ 1945 ರಲ್ಲಿ ವಿಶ್ವದಲ್ಲೇ ಅತ್ಯಂತ ಕರಾಳ ಘಟನೆಗೆ ಸಾಕ್ಷಿಯಾಗಿತ್ತು.
ಈ ದಿನ, ಜಪಾನಿನ ನಗರಗಳಾದ ಹಿರೋಷಿಮಾ ಮತ್ತು ನಾಗಾಸಾಕಿಯ ಮೇಲೆ ಅಮೆರಿಕಾ ಪರಮಾಣು ಬಾಂಬ್‌ಗಳನ್ನು ಬೀಳಿಸಿತು. ಈ ವಿನಾಶದ ಬಳಿಕ ಜಪಾನ್‌ ಶರಣಾಗತಿಗೆ ಕಾರಣವಾಯಿತು.

ಲಭ್ಯ ಮಾಹಿತಿಯ ಪ್ರಕಾರ, 1945ರ ಆಗಸ್ಟ್​ 6ರಂದು ಹಿರೋಶಿಮಾ ಮೇಲೆ ಅಮೆರಿಕ ಅಣುಬಾಂಬ್ ದಾಳಿ ನಡೆಸಿತ್ತು. ಮಾರ್ಪಡಿಸಿದ ಬಿ -29 ಯುರೋನಿಯಂ ಗನ್ ಮಾದರಿಯ ಬಾಂಬ್ ಅನ್ನು ಲಿಟಲ್ ಬಾಯ್ ಎಂಬ ಹೆಸರಿನಿಂದ ಹಿರೋಷಿಮಾದಲ್ಲಿ ಬ್ರಿಟಿಷರ ಒಪ್ಪಿಗೆಯೊಂದಿಗೆ ಬೀಳಿಸಿತು. ಇದರಿಂದಾಗಿ ಹಿರೋಶಿಮಾದಲ್ಲಿ 1.40 ಲಕ್ಷ ಜನರು ಸಾವನ್ನಪ್ಪಿದ್ದರು.

ಅಂದರೆ ಹಿರೋಶಿಮಾದ ಜನಸಂಖ್ಯೆಯ ಶೇ. 40ರಷ್ಟು ಜನರು ಈ ದಾಳಿಯನ್ನು ಪ್ರಾಣ ಕಳೆದುಕೊಂಡರು.
ಎರಡನೇ ವಿಶ್ವ ಮಹಾಯುದ್ಧದ ವೇಳೆ ಅಮೆರಿಕದವರು ಜಪಾನ್ ದೇಶದ ಹಿರೋಶಿಮಾ ಮತ್ತು ನಾಗಸಾಕಿ ನಗರಗಳ ಮೇಲೆ ಅಣುಬಾಂಬ್ ದಾಳಿ ಮಾಡಿದ್ದು ಮಾನವ ಇತಿಹಾಸದ ಘೋರ ಕ್ಷಣಗಳಲ್ಲಿ ಒಂದು.

ಹಿರೋಶಿಮಾದಲ್ಲಿ ಮೊದಲು ದಾಳಿಯಾದರೆ, ನಾಗಸಾಕಿಯಲ್ಲಿ ಎರಡನೇ ದಾಳಿಯಾಗಿತ್ತು. ಹಿರೋಶಿಮಾದ ಅಣುಬಾಂಬ್ ದಾಳಿಯಾಗಿ ಇವತ್ತಿಗೆ ಸರಿಯಾಗಿ 75 ವರ್ಷ. 1945, ಆಗಸ್ಟ್ 6ರಂದು ಹಿರೋಶಿಮಾ ಮೇಲೆ ಅಣು ಬಾಂಬ್ ಬಿದ್ದಿತ್ತು. ನಾಗಸಾಕಿಯ ಮೇಲೆ ಆಗಸ್ಟ್ 9ರಂದು ಅಣುಬಾಂಬ್ ದಾಳಿ ನಡೆಸಲಾಗಿತ್ತು.

ಹಿರೋಶಿಮಾ ನಗರದಲ್ಲಿ ಆಗ ಇದ್ದ ಜನಸಂಖ್ಯೆ 3.5 ಲಕ್ಷ. ಬಾಂಬ್ ಬಿದ್ದ ಸ್ಥಳದಿಂದ 500 ಮೀಟರ್ ಸುತ್ತಮುತ್ತಲಿದ್ದ ಪ್ರತಿಯೊಬ್ಬ ವವ್ಯಕ್ತಿಯೂ ಸ್ಥಳದಲ್ಲೇ ಸಾವನ್ನಪ್ಪಿದ್ದರು.

ಅಣು ಬಾಂಬ್​ನಿಂದ ಉದ್ಭವಿಸಿದ ವಿಕಿರಣಗಳಿಂದಾಗಿ ಕ್ರಮೇಣ ಸಾವಿನ ಸಂಖ್ಯೆ ಹೆಚ್ಚಾಗುತ್ತಾ ಹೋಯಿತು. ನಾಲ್ಕು ತಿಂಗಳ ಅವಧಿಯಲ್ಲಿ ಸುಮಾರು 1.4 ಲಕ್ಷ ಜನರು ಬಲಿಯಾಗಿ ಹೋಗಿದ್ದರು.

ಇದರರ್ಥ ಹಿರೋಶಿಮಾ ಜನಸಂಖ್ಯೆಯ ಶೇ. 40 ಭಾಗ ಅಸುನೀಗಿದ್ದರು. ಈಗಲೂ ಅಲ್ಲಿ ವಿಕಿರಣದ ಪರಿಣಾಮವನ್ನು ಜನರು ಅನುಭವಿಸುತ್ತಲೇ ಇದ್ದಾರೆ. ಈಗ ಹುಟ್ಟುವ ಮಕ್ಕಳಲ್ಲೂ ಸಹ ಪರಿಣಾಮ ಕಂಡುಬರುತ್ತಿದೆ. ಮಕ್ಕಳು ಬುದ್ಧಿಮಾಂದ್ಯ , ವಿಕಲ ಚೇತನರಾಗಿ ಹುಟ್ಟುತ್ತಿದ್ದಾರೆ.

ಈಗ ಹಿರೋಶಿಮಾಗೆ ಹೋದರೆ ಅಲ್ಲಿ ಓರಿಗಮಿ ಪೇಪರ್​ನಿಂದ ಮಾಡಲಾದ ಕ್ರೇನ್​ಗಳು ಎಲ್ಲೆಡೆಯೂ ಕಾಣಸಿಗುತ್ತಯಂತೆ. ಈ ಕ್ರೇನ್​ಗಳಿಗೂ ಅಣುಬಾಂಬ್ ದಾಳಿಗೂ ಸಂಬಂಧ ಇದೆ.

ಜಪಾನ್ ದೇಶದ ಒಂದು ಜಾನಪದ ಕಥೆಯ ಪ್ರಕಾರ, ಒಂದು ಸಾವಿರ ಪೇಪರ್ ಕ್ರೇನ್​ಗಳನ್ನ ಮಾಡಿದರೆ ಅವರ ಒಂದು ಬಯಕೆ ಈಡೇರುತ್ತದಂತೆ. 12 ವರ್ಷದ ಸಡಾಕೋ ಸಸಾಕಿ ಎಂಬ ಬಾಲಕಿ ಈ ಪೇಪರ್ ಕ್ರೇನ್​ಗಳನ್ನ ತಯಾರಿಸಿದ್ದಳು. ಅಣುಬಾಂಬ್ ದಾಳಿಯಾದಾಗ ಈಕೆಗೆ 2 ವರ್ಷ. 10 ವರ್ಷಗಳ ಬಳಿಕ ವಿಕಿರಣದ ಪರಿಣಾಮವಾಗಿ ಈಕೆಗೆ ಲ್ಯೂಕೆಮಿಯಾ ಕಾಯಿಲೆ ತೋರಿತು. ಆ ಬಳಿಕ ಆಕೆ ರೋಗದಿಂದ ಮುಕ್ತವಾಗಲು ಜಾನಪದ ಕಥೆಯಂತೆ 1,000 ಓರಿಗಮಿ ಪೇಪರ್ ಕ್ರೇನ್​ಗಳನ್ನ ತಯಾರಿಸಿದ್ದಳು. ಆದರೆ, ದುರಂತವೆಂದರೆ ಆಕೆ ಬದುಕುಳಿಯಲಿಲ್ಲ.

ಲ್ಯೂಕೆಮಿಯಾ ವಕ್ಕರಿಸಿಕೊಂಡ ಎರಡೇ ತಿಂಗಳಲ್ಲಿ ಆಕೆ ಬಲಿಯಾಗಿದ್ದಳು. ಆಕೆಯ ಹೋರಾಟದ ಮನೋಭಾವಕ್ಕೆ ಸಂಕೇತವಾಗಿ ಜಪಾನೀಯರು ಈಗಲೂ ಪ್ರತಿ ವರ್ಷ ಪೇಪರ್ ಕ್ರೇನ್​​ಗಳನ್ನ ತಯಾರಿಸುತ್ತಾರೆ.

2016ರಲ್ಲಿ ಆಗಿನ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರು ಹಿರೋಶಿಮಾಗೆ ಭೇಟಿ ನೀಡಿದಾಗ ನಾಲ್ಕು ಪೇಪರ್ ಕ್ರೇನ್​ಗಳನ್ನ ತೆಗೆದುಕೊಂಡು ಹೋಗದ್ದರು. ಈಗಲೂ ಒಬಾಮ ಅವರ ಕ್ರೇನ್​ಗಳನ್ನ ಹಿರೋಶಿಮಾದ ಮ್ಯೂಸಿಯಂನಲ್ಲಿ ಸ್ಮರಣಿಕೆಯಾಗಿ ಇಡಲಾಗಿದೆ

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

National Open Athletic Championship ಬಿಹಾರದ ಓಪನ್ ಅಥ್ಲೇಟಿಕ್‌ನಲ್ಲಿ ಶಿವಮೊಗ್ಗ ಜಿಲ್ಲೆಯ ಕ್ರೀಡಾಪಟು

National Open Athletic Championship ಬಿಹಾರದ ಪಾಟ್ನದಲ್ಲಿ ಸೆ. 28 ರಿಂದ...

Bhadravati Police ಅನಾಮಧೇಯ ಗಂಡಸ್ಸಿನ ಶವ ಪತ್ತೆ

Bhadravati Police ಭದ್ರಾವತಿ ಶಿವಪುರ ಗ್ರಾಮದಲ್ಲಿ ಭದ್ರಾ ಬಲದಂಡೆ ನಾಲೆಯಲ್ಲಿ ಸುಮಾರು...

Chamber Of Commerce Shivamogga ರೈಲ್ವೆ ಸೌಕರ್ಯಗಳನ್ನು ಒದಗಿಸುವಂತೆ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಮನವಿ

Chamber Of Commerce Shivamogga ಶಿವಮೊಗ್ಗ ಜಿಲ್ಲೆಯ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ...

Shivaganga Yoga Centre ಸಾಧಕರನ್ನು ಗೌರವಿಸಿದಾಗ ಸಂಸ್ಥೆಯ ಹಿರಿಮೆ ವೃದ್ಧಿ

Shivaganga Yoga Centre ಸಮಾಜದ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸಮಾಜಮುಖಿ ಸೇವೆ...