ಭಾರತೀಯ ರೈಲ್ವೆ ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದೆ. ಇನ್ನು ಮುಂದೆ ಕನ್ಫರ್ಮ್ ಆಗದ ಅಥವಾ ಆರ್ ಎಸಿ ಟಿಕೆಟ್ ಅನ್ನು ಕನ್ಫರ್ಮ್ ಮಾಡಿಸಿಕೊಡಲು TTಯ ಹಿಂದೆ ಓಡಬೇಕಾಗಿಲ್ಲ. ಟಿಟಿ ಕೈಯಲ್ಲಿ ಹಿಡಿದಿರುವ ಟರ್ಮಿನಲ್ ಸಾಧನದ ಸಹಾಯದಿಂದ ಅದಾಗಿಯೇ ಟಿಕೆಟ್ ಕನ್ಫರ್ಮ್ ಆಗಲಿದೆ.
ಭಾರತೀಯ ರೈಲ್ವೆಯು ಈ ಹಿಂದೆ ಕೆಲವು ಪ್ರೀಮಿಯಂ ರೈಲುಗಳಲ್ಲಿ ಪ್ರಾಯೋಗಿಕವಾಗಿ ಟಿಟಿಗಳಿಗೆ HHT ಸಾಧನಗಳನ್ನು ನೀಡಿತ್ತು. ಈ ಸೇವೆ ಪ್ರಯಾಣಿಕರ ಮೆಚ್ಚುಗೆಗೂ ಪಾತ್ರವಾಗಿತ್ತು. ಈ ಯಶಸ್ಸಿನ ನಂತರ, ಭಾರತೀಯ ರೈಲ್ವೆಯು 559 ರೈಲುಗಳಲ್ಲಿ TT ಗೆ 5850 HHT ಸಾಧನಗಳನ್ನು ನೀಡಿದೆ. ರೈಲ್ವೇ ನೀಡಿದ ಮಾಹಿತಿಯ ಪ್ರಕಾರ, ಪ್ರೀಮಿಯಂ ರೈಲುಗಳ ಜೊತೆಗೆ ಎಲ್ಲಾ ಮೇಲ್ ಎಕ್ಸ್‌ಪ್ರೆಸ್ ರೈಲುಗಳಲ್ಲಿ ಕ್ರಮೇಣ ಸಾಧನವನ್ನು ಅಳವಡಿಸಲಾಗುವುದು.
ಚಲಿಸುತ್ತಿರುವ ರೈಲಿನಲ್ಲಿ ಒಂದು ದಿನದಲ್ಲಿ 523604 ರಿಸರ್ವೇಶನ್ ಮಾಡಲಾಗುತ್ತದೆ. ಇದರಲ್ಲಿ 242825 ಟಿಕೆಟ್‌ಗಳನ್ನು ಚಲಿಸುವ ರೈಲಿನಲ್ಲಿ HHT ಸಾಧನದೊಂದಿಗೆ ಪರಿಶೀಲಿಸಲಾಗಿದೆ. ಇವುಗಳಲ್ಲಿ 18 ಸಾವಿರಕ್ಕೂ ಹೆಚ್ಚು ಆರ್‌ಎಸಿಗಳು ಮತ್ತು ಒಂಬತ್ತು ಸಾವಿರಕ್ಕೂ ಹೆಚ್ಚು ವೇಟಿಂಗ್ ಟಿಕೆಟ್‌ಗಳನ್ನು ಖಚಿತಪಡಿಸಲಾಗಿದೆ.
ರೈಲ್ವೆ ಸಚಿವಾಲಯದ ಪ್ರಕಾರ, ಸಾಮಾನ್ಯ ದಿನಗಳಲ್ಲಿ ದಿನಕ್ಕೆ 12.5 ಲಕ್ಷ ರಿಸರ್ವೇಶನ್ ಇರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಮೇಲ್, ಎಕ್ಸ್‌ಪ್ರೆಸ್ ರೈಲುಗಳಲ್ಲಿ HHT ಸಾಧನಗಳೊಂದಿಗೆ ಟಿಕೆಟ್‌ಗಳನ್ನು ಪರಿಶೀಲಿಸಿದರೆ, ಕನ್ಫರ್ಮ್ ಟಿಕೆಟ್‌ಗಳ ಸಂಖ್ಯೆ ಹೆಚ್ಚಾಗುತ್ತದೆ.