ಫ್ರಾನ್ಸ್ ದೇಶವು ಈ ಬಾರಿ ಅತ್ಯಂತ ಭೀಕರ ಬರಗಾಲವನ್ನು ಎದುರಿಸುತ್ತಿದೆ ಎಂದು ಫ್ರಾನ್ಸ್ ಪ್ರಧಾನಿ ಎಲಿಜಬೆತ್ ಬೋರ್ನ್ ಎಚ್ಚರಿಸಿದ್ದಾರೆ.
ಇದರ ನಿರ್ವಹಣೆಗೆ ಸರ್ಕಾರಿ ಬಿಕ್ಕಟ್ಟು ನಿರ್ವಹಣಾ ಘಟಕವನ್ನು ಸಕ್ರಿಯಗೊಳಿಸುವುದಾಗಿ ತಿಳಿಸಿದ್ದಾರೆ.
ಈ ವರ್ಷದ ಬೇಸಿಗೆಯ ವೇಳೆ ಫ್ರಾನ್ಸ್‌ನಲ್ಲಿ 3ನೇ ಬಾರಿಗೆ ಬಿಸಿಗಾಳಿಯ ಅಲೆ ಮುಂದುವರಿದಿದೆ. ದೇಶದ ಅನೇಕ ಪ್ರದೇಶಗಳು ಬರಪೀಡಿತವಾಗಿವೆ. ಅನೇಕ ಪ್ರದೇಶಗಳು ನೀರಿನಿಂದ ವಂಚಿತವಾಗಿವೆ. ಇದರಿಂದ ನಮ್ಮ ರೈತರು, ನಮ್ಮ ಪರಿಸರ ವ್ಯವಸ್ಥೆ ಮತ್ತು ಜೀವ ವೈವಿಧ್ಯತೆ ತೊಂದರೆಗೀಡಾಗಿವೆ ಎಂದು ಬೋರ್ನ್ ಶುಕ್ರವಾರ ತಮ್ಮ ಲಿಖಿತ ಹೇಳಿಕೆಯಲ್ಲಿ ತಿಳಿಸಿದ್ದಾರೆ.