ಶಿವಮೊಗ್ಗ , ಚಿತ್ರದುರ್ಗ, ದಾವಣಗೆರೆ ಹಾಲು ಉತ್ಪಾದಕರ ಒಕ್ಕೂಟ ಶಿಮುಲ್ ಅಧ್ಯಕ್ಷ ಸ್ಥಾನಕ್ಕೆ ಜನವರಿ ಒಂದರಂದು ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದ ಶ್ರೀಪಾಲ್ ಅವರನ್ನು ಆ ಸಿಂಧುಗೊಳಿಸಿದ್ದ ಹೈಕೋರ್ಟ್ ಏಕ ಸದಸ್ಯ ಪೀಠದ ಆದೇಶವನ್ನು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳನ್ನು ಒಳಗೊಂಡ ದ್ವಿಸದಸ್ಯ ಪೀಠ ರದ್ದುಗೊಳಿಸಿದೆ.
ಹೀಗಾಗಿ ,ನಿಸರಾಣಿ ಎನ್.ಎಚ್. ಶ್ರೀಪಾದ್ ರಾವ್ ಮತ್ತೆ ಶಿಮುಲ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಸ್ಥಳೀಯ ಹಾಲು ಉತ್ಪಾದಕರ ಸಹಾಯಕ ಸಂಘಗಳಲ್ಲಿ ಬರುವ ಲಾಭವನ್ನು ಮೀಸಲು ನಿಧಿಯಾಗಿ ಸಹಕಾರ ಬ್ಯಾಂಕುಗಳಲ್ಲಿ ಬಾಂಡ್ ರೂಪದಲ್ಲಿ ಇಡಬೇಕಾದ ನಿಯಮ ಉಲ್ಲಂಘಿಸಿದ ಆಪಾದನೆಯ ಮೇರೆಗೆ ಚೆನ್ನಗಿರಿ ತಾಲೂಕು ಕಂಚುಗಾರನಹಳ್ಳಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾಗಿದ್ದ ಎಚ್.ಕೆ.ಬಸಪ್ಪ, ಶಿಕಾರಿಪುರ ತಾಲೂಕು ಹಿರೇಜಮ್ಮೂರು ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾಗಿದ್ದ ಟಿ. ಶಿವಶಂಕರಪ್ಪ ಅವರನ್ನು ನಿರ್ದೇಶನ ಸ್ಥಾನದಿಂದ ವಜಾಗೊಳಿಸಲಾಗಿತ್ತು.
ಇದರ ಪರಿಣಾಮ, ಶಿಮುಲ್ ನಲ್ಲಿ ಅಧಿಕಾರಿಗಳು ಸೇರಿ ಬಿಜೆಪಿ ಬೆಂಬಲಿತರ ಸಂಖ್ಯೆ 8ಕ್ಕೆ ಏರಿಕೆಯಾಗಿತ್ತು. ಅದೇ ಕಾಂಗ್ರೆಸ್ ಬೆಂಬಲಿತರ ಸಂಖ್ಯೆಯು ಏಳಕ್ಕೆ ಕುಸಿತ ಕಂಡಿತ್ತು .
