Friday, November 22, 2024
Friday, November 22, 2024

ವಾಹನಗಳ ಮೇಲೆ ಬಿಬಿಎಂಪಿ ಬೋರ್ಡು ನಿಷೇಧಿಸಿ ಪಾಲಿಕೆ ಆದೇಶ

Date:

ವಾಹನಗಳ ಮೇಲೆ ಬಿಬಿಎಂಪಿ ಎಂದು ನಾಮಫಲಕ ಅಳವಡಿಸುವುದನ್ನು ನಿಷೇಧಿಸಿ, ಬಿಬಿಎಂಪಿ ಆದೇಶಿಸಿದೆ. ಈ ಮೂಲಕ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು, ನೌಕರರು ತಮ್ಮ ವಾಹನಗಳ ಮೇಲೆ ಅಳವಡಿಸುತ್ತಿದ್ದಂತ ನಾಮಫಲಕ ನಿಷೇಧಿಸಿ ಆದೇಶಿಸಿದೆ.

ಈ ಸಂಬಂಧ ಬಿಬಿಎಂಪಿಯ ಮುಖ್ಯ ಆಯುಕ್ತರ ನಿರ್ದೇಶನದ ಮೇರೆಗೆ ಘನತ್ಯಾಜ್ಯ ವಿಭಾಗ ಮತ್ತು ಯೋಜನಾ ವಿಭಾಗದ ವಿಶೇಷ ಆಯುಕ್ತರು ಸುತ್ತೋಲೆ ಹೊರಡಿಸಿದ್ದು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಘನತ್ಯಾಜ್ಯ ಸಂಗ್ರಹಣೆ, ಸಾಗಾಣೆ ಹಾಗೂ ವಿಲೇವಾರಿಯಲ್ಲಿ ಗುತ್ತಿಗೆದಾರರ ಕಾರ್ಯನಿರ್ವಹಿಸುತ್ತಿರುವ ವಾಹನಗಳ ಮೇಲೆ ಗುತ್ತಿಗೆದಾರರು ಪಾಲಿಕೆಯ ಮೂಲಕ ಬಿಬಿಎಂಪಿ ಸೇವೆಯಲ್ಲಿ,ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಎಂದು ನಮೂದಿಸಿಕೊಂಡು ನಾಮಫಲಕಗಳನ್ನು ಅನಧಿಕೃತವಾಗಿ ಹಾಕಿಕೊಂಡು ಕಾರ್ಯನಿರ್ವಹಿಸುತ್ತಿರುವುದು ಗಮನಿಸಲಾಗಿರುತ್ತದೆ ಎಂದಿದ್ದಾರೆ.

ಪಾಲಿಕೆ ವತಿಯಿಂದ ಕಾರ್ಯನಿರ್ವಹಿಸುವ ಕಾಮಗಾರಿಗಳಿಗೆ ಅವಶ್ಯವಿರುವ ನಿರ್ಮಾಣ ಸಾಮಗ್ರಿಗಳ ಸಾಗಾಣೆ ಮಾಡುವ ವಾಹನಗಳ‌ ಮೇಲೆ ಪಾಲಿಕೆಯ ಸೇವೆಯಲ್ಲಿ ಎಂದು ನಮೂದಿಸಿಕೊಂಡು ಅಥವಾ ನಾಮಫಲಕಗಳನ್ನು ಅನಧಿಕೃತವಾಗಿ ಹಾಕಿಕೊಂಡು ಕಾರ್ಯನಿರ್ವಹಿಸುತ್ತಿರುವುದು ಗಮನಿಸಲಾಗಿರುತ್ತದೆ ಎಂದು ಹೇಳಿದ್ದಾರೆ.

ಇದರಿಂದ ವಾಹನಗಳ ಅಪಘಾತಗಳಾದಾಗ ಬಿಬಿಎಂಪಿಯ ವಾಹನದಿಂದ ಅಪಘಾತವಾಗುತ್ತಿದೆ ಎಂದು ದಿನಪತ್ರಿಕೆಗಳಲ್ಲಿ ಅಥವಾ ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿರುವುದರಿಂದ ಪಾಲಿಕೆಯ ಮೇಲೆ ತಪ್ಪು ಪರಿಕಲ್ಪನೆ ಮೂಡುತ್ತಿರುತ್ತದೆ.

ಹಾಗಾಗಿ,ಮುಂದಿನ ದಿನಗಳಲ್ಲಿ ವಾಹನಗಳ‌ ಮೇಲೆ ಅನಧಿಕೃತವಾಗಿ ಪಾಲಿಕೆಯ ಹೆಸರನ್ನು ನಮೂದಿಸುವುದು ಅಥವಾ ನಾಮಫಲಕಗಳನ್ನು ಹಾಕುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿರುತ್ತದೆ‌ ಎಂದು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Department of Cooperation ಹಿರಿಯ ಸಹಕಾರಿ ಧುರೀಣ ಕೊಪ್ಪದ ಎಸ್.ಎನ್.ವಿಶ್ವನಾಥ್ ಗೆ ‘ ಸಹಕಾರಿ ರತ್ನ’ ಪ್ರಶಸ್ತಿ.

Department of Cooperation ಕರ್ನಾಟಕ ಸರ್ಕಾರದ ಕರ್ನಾಟಕ ಸಹಕಾರ ಮಹಾಮಂಡಲ ದ...

Kasturba Girls Junior College ಮಕ್ಕಳ ಪ್ರತಿಭೆ ಅನಾವರಣಗೊಳಿಸುವ ಪ್ರತಿಭಾ ಕಾರಂಜಿಗೆ ಇನ್ನಷ್ಟು ಶಕ್ತಿ ತುಂಬೋಣ- ಶಾಸಕ ಚನ್ನಬಸಪ್ಪ

Kasturba Girls Junior College ವೈವಿಧ್ಯತೆಯನ್ನು ಹೊಂದಿರುವ ನಮ್ಮ ರಾಷ್ಟ್ರದ ಸಂಸ್ಕೃತಿಯನ್ನು...