ನಿವೇದಿತಾ ಗೌಡ ಮಿಸೆಸ್ ಇಂಡಿಯಾ 2022 ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಮಿಸೆಸ್ ಇಂಡಿಯಾ ಇಂಕ್ನ ಪೀಪಲ್ಸ್ ಚಾಯ್ಸ್ 2022ರ ವಿಜೇತರಾಗಿ ನಿವೇದಿತಾ ಗೌಡ ಹೊರಹೊಮ್ಮಿದ್ದಾರೆ. ಈ ಬಗ್ಗೆ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ನಿವೇದಿತಾ ಪೋಸ್ಟ್ ಮಾಡಿಕೊಂಡಿದ್ದಾರೆ.
ನಿವೇದಿತಾ ಗೌಡ ಗಾಯಕ ಚಂದನ್ ಶೆಟ್ಟಿ ಪತ್ನಿ. ಇವರದ್ದು ಒಂದು ಯೂಟ್ಯೂಬ್ ಚಾನೆಲ್ ಕೂಡ ಇದೆ. ಅದರಲ್ಲಿ ಅವರು ಹೋಮ್ ಟೂರ್, ಬಟ್ಟೆ ಕಲೆಕ್ಷನ್ ಹಾಗೂ ಬ್ಯಾಗ್ ಕಲೆಕ್ಷನ್ ಸೇರಿದಂತೆ ಹಲವಾರು ರೀತಿಯ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದರು.