ಜನಾಕ್ರೋಶಕ್ಕೆ ಕೇಂದ್ರ ಸರ್ಕಾರ ಮಣಿದಿದ್ದು, ಅಕ್ಕಿ, ಗೋಧಿ ಸೇರಿದಂತೆ 14 ವಸ್ತುಗಳಿಗೆ ಜಿಎಸ್‍ಟಿ ಹೇರುವುದಿಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಗೋಧಿ, ಮೊಸರು, ಅಥವಾ ಲಸ್ಸಿ, ಅಕ್ಕಿ, ಓಟ್ಸ್, ಹಿಟ್ಟು, ತೊಗರಿಬೆಳೆ, ಮಂಡಕ್ಕಿ, ರವೆ, ಜೋಳ, ಸಣ್ಣ ಗೋಧಿಗಳ ಮೇಲಿನ ಜಿಎಸ್‍ಟಿ ವಿನಾಯಿತಿಯನ್ನು ನೀಡಲಾಗಿದೆ. ಆದರೆ ಇದಕ್ಕೆ ಕಲವೊಂದು ಷರತ್‍ನ್ನು ವಿಧಿಸಲಾಗದೆ. ಈ ಎಲ್ಲಾ ವಸ್ತುಗಳ ಮೇಲೆ ಲೇಬಲ್ ಇದ್ದರೇ ಅಥವಾ ಪ್ಯಾಕ್ ಮಾಡಿದರೆ ಜಿಎಸ್‍ಟಿ ವಿನಾಯಿತಿ ಅನ್ವಯಿಸುವುದಿಲ್ಲ ಎಂದು ತಿಳಿಸಿದ್ದಾರೆ.
ಬೇಳೆಕಾಳುಗಳು, ಧಾನ್ಯಗಳು, ಹಿಟ್ಟು ಮುಂತಾದ ನಿರ್ದಿಷ್ಟ ಆಹಾರ ಪದಾರ್ಥಗಳ ಮೇಲೆ ಜಿಎಸ್‌ಟಿ ವಿಧಿಸುವ ಬಗ್ಗೆ ತಪ್ಪು ಕಲ್ಪನೆಗಳಿವೆ. ಇದು ಜಿಎಸ್‌ಟಿ ಕೌನ್ಸಿಲ್‌ನ ಸರ್ವಾನುಮತದ ನಿರ್ಧಾರವಾಗಿದ್ದು, ಜೂನ್ 28ರಂದು ಚಂಡೀಗಢದಲ್ಲಿ ನಡೆದ 47ನೇ ಸಭೆಯಲ್ಲಿ ದರ ತರ್ಕಬದ್ಧಗೊಳಿಸುವಿಕೆಯ ಕುರಿತು ಈ ವಿಷಯವನ್ನು ಮಂಡಿಸುವಾಗ ಎಲ್ಲಾ ರಾಜ್ಯಗಳು ಜಿಎಸ್‌ಟಿ ಕೌನ್ಸಿಲ್‌ನಲ್ಲಿ ಉಪಸ್ಥಿತರಿದ್ದರು ಎಂದು ತಿಳಿಸಿದ್ದಾರೆ.