ಆರ್ಥಿಕ ಸಂಕಷ್ಟದಿಂದ ತತ್ತರಿಸಿರುವ ಶ್ರೀಲಂಕಾ ಹಾದಿಯಲ್ಲೇ 12 ರಾಷ್ಟ್ರಗಳು ಸಾಗಿವೆ ಎಂಬ ಆತಂಕಕಾರಿ ವರದಿ ತಿಳಿಸಿದೆ.
ಸಾಲದ ಸುಳಿಗೆ ಸಿಲುಕಿ ದಿವಾಳಿಯಾಗಿರುವ ಶ್ರೀಲಂಕಾದಲ್ಲಿ ತುರ್ತು ಪರಿಸ್ಥಿತಿ ಹೇರಲಾಗಿದೆ. ನಾಗರಿಕರ ಆಕ್ರೋಶಕ್ಕೆ ಬೆದರಿ ಅಧ್ಯಕ್ಷರೇ ವಿದೇಶಕ್ಕೆ ಪಲಾಯನಗೈದಿದ್ದಾರೆ.
ಸಾಲದ ಸುಳಿಗೆ ಸಿಲುಕಿರುವುದು ಕೇವಲ ಶ್ರೀಲಂಕಾ ಮಾತ್ರವಲ್ಲ. ಸುಮಾರು 12 ರಾಷ್ಟ್ರಗಳು ಈ ಪರಿಸ್ಥಿತಿ ಎದುರಿಸುತ್ತಿವೆ. ರಷ್ಯಾ, ಲೆಬನಾನ್, ಸುರಿನೇಮ್, ಜಾಂಬಿಯಾ ದೇಶಗಳು ಸಾಲದ ಸುಳಿಗೆ ಸಿಲುಕಿವೆ. ಬೈಲೋರಷ್ಯಾ ಬಹುಪಾಲು ದುಸ್ಥಿತಿ ಎದುರಿಸುತ್ತಿದೆ.
ಖರೀದಿ ಮೊತ್ತದಲ್ಲಿ ಹೆಚ್ಚಳ, ಹಣದುಬ್ಬರ ಮತ್ತು ಆರ್ಥಿಕ ಹಿಂಜರಿತದಿಂದ ಸಾಲದ ಪ್ರಮಾಣ ಹೆಚ್ಚಳ, ಸಾಮಾನ್ಯವಾಗಿ 1000 ಪಾಯಿಂಟ್ಸ್ ಸಾಲ ಇದ್ದರೆ ಪರಿಸ್ಥಿತಿ ನಿಭಾಯಿಸಬಹುದು. ಆದರೆ, ಸುಮಾರು 12 ರಾಷ್ಟ್ರಗಳ ಸಾಲದ ಪ್ರಮಾಣ 400 ಶತಕೋಟಿ ದಾಟಿದೆ. ಅತೀ ಹೆಚ್ಚು ಸಾಲ ಮಾಡಿದ ದೇಶಗಳಲ್ಲಿ ಅರ್ಜೆಂಟೀನಾ ಮೊದಲ ಸ್ಥಾನದಲ್ಲಿದೆ.150 ಶತಕೋಟಿ ಡಾಲರ್ ಸಾಲ ಮಾಡಿದೆ. ಇಕ್ವೆಡಾರ್ ಮತ್ತು ಈಜಿಪ್ಟ್ ಕ್ರಮವಾಗಿ 40 ಹಾಗೂ 45 ಶತಕೋಟಿ ಡಾಲರ್ ಸಾಲದ ಸುಳಿಗೆ ಸಿಲುಕಿವೆ.
ರಷ್ಯಾ ದಾಳಿಗೆ ತತ್ತರಿಸಿರುವ ಉಕ್ರೇನ್, ಟುನೆಶಿಯಾ ಕೂಡ ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ಜಾಗತಿಕ ಮಟ್ಟದಲ್ಲಿ ಆರ್ಥಿಕ ಹಿಂಜರಿತ ಮತ್ತು ವ್ಯಾಪಾರ ವಹಿವಾಟು ಸುಧಾರಿಸದೇ ಇದ್ದರೆ ಈ ರಾಷ್ಟ್ರಗಳು ಕೂಡ ಶ್ರೀಲಂಕಾ ಸ್ಥಿತಿಯನ್ನೇ ಎದುರಿಸುವ ಸಾಧ್ಯತೆ ಇದೆ ಎಂದು ವರದಿ ಎಚ್ಚರಿಸಿದೆ.