ಶ್ರೀಲಂಕಾ ಅಧ್ಯಕ್ಷ ಗೋಟಬಯ ರಾಜಪಕ್ಸೆ ಕೊನೆಗೂ ರಾಜೀನಾಮೆ ಕೊಟ್ಟಿದ್ದಾರೆ. ದೇಶದಲ್ಲಿ ಭುಗಿಲೆದ್ದ ಆರ್ಥಿಕ ಬಿಕಟ್ಟನಿಂದಲೇ ಜನ ರೊಚ್ಚಿಗೆದ್ದಿದ್ದರು. ರಾಜೀನಾಮೆಗೆ ಆಗ್ರಹಿಸಿ ಗೋಟಬಯಾ ಅರಮನೆಗೂ ನುಗಿದ್ದರು.
ಪ್ರತಿಭಟನಾಕಾರರ ಒತ್ತಾಯಕ್ಕೆ ಅಧ್ಯಕ್ಷ ಗೋಟಬಯ ರಾಜಪಕ್ಸೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಮಾಜಿ ಪ್ರಧಾನಿ ರೆನಿಲ್ ವಿಕ್ರಮ್‌ಸಿಂಘಿ ತಿಳಿಸಿದ್ದಾರೆ. ಆದರೆ, ಜುಲೈ-13 ರಂದು ಅಧ್ಯಕ್ಷ ಗೋಟಬಯ ರಾಜಪಕ್ಸೆ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಾರೆ ಎಂದು ಸ್ಪೀಕರ್ ಮಹಿಂದ ಯಾಪಾ ಅಬೇವರ್ಧನ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಸಾವಿರಾರು ಜನ ರಾಜಭವನಕ್ಕೆ ನುಗ್ಗಿ ದಾಂಧೆಲೆ ಎಬ್ಬಿಸಿದ್ದಾರೆ. ಈ ಹಿನ್ನೆಲೆಯಲ್ಲಿಯೇ ಗೋಟಬಯ ರಾಜಪಕ್ಸೆ ರಾಜೀನಾಮೆ ನೀಡಿದ್ದಾರೆ.