Thursday, March 26, 2026
Thursday, March 26, 2026

ಸದ್ಯದಲ್ಲೇ ಜನಸಂಖ್ಯಾ ಬಾಹುಳ್ಯದಲ್ಲಿ ಭಾರತಪ್ರಥಮವಾಗಲಿದೆ

Date:

ಚೀನಾವನ್ನು ಹಿಂದಿಕ್ಕಿ ಮುಂದಿನ ವರ್ಷ ಭಾರತ ಜಗತ್ತಿನ ಅತ್ಯಂತ ಹೆಚ್ಚು ಜನಸಂಖ್ಯೆಯ ದೇಶವಾಗಲಿದೆ ಎಂದು ವಿಶ್ವಸಂಸ್ಥೆಯ ವರದಿ ತಿಳಿಸಿದೆ. ನವೆಂಬರ್ 2022ರ ವೇಳೆಗೆ ಜಗತ್ತಿನ ಜನಸಂಖ್ಯೆ 8 ಬಿಲಿಯನ್‍ಗೆ ತಲುಪಲಿದೆ ಎಂದೂ ವರದಿ ಅಂದಾಜಿಸಿದೆ.ವಿಶ್ವ ಸಂಸ್ಥೆಯ ಆರ್ಥಿಕ, ಸಾಮಾಜಿಕ ವ್ಯವಹಾರಗಳ, ಜನಸಂಖ್ಯಾ ವಿಭಾಗ ಇಂದು ಬಿಡುಗಡೆಗೊಳಿಸಿದೆ ವಲ್ರ್ಡ್ ಪಾಪ್ಯುಲೇಶನ್ ಪ್ರಾಸ್ಪೆಕ್ಟ್ಸ್ 2022 ವರದಿಯಲ್ಲಿ ಈ ಮಾಹಿತಿಯಿದೆ.

2023ರೊಳಗೆ ಜನಸಂಖ್ಯೆಯಲ್ಲಿ ಚೀನಾವನ್ನು ಹಿಂದಿಕ್ಕಲಿರುವ ಭಾರತವು 2050ರ ವೇಳೆಗೆ 1.668 ಬಿಲಿಯನ್ ಜನಸಂಖ್ಯೆಯನ್ನು ಹೊಂದಬಹುದು ಎಂದು ಅಂದಾಜಿಸಲಾಗಿದ್ದು ಈ ವೇಳೆ ಚೀನಾದ ಜನಸಂಖ್ಯೆ 1.317 ಬಿಲಿಯನ್ ಆಗಲಿದೆ.

ಜಗತ್ತಿನ ಜನಸಂಖ್ಯೆ 2030ರ ವೇಳೆಗೆ 8.5 ಬಿಲಿಯನ್ ಆಗಲಿದೆ ಹಾಗೂ 2050ರ ವೇಳೆಗೆ 9.7 ಬಿಲಿಯನ್ ಆಗಲಿದೆ ಎಂದು ವರದಿ ಅಂದಾಜಿಸಿದೆ. 2050ರ ವೇಳೆಗೆ ಜಗತ್ತಿನಲ್ಲಿ ಏರಿಕೆಯಾಗಲಿರುವ ಜನಸಂಖ್ಯೆಯ ಅರ್ಧದಷ್ಟು ಕಾಂಗೋ ಗಣರಾಜ್ಯ, ಈಜಿಪ್ಟ್, ಇಥಿಯೋಪಿಯಾ, ಭಾರತ, ನೈಜೀರಿಯಾ, ಪಾಕಿಸ್ತಾನ, ಫಿಲಿಪ್ಪೈನ್ಸ್ ಮತ್ತು ತಾಂಜಾನಿಯಾದಲ್ಲಿರಲಿದೆ.

2022ರಲ್ಲಿ ಭಾರತದ ಜನಸಂಖ್ಯೆ 1.412 ಬಿಲಿಯನ್ ಆಗಿದ್ದರೆ ಚೀನಾದ ಜನಸಂಖ್ಯೆ 1.426 ಬಿಲಿಯನ್ ಆಗಿದೆ ಎಂದು ವರದಿ ಹೇಳಿದೆ.

ಜಗತ್ತಿನಲ್ಲಿ ಈ ವರ್ಷ ಅತ್ಯಂತ ಹೆಚ್ಚು ಜನಸಂಖ್ಯೆಯಿರುವ ಪ್ರಾಂತ್ಯ ಪೂರ್ವ ಮತ್ತು ವಾಯುವ್ಯ ಏಷ್ಯಾ ಆಗಿದ್ದು ಈ ಪ್ರದೇಶದ ಜನಸಂಖ್ಯೆ2.3 ಬಿಲಿಯನ್ ಆಗಿದ್ದು ಇದು ಜಗತ್ತಿನ ಒಟ್ಟು ಜನಸಂಕ್ಯೆಯ ಶೇ 29ರಷ್ಟಾಗಿದೆ. ಮಧ್ಯ ಮತ್ತು ದಕ್ಷಣ ಏಷ್ಯಾದ ಜನಸಂಖ್ಯೆ 2.1 ಬಿಲಿಯ್ ಆಗಿದ್ದು ಜಗತ್ತಿನ ಒಟ್ಟು ಜನಸಂಖ್ಯೆಯ ಶೇ. 26ರಷ್ಟಾಗಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Prabhuling Kavalikatti ಅಸ್ಪೃಶ್ಯತೆ ನಿರ್ಮೂಲನೆಗೆ ಒತ್ತು ಜೊತೆಗೆ ಕಾಯಿದೆಯಡಿ ಕಟ್ಟುನಿಟ್ಟಿನ ಕ್ರಮ- ಪ್ರಭುಲಿಂಗ ಕವಳಿಕಟ್ಟಿ.

Prabhuling Kavalikatti ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರ ಮೇಲಿನ ದೌರ್ಜನ್ಯ ತಡೆ...

MESCOM ಮಾರ್ಚ್ 26. ಸಾಗರ ಮೆಸ್ಕಾಂ ಗ್ರಾಮೀಣ ಉಪವಿಭಾಗ ಕಛೇರಿಯಲ್ಲಿ ಜನ ಸಂಪರ್ಕ ಸಭೆ.

MESCOM ಸಾಗರ ಮೆಸ್ಕಾಂ ಗ್ರಾಮೀಣ ಉಪವಿಭಾಗ ಕಛೇರಿಯಲ್ಲಿ ಮಾ 26 ರಂದು...

World Tuberculosis Day ಕ್ಷಯರೋಗಿಗಳು ದುಶ್ಚಟಗಳಿಂದ ದೂರವಿದ್ದು ,ಪೌಷ್ಠಿಕ ಆಹಾರ ಸೇವಿಸಿದರೆ ರೋಗ ವಾಸಿ- ಡಾ.ಕೆ.ಎಸ್.ನಟರಾಜ್.

World Tuberculosis Day ಸೂಕ್ತ ಚಿಕಿತ್ಸೆಯಿಂದ ಕ್ಷಯರೋಗದಿಂದ ಸಂಪೂರ್ಣರಾಗಿ ಗುಣಮುಖರಾಗಬಹುದಾಗಿದ್ದು, ಎಲ್ಲಾ...

Shimoga News ವಿದ್ಯಾರ್ಥಿಗಳು ಪುಸ್ತಕ ಓದುವ ಹವ್ಯಾಸ ಬೆಳಿಸಿಕೊಳ್ಳಬೇಕು- ಎನ್.ಪ್ರಕಾಶ್

Shivamogga News ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳ ಕೌಶಲ್ಯವನ್ನು ಹೆಚ್ಚಿಸಲು ಮತ್ತು ಉನ್ನತ...